ಗಾಂಧೀನಗರ: ತನ್ನನ್ನು ತಾನೇ ಮದುವೆಯಾಗುವುದಾಗಿ ಹೇಳಿ ಇಡೀ ದೇಶದಲ್ಲಿ ಸಖತ್ ಸುದ್ದಿಯಾಗಿದ್ದ ಗುಜರಾತ್‍ನ ವಡೋದರಾದ ಯುವತಿ ನಿಗದಿ ಪಡಿಸಿದ ಮೂರು ದಿನ ಮುಂಚಿತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ.
ವಡೋದರಾದ ಗೋತ್ರಿ ಪ್ರದೇಶದಲ್ಲಿ ಕ್ಷಮಾ ಬಿಂದು ಮದುವೆ ನೆರವೇರಿದ್ದು, 40 ನಿಮಿಷಗಳ ಈ ಮದುವೆ ಸಮಾರಂಭದಲ್ಲಿ ಕೇವಲ ಆಪ್ತರು ಮಾತ್ರ ಭಾಗಿಯಾಗಿದ್ದರು. ಮಂಟಪಕ್ಕೆ ಬರುವ ವೇಳೆ ಕ್ಷಮಾ ಬಿಂದು ಮೇಲೆ ಸ್ನೇಹಿತರು ಹೂವಿನ ಮಳೆಯನ್ನು ಸುರಿಸುತ್ತಾ ಸ್ವಾಗತ ಮಾಡಿದರು.
ಮದುವೆ ವೇಳೆ ಕೆಂಪು ಬಣ್ಣದ ಉಡುಪು ಧರಿಸಿ ವಧುವಿನ ಅಲಂಕಾರದಲ್ಲಿ ಮಿಂಚಿದ್ದ ಕ್ಷಮಾ ಬಿಂದು ಹಣೆಯಲ್ಲಿ ಸಿಂಧೂರ ಮತ್ತು ಕೊರಳಲ್ಲಿರುವ ತಾಳಿ ತೋರಿಸಿ ನನ್ನ ಮದುವೆ ಮುಗಿದು ಹೋಯಿತು. ಕೊನೆಗೂ ನಾನು ವಿವಾಹಿತ ಮಹಿಳೆಯಾಗಿರುವುದಕ್ಕೆ ಬಹಳ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾಳೆ. ಇದನ್ನೂ ಓದಿ : ತನ್ನನ್ನು ತಾನೇ ಮದುವೆಯಾಗಿ, ಗೋವಾಗೆ ಹನಿಮೂನಿಗೆ ಹೊರಟ ಹುಡುಗಿಗೆ ಈ ಸಿನಿಮಾ ಸ್ಫೂರ್ತಿ?
View this post on Instagram
ಇದೇ ವೇಳೆ ಇತರೆ ಹೆಣ್ಣುಮಕ್ಕಳಂತೆ, ಮದುವೆಯಾದ ಬಳಿಕ ನಾನು ನನ್ನ ಮನೆಯನ್ನು ತೊರೆಯುವ ಅಗತ್ಯವಿಲ್ಲ. ಇದು ಈ ಮದುವೆಯ ಮತ್ತೊಂದು ಬಹುದೊಡ್ಡ ಪ್ರಯೋಜನ ಎಂದು ಹೇಳಿದ್ದಾಳೆ. ಅಲ್ಲದೇ ಈ ಮದುವೆ ಬಹಳ ಗುಟ್ಟಾಗಿ ನಡೆಯಬೇಕಿತ್ತು. ಹೀಗಾಗಿ ನ್ನ 10 ಗೆಳತಿಯರು ಮತ್ತು ಸಹೋದ್ಯೋಗಿಗಳು ಮದುವೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದಾಳೆ.
View this post on Instagram
ಮದುವೆ ವೇಳೆ ನಡೆಸುವ ಮೆಹೆಂದಿ ಹಾಗೂ ಹಳದಿ ಶಾಸ್ತ್ರವನ್ನು ಕ್ಷಮಾ ಬಿಂದು ಮದುವೆಯಲ್ಲಿ ಆಯೋಜಿಸಲಾಗಿತ್ತು. ಈ ವೇಳೆ ನಿರಂತರವಾಗಿ ಮನೆಗೆ ಅನೇಕ ಮಂದಿ ಭೇಟಿ ನೀಡುತ್ತಿದ್ದರಿಂದ ಅಕ್ಕಪಕ್ಕದ ಮನೆಯವರು ತಕರಾರು ತೆಗೆದಿದ್ದರು. ನನ್ನ ಮದುವೆ ದಿನ ಕೂಡ ಇದೇ ರೀತಿ ಗಲಾಟೆಗಳು ಆಗಬಹುದು ಎಂಬ ಕಾರಣಕ್ಕೆ 3 ದಿನ ಮುನ್ನವೇ ಮದುವೆಯಾಗಿರುವುದಾಗಿ ಕ್ಷಮಾ ಬಿಂದು ಹೇಳಿದ್ದಾಳೆ.