ಗಾಂಧೀನಗರ: 24 ವರ್ಷದ ಯುವತಿ ಇದೇ ಮೊದಲ ಬಾರಿಗೆ ತನ್ನನ್ನು ತಾನೇ ಜೂನ್ 11 ರಂದು ಮದುವೆ ಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.
ಹೌದು, ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ, ತನ್ನನ್ನು ತಾನೇ ವಿವಾಹವಾಗುತ್ತಿದ್ದಾಳೆ. ಅಲ್ಲದೇ ಮದುವೆಯ ಎಲ್ಲ ವಿಧಿ-ವಿಧಾನಗಳ ನಂತರ ಗೋವಾಗೆ ಹನಿಮೂನ್‍ಗೆ ಹಾರಲಿದ್ದಾಳೆ. ಇದನ್ನೂ ಓದಿ: ಒಳಚರಂಡಿಗೆ ಬಿದ್ದ ಬಾಲಕ – ರಕ್ಷಿಸಲು ಹೋದ ಅಪ್ಪ, ಚಿಕ್ಕಪ್ಪ ಕೂಡ ಬಾಲಕನೊಂದಿಗೆ ಸಾವು
Advertisement
Advertisement
ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಷಮಾ, ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೂ ಈ ರೀತಿ ಯಾರಾದರೂ ಮದುವೆಯಾಗಿದ್ದಾರಾ ಎಂದು ಪರಿಶೀಲಿಸಿದೆ. ಆದರೆ ಯಾರು ಈ ರೀತಿ ವಿವಾಹವಾದವರು ಸಿಗಲಿಲ್ಲ. ಬಹುಶಃ ಈ ರೀತಿ ಮದುವೆಯಾಗುತ್ತಿರುವ ಮೊದಲ ವ್ಯಕ್ತಿ ನಾನಾಗೀರಬಹುದು. ನಾನು ಎಂದಿಗೂ ಮದುವೆಯಾಗುವುದಕ್ಕೆ ಬಯಸಿಲ್ಲ. ಆದರ ವಧು ಆಗಬೇಕೆಂಬ ಆಸೆ ಇತ್ತು. ಹೀಗಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾಳೆ.
Advertisement
Advertisement
ಸ್ವಯಂ-ವಿವಾಹವು ನಿಮಗೆ ನೀವೇ ಮಾಡಿಕೊಳ್ಳುವ ಕಮಿಟ್‍ಮೆಂಟ್ ಆಗಿದೆ ಮತ್ತು ನಿಮಗೆ ನೀವೇ ನೀಡುವ ಅಪಾರವಾದ ಪ್ರೀತಿಯುಳ್ಳದಾಗಿದೆ. ಇದು ಸ್ವಯಂ ಸ್ವೀಕಾರ ಕ್ರಿಯೆಯೂ ಆಗಿದೆ. ಜನರು ಪ್ರೀತಿ ಮಾಡುವವರನ್ನು ಮದುವೆಯಾಗುತ್ತಾರೆ. ನಾನು ನನ್ನನ್ನು ಪ್ರೀತಿಸುತ್ತೇನೆ. ಆದ್ದರಿಂದ ಈ ಮದುವೆಯಾಗುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಇದನ್ನೂ ಓದಿ: ಹಾಸನ ಕಟ್ಟಿನಕೆರೆ ಮಾರುಕಟ್ಟೆ ಬಂದ್ – 500ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್
ಈ ಮದುವೆಗೆ ತನ್ನ ಪೋಷಕರು ಒಪ್ಪಿಗೆ ಸೂಚಿಸಿ, ಮದುವೆ ಸಿದ್ಧತೆ ನಡೆಸುವಂತೆ ಆಶೀರ್ವಾದ ಮಾಡಿದ್ದಾರೆ. ಗೋತ್ರಿಯ ದೇವಸ್ಥಾನದಲ್ಲಿ ನಡೆಯಲಿರುವ ವಿವಾಹಕ್ಕೆ ಕ್ಷಮಾ ಐದು ವ್ರತಗಳನ್ನು ಮದುವೆಯಾದ ಬಳಿಕ ಎರಡು ವಾರಗಳ ಕಾಲ ಹನಿಮೂನ್‍ಗೆ ಗೋವಾಕ್ಕೆ ಹೋಗಲಿದ್ದಾಳೆ.