ಗಾಂಧಿನಗರ: ಅಮೆರಿಕದ ಪೆಂಟಗನ್ ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ತಲೆ ಎತ್ತಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ನೆರವೇರಿಸಿದ್ದಾರೆ.
#WATCH | Gujarat: Prime Minister Narendra Modi inaugurates the Surat Diamond Bourse.
It will be the world’s largest and modern centre for international diamond and jewellery business. It will be a global centre for trading both rough and polished diamonds as well as jewellery.… pic.twitter.com/itJi0jlKBI
— ANI (@ANI) December 17, 2023
Advertisement
ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರವಾದ `ಸೂರತ್ ಡೈಮಂಡ್ ಬೋರ್ಸ್’ (Surat Diamond Bourse) ಅನ್ನು ಮೋದಿ ಅವರು ಭಾನುವಾರ (ಇಂದು) ಉದ್ಘಾಟಿಸಿ ಶುಭಹಾರೈಸಿದ್ದಾರೆ. ಈ ಮೂಲಕ ಗುಜರಾತ್‌ನ (Gujarat) ಸೂರತ್ ನಗರವು ವಜ್ರದ ರಾಜಧಾನಿಯಾಗುವ ಮಹತ್ವಾಕಾಂಕ್ಷೆಯನ್ನು ಖಚಿತಪಡಿಸಿದೆ. ಇದನ್ನೂ ಓದಿ: ಸೀರೆಯ ಸೆರಗು ಮೆಟ್ರೋ ಬಾಗಿಲಿಗೆ ಸಿಲುಕಿ ಎಳೆದೊಯ್ದ ರೈಲು – ಮಹಿಳೆ ಸಾವು
Advertisement
ಡೈಮಂಡ್ ಬೋರ್ಸ್ ವಿಶೇಷತೆ ಏನು?
ಸೂರತ್ ಡೈಮಂಡ್ ಬೋರ್ಸ್ 35.54 ಎಕರೆ ಭೂಪ್ರದೇಶದಲ್ಲಿ, 3,400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಈ ಮೂಲಕ ಇದು 1943ರಲ್ಲಿ 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಪೆಂಟಗನ್ ಸಂಕೀರ್ಣ ಕಚೇರಿಯನ್ನೂ ಹಿಂದಿಕ್ಕಿದೆ. 4,500ಕ್ಕೂ ಹೆಚ್ಚು ನೆಟ್‌ವರ್ಕ್ ಕಚೇರಿಗಳನ್ನು ಒಳಗೊಂಡಿದ್ದು ವಿಶ್ವದಲ್ಲೇ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಇದನ್ನೂ ಓದಿ: ಸಂಸತ್‌ನಲ್ಲಿನ ಭದ್ರತಾ ಲೋಪಕ್ಕೂ, ಸಂಸದರ ಅಮಾನತಿಗೂ ಸಂಬಂಧವಿಲ್ಲ: ಲೋಕಸಭಾ ಸ್ಫೀಕರ್ ಸ್ಪಷ್ಟನೆ
Advertisement
Advertisement
