– ಅಮಿತ್ ಶಾ ಸ್ವ ಕ್ಷೇತ್ರದಲ್ಲಿ ಕಲುಷಿನ ನೀರಿನ ಸಮಸ್ಯೆ; 100ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ
ಗಾಂಧಿನಗರ/ಇಂದೋರ್/ಭುವನೇಶ್ವರ: ಗುಜರಾತ್, ಒಡಿಶಾ, ಮಧ್ಯಪ್ರದೇಶ ರಾಜ್ಯಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಜನರನ್ನ ಕಾಡತೊಡಗಿವೆ. ಗುಜರಾತ್‌ನಲ್ಲಿ ಟೈಫಾಯ್ಡ್, ಒಡಿಶಾದಲ್ಲಿ ಜಾಂಡೀಸ್ ಹಾಗೂ ಮಧ್ಯಪ್ರದೇಶದಲ್ಲಿ ಅತಿಸಾರ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳನ್ನ ಬಾಧಿಸುತ್ತಿವೆ.
ಗುಜರಾತ್‌ನಲ್ಲಿ 119 ಮಂದಿ ಟೈಫಾಯ್ಡ್‌ಗೆ ತುತ್ತಾಗಿದ್ದು, ಈ ಪೈಕಿ 104 ಜನ ಮಕ್ಕಳೇ ಇದ್ದಾರೆ. ಮಧ್ಯಪ್ರದೇಶದಲ್ಲಿ 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಇದರಲ್ಲಿ 20 ಮಂದಿಗೆ ಅತಿಸಾರ ಸಮಸ್ಯೆ ಕಾಣಿಸಿಕೊಂಡಿದೆ. ಇನ್ನೂ ಒಡಿಶಾದಲ್ಲಿ ಜಾಂಡೀಸ್ ಸಮಸ್ಯೆಗೆ ತುತ್ತಾಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬಂಗಾಳ ಚುನಾವಣೆಗೂ ಮುನ್ನವೇ ʻಕೈʼ ಹಿಡಿದ ಟಿಎಂಸಿ ರಾಜ್ಯಸಭಾ ಸಂಸದೆ ಮೌಸಮ್ ನೂರ್
ಗುಜರಾತ್‌ನಲ್ಲಿ ಟೈಫಾಯ್ಡ್
ಗುಜರಾತ್‌ನ ಗಾಂಧಿನಗರದ ಸೆಕ್ಟರ್ 24 ಮತ್ತು 28 ಹಾಗೂ ಅಡಿವಾಡ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದಾಗಿ ಸುಮಾರು 119 ಮಂದಿ ಶಂಕಿತ ಟೈಫಾಯ್ಡ್‌ಗೆ ತುತ್ತಾಗಿದ್ದಾರೆ. ಈ ಪೈಕಿ 104 ಜನ ಮಕ್ಕಳಿದ್ದಾರೆ. ಕನಿಷ್ಠ 7 ಸ್ಥಳಗಳಲ್ಲಿ ಕುಡಿಯುವ ನೀರಿಗೆ ಒಳಚರಂಡಿ ನೀರು ಮಿಶ್ರಣವಾಗಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಜ.11ರಂದು ಸೋಮನಾಥ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ
ಇತ್ತೀಚೆಗಷ್ಟೇ ಸ್ಥಳೀಯ ಸರ್ಕಾರ 24/7 ನೀರು ಸರಬರಾಜು ಯೋಜನೆಗೆ 257 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಇದರ ಭಾಗವಾಗಿ ಒಳಚರಂಡಿ ಇರುವ ಮಾರ್ಗಗಳಲ್ಲೇ ಹೊಸ ಪೈಪ್‌ಲೈನ್‌ಗಳನ್ನ ಹಾಕಲಾಗಿದೆ. ಒಳಚರಂಡಿ ಪಕ್ಕದಲ್ಲೇ ನೀರಿನ ಪೈಪ್‌ಲೈನ್‌ಗಳು ಹಾದು ಹೋಗಿರುವುದರಿಂದ ಕಾಮಗಾರಿ ವೇಳೆ ಚರಂಡಿ ನೀರು ಮಿಶ್ರಣವಾಗಿದೆ. ಇದನ್ನ ಸೇವಿಸಿದ ಕಾರಣ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಚಿಕಿತ್ಸೆ ಬಳಿಕ 19 ಜನರನ್ನ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ. ಉಳಿದವರಿಗೆ ಗಾಂಧಿನಗರ ಸರ್ಕಾರಿ ಆಸ್ಪತ್ರೆ ಮತ್ತು ಸೆಕ್ಟರ್ 24, 29ರಲ್ಲಿರುವ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಶಾ ಸೂಚನೆ; 75 ಆರೋಗ್ಯ ತಂಡಗಳಿಂದ ತೀವ್ರ ತಪಾಸಣೆ
