ಪಣಜಿ: ತೀವ್ರ ಕುತೂಹಲ ಕೆರಳಿಸಿರುವ ಹಿಮಾಚಲ ಪ್ರದೇಶ (Himachal Pradesh), ಗುಜರಾತ್ ವಿಧಾನಸಭೆ ಚುನಾವಣೆ (Gujrath Vidhanasabha Election) ಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು ಕೇಂದ್ರ ಚುನಾವಣಾ ಆಯೋಗ (Election Commission) ಎಲ್ಲ ತಯಾರಿ ಮಾಡಿಕೊಂಡಿದೆ. ಚುನಾವಣೊತ್ತರ ಸಮೀಕ್ಷೆಗಳಲ್ಲಿ ಗುಜರಾತ್ ನಲ್ಲಿ ಬಿಜೆಪಿ ಆಡಳಿತಕ್ಕೆ ಬಂದ್ರೆ ಹಿಮಾಚಲ ಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್ ಇದೆ ಎಂದು ಹೇಳಿವೆ. ಹೀಗಾಗಿ ಇಂದು ಪ್ರಕಟವಾಗಲಿರುವ ಎರಡು ರಾಜ್ಯಗಳ ಜನಾದೇಶ ಎಲ್ಲರ ಗಮನ ಸೆಳೆಯಲಿದೆ.
ಕಳೆದೊಂದು ತಿಂಗಳನಿಂದ ದೇಶದ ಜನರ ಗಮನ ಸೆಳೆದಿದ್ದು ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಬೆಳಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತ ಪತ್ರಗಳನ್ನು 8:30 ರ ಬಳಿಕ ಇವಿಎಂ ಮತ ಎಣಿಕೆ ಆರಂಭವಾಗಲಿದೆ.
Advertisement
Advertisement
ಮತ ಎಣಿಕೆ ಹಿನ್ನಲೆ ಕೇಂದ್ರ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗಗಳೊಂದಿಗೆ ಎಲ್ಲ ತಯಾರಿ ಮಾಡಿಕೊಂಡಿದೆ. ಗುಜರಾತ್ ನ 182 ಕ್ಷೇತ್ರಗಳು ಮತ್ತು ಹಿಮಾಚಲ ಪ್ರದೇಶದ 68 ಕ್ಷೇತ್ರಗಳ ಮತ ಎಣಿಕೆಗಾಗಿ ಆಯೋಗ 116 ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಎರಡು ರಾಜ್ಯಗಳ ಜೊತೆಗೆ ಒಡಿಶಾ (Odisha), ರಾಜಸ್ಥಾನ, ಬಿಹಾರ, ಛತ್ತೀಸ್ಗಢದಲ್ಲಿ ತಲಾ ಒಂದು ಮತ್ತು ಉತ್ತರ ಪ್ರದೇಶದ ಎರಡು ವಿಧಾನಸಭೆ ಕ್ಷೇತ್ರಗಳಿಗೆ ಹಾಗೂ ಒಂದು ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯ ಫಲಿತಾಂಶವನ್ನು ಆಯೋಗ ಪ್ರಕಟಿಸಲಿದೆ.
Advertisement
ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತಸ ಭದ್ರತಾ ವ್ಯವಸ್ಥೆ ಮಾಡಲಾಗಿದ್ದು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆಗೆ ದಕ್ಕಬಾರದಂತೆ ನೋಡಿಕೊಳ್ಳಲು ಮತ ಎಣಿಕೆ ಕೇಂದ್ರಗಳ ಸುತ್ತಲೂ ಸೆಕ್ಷನ್ 144 CRPC ಅನ್ನು ವಿಧಿಸಿದೆ.
Advertisement
ಮೋದಿ ತವರು ಗುಜರಾತ್ ನಲ್ಲಿ ಗೆಲವು ಯಾರದು..?: ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ಎನ್ನುವ ಕಾರಣಕ್ಕೆ ಗುಜರಾತ್ ಎಲ್ಲರ ಗಮನ ಸೆಳೆದಿದೆ. ಗುಜರಾತ್ ನಲ್ಲಿ ನರೇಂದ್ರ ಮೋದಿ (Narendra Modi) ಅವರ ಅಶ್ವಮೇಧ ಯಾಗವನ್ನು ತಡೆದು ನಿಲ್ಲಿಸುವುರ್ಯಾರು ಎನ್ನುವುದು ಎಲ್ಲರ ಕುತೂಹಲವಾಗಿದೆ. ಆಡಳಿತ ವಿರೋಧಿ ಅಲೆಯನ್ನು ಮೀರಿ ಬಿಜೆಪಿ (BJP) ಉತ್ತಮ ಪ್ರಯತ್ನ ಮಾಡಿದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿದೆ ಎಂದು ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಗೆದ್ದರೆ, ಆಪ್ ಕಮಾಲ್ ಗುಜರಾತ್ ನಡೆದಿಲ್ಲ ಅದಾಗ್ಯೂ ಖಾತೆ ತೆರೆಯುವಲ್ಲಿ ಯಶಸ್ವಿಯಾಗಲಿದೆ ಎಂದು ಭವಿಷ್ಯ ನುಡಿದಿವೆ.