ಸೂರತ್‌ನ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ (Diamond And Jewellery) ವ್ಯಾಪಾರದ ಜಾಗತಿಕ ಕೇಂದ್ರವಾಗಲಿದೆ. 65,000ಕ್ಕೂ ಹೆಚ್ಚು ವಜ್ರದ ವ್ಯಾಪಾರಿಗಳಿಗೆ ಒನ್‌ಸ್ಟಾಪ್ ಡೆಸ್ಟಿನೇಶನ್ ಆಗಿದ್ದು, ಕಟ್ಟರ್, ಪಾಲಿಷರ್ ವಜ್ರಗಳು ಹಾಗೂ ವಜ್ರದ ಆಭರಣಗಳ ವ್ಯಾಪಾರ, ವಹಿವಾಟು ನಡೆಯಲಿದೆ. ಈ ಕಟ್ಟಡವು 175 ದೇಶಗಳ 4,200 ವ್ಯಾಪಾರಿಗಳನ್ನು ಒಳಗೊಂಡಿದೆ. ಆಮದು-ರಫ್ತಿಗಾಗಿ ಅತ್ಯಾಧುನಿಕ `ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್’ (Customs Clearance House) ಅನ್ನೂ ಹೊಂದಿದೆ. ಜೊತೆಗೆ ಚಿಲ್ಲರೆ ಆಭರಣ ವ್ಯಾಪಾರಕ್ಕಾಗಿ ಆಭರಣ ಮಳಿಗೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಸುರಕ್ಷಿತ ವಾಲ್ಟ್ಸ್‌ಗಳ ಸೌಲಭ್ಯವೂ ಇಲ್ಲಿದೆ. ಮನರಂಜನಾ ವಲಯ ಮತ್ತು ಪಾರ್ಕಿಂಗ್‌ಗೆ 20 ಲಕ್ಷ ಚದರ ಅಡಿ ವಿಸ್ತೀರ್ಣ ಪ್ರದೇಶವನ್ನು ಮೀಸಲಿಡಲಾಗಿದೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆಗೆ ದಿನಗಣನೆ- ಅಂತಿಮ ಹಂತದಲ್ಲಿ ತಯಾರಿ, ವಿಶೇಷ ಸಾರಿಗೆ ವ್ಯವಸ್ಥೆ
ವಜ್ರ ವಿನ್ಯಾಸಕ್ಕೆ ಭಾರತ ಫೇಮಸ್: ವಿಶ್ವದಲ್ಲಿಯೇ ಮೊದಲಿಗೆ ದಕ್ಷಿಣ ಭಾರತದಲ್ಲಿ ವಜ್ರದ ನಿಕ್ಷೇಪಗಳು 9ನೇ ಶತಮಾನದಲ್ಲಿ ಪತ್ತೆಯಾದವು. ಅಲ್ಲಿಂದ 18ನೇ ಶತಮಾನದ ಮಧ್ಯಭಾಗದವರೆಗೆ ಭಾರತವು ವಜ್ರದ ಏಕೈಕ ಉತ್ಪಾದಕ ರಾಷ್ಟ್ರವಾಗಿತ್ತು. ನಂತರ ಇಲ್ಲಿನ ನಿಕ್ಷೇಪಗಳು ಬರಿದಾಗತೊಡಗಿ ಬ್ರೆಜಿಲ್‌ನಲ್ಲಿ ವಜ್ರದ ನಿಕ್ಷೇಪಗಳು ಪತ್ತೆಯಾಗಿ, ಅಲ್ಲಿ ಉತ್ಪಾದನೆ ಆರಂಭವಾಯಿತು. 1870ರ ದಶಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಜ್ರದ ಅದಿರು ಪತ್ತೆಯಾದ ಮೇಲೆ ವಜ್ರೋದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆಯಿತು. ಈಗ ಅಲ್ಲಿ ಮಾತ್ರವಲ್ಲದೆ ಕೆನಡಾ, ಜಿಂಬಾಬ್ವೆ, ಅಂಗೋಲ ಮತ್ತು ರಷ್ಯಾದಲ್ಲಿ ಸಹ ವಜ್ರದ ಗಣಿಗಳಿವೆ. ಇಲ್ಲಿನ ಸಿಗುವ ವಜ್ರಗಳನ್ನು ಭಾರತಕ್ಕೆ ಕಳುಹಿಸಿ ಅಲಂಕಾರಿಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ವಜ್ರದ ಹರಳುಗಳನ್ನು ವಿನ್ಯಾಸಗೊಳಿಸಲು ಭಾರತದ ಗುಜರಾತ್ ರಾಜ್ಯ ಫೇಮಸ್ ಆಗಿದೆ. ವಜ್ರಗಳನ್ನು ವಿನ್ಯಾಸಗೊಳಿಸಿ ಆಭರಣಗಳಾಗಿ ರೂಪಿಸಿ ಒದಗಿಸುವ ಕಾರ್ಯವನ್ನು ಭಾರತದಲ್ಲಿ ಸುಮಾರು 25 ಕಂಪನಿಗಳು ಮಾಡುತ್ತಿವೆ. ಇದೀಗ ಭಾರತದಲ್ಲೇ ಬೃಹತ್ ಕಚೇರಿ ಸಂಕೀರ್ಣ ತೆರೆಯುತ್ತಿರುವುದು ಮತ್ತೊಂದು ಗರಿಮೆ.