ಗಾಂಧಿನಗರ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಕ್ಷೇತ್ರದಲ್ಲಿ, ತಕ್ಞಣವೇ ಸಮಸ್ಯೆಗಳನ್ನ ಸರಿಪಡಿಸಲು ಸೂಚಿಸಿದ್ದಾರೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಗುಣಮಟ್ಟ ಪರಿಶೀಲಿಸಲು ನಿರ್ದೇಶನ ನೀಡಿದ್ದಾರೆ. ಈ ಬೆನ್ನಲ್ಲೇ ಸೆಕ್ಟರ್ 24, 26, 28 ಮತ್ತು ಅಡಿವಾಡಾ ಪ್ರದೇಶಗಳಲ್ಲಿ ಒಟ್ಟು 20,800 ಮನೆಗಳಿದ್ದು, 90,000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈಗಾಗಲೇ ಈ ಪ್ರದೇಶಗಳಲ್ಲಿ 75 ಆರೋಗ್ಯ ತಂಡಗಳು ತಪಾಸಣೆ ನಡೆಸಿದ್ದು, ವರದಿ ಬರಬೇಕಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ 2026ರ ಐಪಿಎಲ್ ಪ್ರಸಾರ ಬಂದ್ – RCB ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ!
ಮಧ್ಯಪ್ರದೇಶದಲ್ಲಿ ಭೇದಿ ಬಾಧೆ
ಇಂದೋರ್‌ನಲ್ಲಿ ಕಲುಷಿತ ನೀರು ಸೇವೆನಯಿಂದ ಉಂಟಾಗಿರುವ ಭೇದಿ ಸಮಸ್ಯೆ ಈಗ ಉಲ್ಬಣಗೊಳ್ಳುತ್ತಿದೆ. ಸದ್ಯ 142 ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 11 ಮಂದಿ ಐಸಿಯುನಲ್ಲಿದ್ದಾರೆ. ಈ ಬೆನ್ನಲ್ಲೇ ಭಾಗೀರಥಪುರ ಪ್ರದೇಶದಲ್ಲಿ ಆರೋಗ್ಯ ತಂಡಗಳು ತೀವ್ರ ತಪಾಸಣೆ ನಡೆಸಿವೆ. ಈಗಾಗಲೇ ಈ ಪ್ರದೇಶದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ 2,354 ಮನೆಗಳಲ್ಲಿ ಒಟ್ಟು 9,416 ಮಂದಿಯನ್ನ ತಪಾಸಣೆಗೆ ಒಳಪಡಿಸಿದ ನಂತರ 20 ಹೊಸ ರೋಗಿಗಳು ಪತ್ತೆಯಾಗಿದ್ದಾರೆ.

ಅಧಿಕಾರಿಗಳ ಪ್ರಕಾರ, ಈ ವರೆಗೆ 398 ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅವರಲ್ಲಿ 256 ರೋಗಿಗಳು ಚೇತರಿಸಿಕೊಂಡು ಡಿಶ್ಚಾರ್ಜ್ ಆಗಿದ್ದಾರೆ.
ಒಡಿಶಾದಲ್ಲಿ ಜಾಂಡೀಸ್
ಇನ್ನೂ ಒಡಿಶಾದ ಖುರ್ದಾ ಜಿಲ್ಲೆಯ ಜವಾಹರ್ ನವೋದಯ ವಿದ್ಯಾಲಯದಲ್ಲಿ (ಜೆಎನ್‌ವಿ) ಜಾಂಡೀಸ್ ಕಾಣಿಸಿಕೊಂಡು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ರಿಸ್ಮಸ್ ರಜೆ ಮುಗಿಸಿ ಮತ್ತೆ ಶಾಲೆಗೆ ಹಿಂದಿರುಗಿದ್ದ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಜಾಂಡೀಸ್‌ಗೆ ತುತ್ತಾಗಿದ್ದಾರೆ ಎಂದು ಆರೋಗ್ಯಾಧಿಕಾರಿ ನೀಲಕಂಠ ಮಿಶ್ರಾ ತಿಳಿಸಿದ್ದಾರೆ. ಹೊರಗಿನ ಕೆಲ ಆಹಾರ ಪದಾರ್ಥಗಳನ್ನು ಸೇವಿಸಿದ್ದರಿಂದ ಉಂಟಾಗಿರುವ ಸಮಸ್ಯೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ತಿಳಿಸಿದ್ದಾರೆ.



