ಗಾಂಧಿನಗರ: ಪ್ರಧಾನಿ ಮೋದಿ ಅವರ ಮೊದಲು ಚಹಾ ವ್ಯಾಪಾರಿ ಆಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅವರು ಟೀ ಮಾಡಿದ ಅಂಗಡಿಯನ್ನು ಸರ್ಕಾರ ಪ್ರವಾಸಿ ತಾಣ ಮಾಡಲು ನಿರ್ಧಾರ ಮಾಡಿದೆ.
ಚಹಾ ಮಾರಿಕೊಂಡು, ದೇಶಕ್ಕೆ ಎರಡು ಬಾರಿ ಪ್ರಧಾನಿ ಅದ ಮೋದಿ ಅವರು, ಅವರ ಆರಂಭಿಕ ಜೀವನದಲ್ಲಿ ಗುಜರಾತ್‍ನ ವಾಡ್ನಾಗರದಲ್ಲಿರುವ ರೈಲು ನಿಲ್ದಾಣದಲ್ಲಿ ಒಂದು ಪುಟ್ಟ ಟೀ ಸ್ಟಾಲ್‍ನಲ್ಲಿ ಟೀ ಮಾರುತ್ತಿದ್ದರು. ಈಗ ಈ ಟೀ ಸ್ಟಾಲ್‍ನ್ನು ಸರ್ಕಾರ ಪ್ರವಾಸಿ ತಾಣ ಮಾಡಲು ಮುಂದಾಗಿದೆ.
ಇತ್ತೀಚಿಗೆ ಈ ಜಾಗಕ್ಕೆ ಬಂದಿದ್ದ ರಾಜ್ಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, ಮೋದಿ ಅವರ ಚಹಾ ವ್ಯಾಪಾರ ಮಾಡಿದ್ದ ಈ ಜಾಗವನ್ನು ನಾವು ಪ್ರವಾಸಿ ತಾಣ ಮಾಡಲು ನಿರ್ಧಾರ ಮಾಡಿದ್ದೇವೆ. ಇದನ್ನು ಯಾವ ರೀತಿಯಲ್ಲೂ ಬದಲಾವಣೆ ಮಾಡದೇ ಈ ರೀತಿಯಲ್ಲೇ ಈ ಜಾಗವನ್ನು ಟೂರಿಸ್ಟ್ ಸ್ಪಾಟ್ ಮಾಡಲಿದ್ದೇವೆ ಮತ್ತು ಮೋದಿ ಅವರ ಟೀ ಸ್ಟಾಲ್‍ಗೆ ಗಾಜಿನ ಹೊದಿಕೆ ಮಾಡಿಸಿ ಸಂರಕ್ಷಣೆ ಮಾಡುತ್ತೇವೆ ಎಂದು ಹೇಳಿದ್ದರು.
ತಾನು ಒಬ್ಬ ಟೀ ವ್ಯಾಪಾರಿ ಎಂದು ಹೆಮ್ಮೆ ಇಂದು ಹೇಳಿಕೊಳ್ಳುವ ಪ್ರಧಾನಿ ಮೋದಿ, ವಿರೋಧ ಪಕ್ಷದವರು ಅ ವಿಚಾರದಲ್ಲಿ ಟೀಕೆ ಮಾಡಿದರೆ ಹೌದು ನಾನು ಟೀ ಮಾರಾಟ ಮಾಡಿ ಬಡ ಕುಟುಂದಿಂದ ಬಂದು ಪ್ರಧಾನಿಯಾಗಿದ್ದೇನೆ. ಆದರೆ ನಾನು ಟೀ ಮಾರಿದ್ದೇನೆ ಹೊರತು ದೇಶವನ್ನು ಮಾರಾಟ ಮಾಡಿಲ್ಲ ಎಂದು ಟಾಂಗ್ ಕೊಟ್ಟಿದ್ದರು.