ಗಾಂಧಿನಗರ: ಚುನಾವಣಾ ಆಯೋಗ (Gujarat Election Commission) ಗುಜರಾತ್ ವಿಶೇಷ ತೀವ್ರ ಪರಿಷ್ಕರಣೆಯ (SIR) ನಂತರ ಕರಡು ಮತದಾರರ ಪಟ್ಟಿಯನ್ನು (Draft Voter List) ಇಂದು ಬಿಡುಗಡೆ ಮಾಡಿದ್ದು 73.73 ಲಕ್ಷ ಮತದಾರರ ಹೆಸರುಗಳನ್ನು ತೆಗೆದಿದೆ.
ಅಕ್ಟೋಬರ್ 27 ರಂದು ಎಸ್‌ಐಆರ್ ಪ್ರಕ್ರಿಯೆ ಆರಂಭವಾಗಿ ರಾಜ್ಯಾದ್ಯಂತ ಸುಮಾರು ಒಂದೂವರೆ ತಿಂಗಳ ಕಾಲ ನಡೆದಿತ್ತು. ಹೆಸರು ಬಿಟ್ಟು ಹೋಗಿರುವ ಮತದಾರರು ಜನವರಿ 18 ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಪರಿಷ್ಕರಣೆಯ ಅಂತಿಮ ಹಂತವು ಫೆಬ್ರವರಿ 10 ರೊಳಗೆ ಕೊನೆಯಾಗಲಿದ್ದು ಫೆ.17 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಗುಜರಾತ್‌ನಲ್ಲಿ 5.08 ಕೋಟಿ ಮತದಾರರಿದ್ದರು. ಎಸ್‌ಐಆರ್ ನಡೆದು ಕರಡು ಪಟ್ಟಿ ಪ್ರಕಟವಾದ ನಂತರ ಗುಜರಾತ್‌ನಲ್ಲಿ ಒಟ್ಟು ಮತದಾರರ ಸಂಖ್ಯೆ 4,34,70,109 ಇಳಿಕೆಯಾಗಿದೆ. ಇದನ್ನೂ ಓದಿ: ತಮಿಳುನಾಡು SIR ಔಟ್ – 97 ಲಕ್ಷ ಮತದಾರರ ಹೆಸರು ಡಿಲೀಟ್
ರಾಜ್ಯಾದ್ಯಂತ ಸಾಮೂಹಿಕ ಪ್ರಯತ್ನದಿಂದಾಗಿ ನಿಗದಿತ ಸಮಯದೊಳಗೆ ಈ ಪ್ರಕ್ರಿಯೆಯು ಪೂರ್ಣಗೊಂಡಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಹರಿತ್ ಶುಕ್ಲಾ ಹೇಳಿದ್ದಾರೆ. ಒಟ್ಟು 33 ಜಿಲ್ಲಾ ಚುನಾವಣಾ ಅಧಿಕಾರಿಗಳು, 182 ಚುನಾವಣಾ ನೋಂದಣಿ ಅಧಿಕಾರಿಗಳು, 855 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು, 50,963 ಬೂತ್ ಮಟ್ಟದ ಅಧಿಕಾರಿಗಳು, 54,443 ಬೂತ್ ಮಟ್ಟದ ಏಜೆಂಟ್‌ಗಳು ಮತ್ತು 30,833 ಸ್ವಯಂಸೇವಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಮತದಾರರು, ರಾಜಕೀಯ ಪಕ್ಷಗಳು, ಮಾಧ್ಯಮ ಮತ್ತು ನಾಗರಿಕ ಸಮಾಜ ಸಂಸ್ಥೆಗಳಿಂದ ಈ ಅಭಿಯಾನಕ್ಕೆ ಸಹಕಾರ ಸಿಕ್ಕಿದೆ ಎಂದು ತಿಳಿಸಿದರು.
ಯಾವ ಕಾರಣಕ್ಕೆ ಡಿಲೀಟ್?
ಮೃತ ಮತದಾರರು: 18,07,278
ಗೈರುಹಾಜರಾದ ಮತದಾರರು: 9,69,662
ಶಾಶ್ವತವಾಗಿ ವಲಸೆ ಬಂದ ಮತದಾರರು: 40,25,553
ಎರಡು ಸ್ಥಳಗಳಲ್ಲಿ ನೋಂದಾಯಿಸಲಾದ ಮತದಾರರು: 3,81,470
ಇತರ ಕಾರಣಗಳು: 1,89,364

