ಅಹಮದಾಬಾದ್: 8 ತಿಂಗಳ ಮಗುವನ್ನು ನಿರ್ದಾಕ್ಷಿಣ್ಯವಾಗಿ ಮಗುವಿನ ಪಾಲಕರೇ ಥಳಿಸಿರುವ ಭೀಕರ ಘಟನೆ ಗುಜರಾತ್‍ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ.
ಹಲ್ಲೆ ಪರಿಣಾಮ ಮೆದುಳು ರಕ್ತಸ್ರಾವದಿಂದ ಬಳಲುತ್ತಿರುವ ಮಗುವನ್ನು ಇದೀಗ ಸಮೀಪದ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ದಾಖಲಿಸಲಾಗಿದೆ. ಮಗುವಿನ ಪೋಷಕರು ಸೂರತ್‍ನ ರಾಂದರ್ ಪಾಲನ್‍ಪುರ್ ಪಾಟಿಯಾದ ನಿವಾಸಿಗಳಾಗಿದ್ದು, ಇಬ್ಬರೂ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ಮಗುವನ್ನು ನೋಡಿಕೊಳ್ಳಲು ಆಗದ ಕಾರಣ ಕೇರ್‌ಟೇಕರ್ ನೇಮಿಸಿಕೊಂಡಿದ್ದರು. ಇದನ್ನೂ ಓದಿ: ‘ಬ್ಲಾಕ್‍ಚೈನ್’ ಮೂಲಕ ಮದುವೆಯಾದ ಭಾರತದ ಮೊದಲ ದಂಪತಿ!
Advertisement
Advertisement
ಪ್ರತಿನಿತ್ಯ ಮಗು ಜೋರಾಗಿ ಅಳುವ ಪರಿಯನ್ನು ಕೇಳಿ ನೆರೆಹೊರೆಯವರು ದಂಪತಿಗೆ ತಿಳಿಸಿದ್ದಾರೆ. ನಂತರ ದಂಪತಿ ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಒಮ್ಮೆ ಈ ಕ್ಯಾಮೆರಾದ ದೃಶ್ಯವನ್ನು ಪರಿಶೀಲಿಸಿದಾಗ ಮಗುವನ್ನು ಕೇರ್‍ಟೇಕರ್ ಅಮಾನವಿಯವಾಗಿ ಥಳಿಸಿದ್ದಾಳೆ. ಅಲ್ಲದೇ ಮಗುವಿನ ತಲೆಯನ್ನು ಹಾಸಿಗೆಗೆ ಪದೇ, ಪದೇ ಹೊಡೆಯುವುದು, ಮಗುವಿನ ಕೂದಲನ್ನು ತಿರುಚುವುದು ಮತ್ತು ನಿರ್ದಯವಾಗಿ ಹೊಡೆಯುವ ದೃಶ್ಯ ಕಂಡು ಬಂದಿದೆ. ನಂತರ ಘಟನೆ ಕುರಿತಂತೆ ದಂಪತಿ ಕೇರ್‌ಟೇಕರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಶುವಿನ ಅಜ್ಜಿ ಕಲಾಬೆನ್ ಪಟೇಲ್, ಆರೋಪಿ ಕೋಮಲ್ ಚಾಂಡ್ಲೇಕರ್‍ನನ್ನು ಮೂರು ತಿಂಗಳ ಹಿಂದೆ ಮಗುವನ್ನು ನೋಡಿಕೊಳ್ಳಲು ನೇಮಿಸಲಾಗಿದೆ. ಕೋಮಲ್ ಆರಂಭದಲ್ಲಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೆ ಆಕೆಯ ಜೊತೆಗೆ ಇದ್ದಾಗ ಮಗು ಅಳುವುದನ್ನು ನೋಡಿ ಅನುಮಾನ ಮೂಡಿತು. ನಂತರ ಪೋಷಕರು ಸಿಸಿಟಿವಿ ಕ್ಯಾಮೆರಾ ಚೆಕ್ ಮಾಡಿದಾಗ ಭಯಾನಕ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ‘ಏನ್ಷಿಯೆಂಟ್ ಸೀಕ್ರೆಟ್ಸ್ ಟು ರಿವರ್ಸ್ ಡಯಾಬಿಟೀಸ್’ ಕೃತಿ ಬಿಡುಗಡೆ ಮಾಡಿದ ಸಿಎಂ