ಗಾಂಧಿನಗರ: ಗುಜರಾತ್‍ನ (Gujarat) ದಾಹೋದ್ ಜಿಲ್ಲೆಯ ಸಿಂಗ್ವಾಡ್ ಗ್ರಾಮದ ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡುವ ಪ್ರಯತ್ನವನ್ನು ವಿರೋಧಿಸಿದ 6 ವರ್ಷದ ವಿದ್ಯಾರ್ಥಿನಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಗುರುವಾರ ಸಿಂಗ್ವಾಡ್ ಗ್ರಾಮದ ಶಾಲಾ ಕಾಂಪೌಂಡ್‍ನಲ್ಲಿ ಮಗುವಿನ ಶವ ಪತ್ತೆಯಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು. ಬಳಿಕ ಪ್ರಕರಣ ಸಂಬಂಧ ಶಾಲೆಯ ಮುಖ್ಯ ಶಿಕ್ಷಕ ಗೋವಿಂದ್ ನಾಥ್‍ನನ್ನು ಬಂಧಿಸಿದ್ದರು. ತನಿಖೆ ವೇಳೆ ಆರೋಪಿ ಬಾಲಕಿಯನ್ನು ಹತ್ಯೆಗೈದಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್
Advertisement
Advertisement
ಗುರುವಾರ ಬೆಳಗ್ಗೆ 10:20ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿದ್ದ ಶಿಕ್ಷಕ, ಬಾಲಕಿಯನ್ನು ಶಾಲೆಗೆ ಬಿಡುವುದಾಗಿ ಕರೆದುಕೊಂಡು ಹೋಗಿದ್ದ. ಬಳಿಕ ದಾರಿಯಲ್ಲಿ ಬಾಲಕಿಯ ಮೇಲೆ ಲೈಂಗಿಕ ಕಿರುಕುಳಕ್ಕೆ ಯತ್ನಿಸಿದ್ದಾನೆ. ಅವಳು ವಿರೋಧಿಸಿ, ಕಿರುಚುವುದನ್ನು ತಡೆಯಲು ಅವಳ ಬಾಯಿ ಮತ್ತು ಮೂಗನ್ನು ಮುಚ್ಚಿದ್ದಾನೆ ಈ ವೇಳೆ ಅವಳು ಪ್ರಜ್ಞೆ ಕಳೆದುಕೊಂಡಿದ್ದಳು. ಬಳಿಕ ಶಾಲೆಗೆ ಹೋಗಿ ಕಾರು ನಿಲ್ಲಿಸಿ, ಶಾಲೆಯ ಅವಧಿ ಮುಗಿದ ಬಳಿಕ ಶಾಲೆಯ ಆವರಣದಲ್ಲಿ ಬಾಲಕಿಯ ಶವವನ್ನು ಆತ ಎಸೆದಿದ್ದ. ಅಲ್ಲದೇ ಬ್ಯಾಗ್ ಮತ್ತು ಚಪ್ಪಲಿಯನ್ನು ತರಗತಿಯಲ್ಲಿ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ತನಿಖೆಯ ಆರಂಭದಲ್ಲಿ ಬಾಲಕಿಯನ್ನು ತನ್ನ ಕಾರಿನಲ್ಲಿ ಕರೆದೊಯ್ದ ನಂತರ ಶಾಲೆಗೆ ಬಿಟ್ಟಿದ್ದೇನೆ ಎಂದು ಆರೋಪಿ ಹೇಳಿದ್ದ. ಬಳಿಕ ವಿದ್ಯಾರ್ಥಿಗಳು ಹಾಗೂ ಉಳಿದ ಶಿಕ್ಷಕರನ್ನು ವಿಚಾರಿಸಿದಾಗ ಬಾಲಕಿ ಆ ದಿನ ಶಾಲೆಗೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಭೀಕರ ಹತ್ಯೆ; ಅಶ್ರಫ್ ಸೇರಿ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