– 12 ಶಾಲೆಗಳಲ್ಲಿ ಸೆಮಿನಾರ್ ನೀಡಿದ ಪೋರಿ
ಗಾಂಧಿನಗರ: ಮಕ್ಕಳ ಮೊಬೈಲ್ ಚಟ ಬಿಡಿಸಲು ಗುಜರಾತ್‍ನ 11 ವರ್ಷದ ಬಾಲಕಿಯೊಬ್ಬಳು ಅಭಿಯಾನ ಆರಂಭಿಸಿದ್ದು, ದೇಶದ ಗಮನ ಸೆಳೆದಿದ್ದಾಳೆ.
ಸೂರತ್‍ನ 11 ವರ್ಷದ ಭಾವಿಕಾ ಮಹೇಶ್ವರಿ ಮಕ್ಕಳನ್ನು ಮೊಬೈಲ್ ಚಟದಿಂದ ರಕ್ಷಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾಳೆ. ಇದಕ್ಕಾಗಿ ಮೊಬೈಲ್ ಅಡಿಕ್ಷನ್ ಕ್ಲಿನಿಕ್ ಎಂಬ ಅಭಿಯಾನವನ್ನು ಕೈಗೊಂಡಿದ್ದಾಳೆ. ಈ ವೇದಿಕೆಯಿಂದ 24 ಪುಟಗಳ ಡ್ರಾಯಿಂಗ್ ಪುಸ್ತಕವನ್ನು ತಯಾರಿಸಲಾಗಿದೆ. ಪುಸ್ತಕದಲ್ಲಿರುವ ರೇಖಾಚಿತ್ರಗಳು ಮೊಬೈಲ್ ಅನ್ನು ಯಾವಾಗ ಮತ್ತು ಹೇಗೆ ಬಳಸಲು ಸೂಕ್ತವೆಂದು ಮಕ್ಕಳಿಗೆ ವಿವರಿಸುತ್ತದೆ. ಭಾವಿಕಾ ತನ್ನ ಅಭಿಯಾನವನ್ನು ವಾಣಿಜ್ಯ ಸಚಿವಾಲಯದಲ್ಲಿ ನೋಂದಾಯಿಸಿಕೊಂಡಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾವಿಕಾ, ‘ಈಗಾಗಲೇ 12 ಶಾಲೆಗಳಲ್ಲಿ ನಾನು ಸೆಮಿನಾರ್ ಗಳನ್ನು ಕೂಡ ಮಾಡಿದ್ದೇನೆ. ಜಾಗೃತಿಗಾಗಿ ಸೆಮಿನಾರ್‍ಗಿಂತ ಭಿನ್ನವಾದದ್ದನ್ನು ಮಾಡುವ ಅವಶ್ಯಕತೆಯಿದೆ ಎಂದು ಅರಿತುಕೊಂಡೆ. ನನ್ನ ಪ್ರಕಾರ ಈ ಸಂದೇಶವನ್ನು ಡ್ರಾಯಿಂಗ್ ಪುಸ್ತಕದ ಮೂಲಕ ಹೆಚ್ಚು ಶಕ್ತಿಯುತವಾಗಿ ತಲುಪಿಸಬಹುದು. ಈ ಪುಸ್ತಕವನ್ನು ಶಾಲೆಗಳಿಗೆ ಕಳುಹಿಸಲು ಸಿದ್ಧವಾಗಿದೆ ಎಂದು ತಿಳಿಸಿದ್ದಾಳೆ.