ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಫೇಮಸ್ ಆಗಿರುವ ಬಟಾಟಾ ಪೋಹಾ (Batata Poha) ಟ್ರೈ ಮಾಡಿದ್ದೀರಾ? ಇದನ್ನು ಆಲೂಗಡ್ಡೆ ಅವಲಕ್ಕಿ ಎಂದು ನಮ್ಮಲ್ಲಿ ಕರೆಯಬಹುದು. ಫಟಾಪಟ್ ಅಂತ ತಯಾರಿಸಬಹುದಾದ ಈ ರೆಸಿಪಿಯನ್ನು ನೀವು ಉಪಾಹಾರ, ಟೀ ಸಮಯದ ಸ್ನ್ಯಾಕ್ಸ್ ಆಗಿಯೂ ಸವಿಯಬಹುದು. ಫಟಾಫಟ್ ಅಂತ ಏನಾದರೂ ಅಡುಗೆ ಮಾಡಬೇಕಾಗಿ ಬಂದಾಗ ಖಂಡಿತವಾಗಿಯೂ ಈ ರುಚಿಕರವಾದ ರೆಸಿಪಿಯನ್ನು ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ದಪ್ಪ ಅವಲಕ್ಕಿ – 1 ಕಪ್
ಸಿಪ್ಪೆ ಸುಲಿದು ತೆಳ್ಳಗೆ ಕತ್ತರಿಸಿದ ಆಲೂಗಡ್ಡೆ – 1
ಕಡಲೆಕಾಯಿ – 2 ಟೀಸ್ಪೂನ್
ಅಡುಗೆ ಎಣ್ಣೆ – 3 ಟೀಸ್ಪೂನ್
ಸಾಸಿವೆ – ಅರ್ಧ ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಕರಿಬೇವಿನ ಸೊಪ್ಪು – ಕೆಲವು
ಹಿಂಗ್ – ಚಿಟಿಕೆ
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಗರಂ ಮಸಾಲಾ ಪುಡಿ – ಅರ್ಧ ಟೀಸ್ಪೂನ್
ಸಕ್ಕರೆ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಂತೆ
ಅರಿಶಿನ ಪುಡಿ – ಕಾಲು ಟೀಸ್ಪೂನ್
ಅಲಂಕಾರಕ್ಕೆ:
ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ದಾಳಿಂಬೆ ಬೀಜಗಳು – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್ ಇದನ್ನೂ ಓದಿ: ಟೇಸ್ಟಿ ಪುದಿನಾ ಆಲೂ ಫ್ರೈ ನಿಮಗಾಗಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ದಪ್ಪ ಅವಲಕ್ಕಿಯನ್ನು ತೊಳೆದು, ಸಾಕಷ್ಟು ನೀರಿನಲ್ಲಿ 10-15 ನಿಮಿಷಗಳ ವರೆಗೆ ನೆನೆಯಲು ಬಿಡಿ.
* ಕಡಾಯಿಯಲ್ಲಿ 1 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ ಅದರಲ್ಲಿ ಹಸಿ ಕಡಲೆಕಾಯಿಯನ್ನು ಮೊದಲು ಹುರಿದುಕೊಳ್ಳಿ.
* ಅದೇ ಕಡಾಯಿಯಲ್ಲಿ ಮತ್ತೆ 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಹುರಿದ ಕಡಲೆಕಾಯಿಯೊಂದಿಗೆ ಸಾಸಿವೆ, ಜೀರಿಗೆ ಮತ್ತು ಅರಿಶಿನ ಪುಡಿಯನ್ನು ಸೇರಿಸಿ.
* ಈಗ ಅದಕ್ಕೆ ಕತ್ತರಿಸಿದ ಆಲೂಗಡ್ಡೆ, ಕರಿಬೇವಿನ ಸೊಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಅರಿಶಿನ ಪುಡಿ ಮತ್ತು ಉಪ್ಪನ್ನು ಸೇರಿಸಿ, ಕಡಾಯಿಯನ್ನು ಸ್ವಲ್ಪ ಕಾಲ ಮುಚ್ಚಿ, ಆಲೂಗಡ್ಡೆ ತುಂಡುಗಳು ಮೃದುವಾಗುವವರೆಗೆ ಬೇಯಲು ಬಿಡಿ.
* ಈಗ ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ, ಸಕ್ಕರೆ ಮತ್ತು ಸ್ವಲ್ಪ ಅರಿಶಿನ ಪುಡಿ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ.
* ನೆನೆಸಿದ ಅವಲಕ್ಕಿಯನ್ನು ನೀರಿನಿಂದ ಬಸಿದು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.
* ಅವಲಕ್ಕಿ ಚೆನ್ನಾಗಿ ಬಿಸಿಯಾದ ನಂತರ ಉರಿಯನ್ನು ಆಫ್ ಮಾಡಿ ಕೊತ್ತಂಬರಿ ಸೊಪ್ಪು, ನಿಂಬೆ ರಸ, ದಾಳಿಂಬೆ ಬೀಜ ಹಾಗೂ ಈರುಳ್ಳಿಯಿಂದ ಅಲಂಕರಿಸಿ ಬಿಸಿಬಿಸಿಯಾಗಿ ಬಡಿಸಿ. ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು, ರುಚಿಯೂ ಅದ್ಭುತ – ರಾಗಿ ಆಲೂ ಪೂರಿ ಮಾಡ್ನೋಡಿ