ಗಾಂಧಿನಗರ: ವಿದೇಶಕ್ಕೆ ತೆರಳಲು 2 ಲಕ್ಷ ರೂ. ನೀಡಲು ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಮಾವನ ಖಾಸಗಿ ಅಂಗವನ್ನೇ ಕತ್ತರಿಸಿ ಕೊಲೆಗೈದ ಪ್ರಕರಣ ಗುಜರಾತ್‌ನ (Gujarat) ಖೇಡಾದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಜಗದೀಶ್ ಶರ್ಮಾ (75) ಎಂದು ಗುರುತಿಸಲಾಗಿದೆ. ಆರೋಪಿ ಸೊಸೆಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಆಕೆ ವಿಚಾರಣೆ ವೇಳೆ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ತನಿಖೆ ವೇಳೆ ಆಕೆಯ ಮಾವ ತನ್ನೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಇದಕ್ಕಾಗಿ ಹಣ ನೀಡುತ್ತಿದ್ದ ಎಂದು ಮಹಿಳೆ ಹೇಳಿದ್ದಾಳೆ. ಇದನ್ನೂ ಓದಿ: ಕ್ರಿಮಿನಲ್ ಕೇಸ್ ಇತ್ಯರ್ಥಕ್ಕೆ ಹಣ ಬೇಕು ಅಂತ ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು ಅರೆಸ್ಟ್
ಬಳಿಕ ತಾನು ಫೇಸ್‌ಬುಕ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ ವಿದೇಶಕ್ಕೆ ತೆರಳಲು ಬಯಸಿದ್ದೆ. ಇದಕ್ಕಾಗಿ ಮಾವನ ಬಳಿ ಹಣ ಕೇಳಿದ್ದೆ. ಆದರೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾಗಿ ಮಹಿಳೆ ಹೇಳಿದ್ದಾಳೆ.
ಸುಮಾರು ಮೂರು ದಿನಗಳಿಂದ ಜಗದೀಶ್ ಶರ್ಮಾ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಆತನ ಹಿರಿಯ ಮಗ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಬಳಿಕ ಆತ ಪೊಲೀಸರಿಗೆ ಮಾಹಿತಿ ನೀಡಿದ್ದ. ಇದಾದ ಮೇಲೆ ಮೃತದೇಹವನ್ನು ಪರೀಕ್ಷಿಸಿದ ವೇಳೆ ಖಾಸಗಿ ಅಂಗ ಕತ್ತರಿಸಿರುವುದು ಹಾಗೂ ತಲೆಗೆ ಬಲವಾಗಿ ಹೊಡೆದಿರುವುದು ಪತ್ತೆಯಾಗಿತ್ತು. ಇದನ್ನೂ ಓದಿ: ದೇವದುರ್ಗ ಉಪಕಾರಾಗೃಹದಿಂದ ಪರಾರಿಯಾಗಿದ್ದ ವಿಚಾರಣಾಧೀನ ಕೈದಿ ಬಂಧನ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]