ಬಹುತೇಕ ರಾಷ್ಟ್ರೀಯ ಮಾಧ್ಯಮಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಿದ್ದು 40 – 46% ವರೆಗೂ ಮತ ಪ್ರಮಾಣ ಪಡೆಯಬಹುದು ಎಂದು ಹೇಳಿವೆ. ಕಾಂಗ್ರೆಸ್ 20-30% ಹಾಗೂ ಆಪ್ 10 – 15 % ಮತಗಳು ಪಡೆಯಬಹುದು ಎನ್ನಲಾಗಿದೆ. ಕಳೆದ ಬಾರಿ ಪಾಟಿದಾರ್ ಹೋರಾಟದಿಂದ ಉತ್ತಮ ಫಲಸು ತೆಗೆದಿದ್ದ ಕಾಂಗ್ರೆಸ್ ಗೆ ಈ ಬಾರಿ ಗಟ್ಟಿಯಾದ ಅಸ್ತ್ರವೇ ಇಲ್ಲದಂತಾಗಿದೆ. ಬೆಲೆ ಏರಿಕೆ ನಿರುದ್ಯೋಗದ ಮೇಲೆ ಇಟ್ಟು ಅಖಾಡಕ್ಕೆ ಇಳಿದ ಕೈಪಡೆಗೆ ಆಪ್ ದೊಡ್ಡ ಪೆಟ್ಟು ನೀಡಿರುವುದು ಸಮೀಕ್ಷೆಯಲ್ಲಿ ಗೊತ್ತಾಗುತ್ತಿದೆ. ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದು ಖಾತೆ ತೆರೆಯುವ ಲಕ್ಷಣಗಳು ಕಂಡು ಬಂದಿವೆ.
ಉಪ ಚುನಾವಣೆಯಲ್ಲಿ ಸೋತಿದ್ದ ಜೆ.ಪಿ ನಡ್ಡಾಗೆ ಪ್ರತಿಷ್ಟೆಯ ಪ್ರಶ್ನೆ: ಇನ್ನೂ ಪಹಾಡಿ ರಾಜ್ಯ ಅಂತ್ಲೆ ಕರೆಸಿಕೊಳ್ಳುವ ಹಿಮಾಚಲ ಪ್ರದೇಶದಲ್ಲಿ ಈ ಬಾರಿ ಗೆಲ್ಲೊದ್ಯಾರು ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ರಾಜ್ಯದಲ್ಲಿ ಪ್ರತಿ ಐದು ವರ್ಷಗಳಿಗಮೊಮ್ಮೆ ಜನರು ಬೇರೆ ಬೇರೆ ಪಕ್ಷಗಳಿಗೆ ನೀಡುತ್ತಾ ಬಂದಿದ್ದಾರೆ. ಉತ್ತರಾಖಂಡ ನಲ್ಲೂ ಇದೇ ಸಂಸ್ಕೃತಿ ಇತ್ತು, ಅದನ್ನು ಬದಲಿಸಿದ್ದ ಬಿಜೆಪಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಹಾಗೆಯೇ ಹಿಮಾಚಲ ಪ್ರದೇಶದಲ್ಲೂ ಸತತ ಎರಡನೇ ಬಾರಿ ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ ಬಿಜೆಪಿ ನಾಯಕರಿದ್ದಾರೆ.
ವಿಶೇಷವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J P Nadda) ಮುಂದೆ ಈ ಸವಾಲಿದ್ದು, ಈ ಚುನಾವಣೆ ಗೆಲ್ಲುವ ಮೂಲಕ ಉಪ ಚುನಾವಣೆ ಕಹಿ ಮರೆಯಬೇಕಿದೆ. ಆದರೆ ಸಮೀಕ್ಷೆಗಳು ಮಾತ್ರ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ (Congress) ಮತ್ತು ತೀವ್ರ ಪೈಪೋಟಿ ಇದೆ. ಕಡೆ ಘಳಿಗೆಯಲ್ಲಿ ಯಾರು ಬೇಕಾದ್ರು ಅಧಿಕಾರ ಹಿಡಿಯಬಹುದು ಎಂದು ಭವಿಷ್ಯ ನುಡಿದಿವೆ.
ಬಹುತೇಕ ಸಮೀಕ್ಷೆಗಳು ನೇರಾ ನೇರ ಫೈಟ್ ತೋರಿಸಿದ್ರು, ಕೆಲವು ಸಮೀಕ್ಷೆಗಳು ಬಿಜೆಪಿ ಸರ್ಕಾರ ರಚನೆ ಮಾಡುವ ಸಣ್ಣ ಸಾಧ್ಯತೆಗಳನ್ನು ತೋರಿಸಿವೆ. ಈ ಹಿನ್ನೆಲೆ ಕಾಂಗ್ರೆಸ್ ಕೂಡಾ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದು, ಇಂದಿನ ಫಲಿತಾಂಶಕ್ಕಾಗಿ ಕಾದು ಕುಳಿತಿದೆ. ಈ ನಡುವೆ ತೀವ್ರ ಹೋರಾಟ ನಡೆಸಿದ್ದ ಆಪ್ ಸಮೀಕ್ಷೆಗಳಲ್ಲಿ ಫೆಲ್ಯೂವರ್ ಆಗಿರುವುದು ಕಂಡು ಬಂದರೂ, ಸಮೀಕ್ಷೆಗಳು ಸುಳ್ಳಾಗಲಿದ್ದು ನಾವು ಅಧಿಕಾರ ಹಿಡಿಯಲಿದ್ದೇವೆ ಎಂದು ಹೇಳಿಕೊಂಡಿದೆ.