ಬೆಂಗಳೂರು: ರಾಜ್ಯಪಾಲ ವಿ.ಆರ್. ವಾಲಾ ಸಾಹೇಬ್ರು ತಮ್ಮ ಪ್ರೈವೇಟ್ ಸೆಕ್ರೆಟರಿಯನ್ನಾಗಿ ನೇಮಕ ಮಾಡಿಕೊಡಿರೋದು ಯಾರನ್ನು ಗೊತ್ತೆ? ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ.
ರಾಜ್ಯಪಾಲರ ಪಿಎ ಆಗಿರೋದು ಗುಜರಾತ್‍ನ ಮಾರಿಟೈಮ್ ಬೋರ್ಡ್‍ನಲ್ಲಿ ಡಾಟಾ ಎಂಟ್ರಿ ಅಪರೇಟರ್ ಆಗಿದ್ದ ತೇಜಸ್ ಭಟ್ಟಿ. ರಾಜ್ಯಪಾಲರ ಪ್ರಪೋಸಲ್ ಗೆ ತುಟಿಕ್ ಪಿಟಿಕ್ ಎನ್ನದ ಸರ್ಕಾರ ಬರೋಬ್ಬರಿ 60 ಸಾವಿರ ರೂ. ಸಂಬಳ ನೀಡಿ ಗುತ್ತಿಗೆ ಆಧಾರದಲ್ಲಿ ಭಟ್ಟಿಯನ್ನ ನೇಮಿಸಿಕೊಂಡಿದೆ.
Advertisement
ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ತೇಜಸ್ ಭಟ್ಟಿ ನೇಮಕಕ್ಕೆ ಒಪ್ಪಿಗೆ ನೀಡಿದ್ದು ಜನವರಿ 4, 2016 ರಂದು. ಆದ್ರೆ ನಮ್ಮ ಘನ ಸರ್ಕಾರ ಸೆಪ್ಟಂಬರ್ 1, 2014 ರಿಂದ ಅನ್ವಯವಾಗುವಂತೆ ಬರೋಬ್ಬರಿ 60 ಸಾವಿರದಂತೆ ಸಂಬಳ ನೀಡುತ್ತಿದೆ. ಭಟ್ಟಿ ನೇಮಕದಲ್ಲಿ ಎಲ್ಲಾ ನಿಮಗಳನ್ನು ಗಾಳಿಗೆ ತೂರಲಾಗಿದೆ ಎಂದು ತಿಳಿದುಬಂದಿದೆ.
Advertisement
Advertisement
Advertisement