ಗಾಂಧಿನಗರ: ಮೋರ್ಬಿ ಸೇತುವೆ ದುರಂತದ (Morbi Bridge Collapse) ವೇಳೆ ರಕ್ಷಣೆ ಮಾಡಿ ಸುದ್ದಿಯಾಗಿದ್ದ ಕಾಂತಿಲಾಲ್ 62 ಸಾವಿರಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಜಯ ಸಿಕ್ಕಿದೆ.
Advertisement
ಇತ್ತೀಚೆಗೆ ಗುಜರಾತಿನ ಮೋರ್ಬಿಯಲ್ಲಿ ತೂಗು ಸೇತುವೆ ಕುಸಿದು (Morbi Bridge Collapse) 135 ಜನರು ಸಾವನ್ನಪ್ಪಿದ್ದರು. ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ (Kantilal Amrutiya) ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತದ ಬಗ್ಗೆ ಟ್ವೀಟ್ ಮಾಡಿದ TMC ವಕ್ತಾರ ಅರೆಸ್ಟ್ – ಮೋದಿ ವಿರುದ್ಧ ಮಮತಾ ಗರಂ
Advertisement
Advertisement
5 ಬಾರಿ ಶಾಸಕರಾಗಿದ್ದ ಅಮೃತೀಯ ಅವರು ಮೋರ್ಬಿ ಸೇತುವೆ ಕುಸಿತದ ನಂತರ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅವರು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ರಕ್ಷಣೆಯಲ್ಲಿ ತೊಡಗಿದ್ದ ಚಿತ್ರಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಅಧಿಕಾರ – ಛತ್ತೀಸ್‌ಗಢಕ್ಕೆ ಶಾಸಕರು ಶಿಫ್ಟ್
Advertisement
ಅಮೃತೀಯ 1995 ರಿಂದ 2012ರ ವರೆಗೆ 5 ಬಾರಿ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿ ಮೋರ್ಬಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಜಯಂತಿ ಪಟೇಲ್ ಅವರನ್ನ ಕಣಕ್ಕಿಳಿಸಿದರೆ, ಆಪ್ ಪಂಕಜ್ ರಂಸಾರಿಯಾ ಅವರನ್ನ ಕಣಕ್ಕಿಳಿಸಿತ್ತು.
ಕಳೆದ ಅಕ್ಟೋಬರ್ 30 ರಂದು ಗುಜರಾತಿನ ಮೋರ್ಬಿ ಜಿಲ್ಲೆಯಲ್ಲಿ ತೂಗು ಸೇತುವೆ ಕುಸಿದು (Morbi Bridge Collapse) 135 ಜನರು ಮೃತಪಟ್ಟಿದರು. ಬಳಿಕ ತನಿಖೆಯಲ್ಲಿ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ಸಂತ್ರಸ್ತರ ಆರೋಗ್ಯ ವಿಚಾರಿಸಿ, ಪರಿಹಾರ ಘೋಷಣೆ ಮಾಡಿದ್ದಾರೆ. ನಂತರದಲ್ಲಿ ಮೋರ್ಬಿ ಪುರಸಭೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಗುಜರಾತ್ ಹೈಕೋರ್ಟ್ 1 ಲಕ್ಷ ದಂಡ ಸಹ ವಿಧಿಸಿತ್ತು.