– ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ, ಆಕ್ರೋಶ
ಗಾಂಧಿನಗರ: ಗುಜರಾತ್‌ನ (Gujarat) ವಲ್ಸಾದ್‌ನ ಉಮರ್ಗಾಮ್ (Umargam) ಪ್ರದೇಶದಲ್ಲಿ ಮೂರು ವರ್ಷದ ಮಗುವಿನ ಮೇಲೆ ಆಕೆಯ ತಂದೆಯ ಆಪ್ತ ಸ್ನೇಹಿತ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಘಟನೆ ಬಳಿಕ ಕಾಮುಕ ಆರೋಪಿ ಎಸ್ಕೇಪ್ ಆಗಿದ್ದಾನೆ. ಇನ್ನೂ ಲೈಂಗಿಕ ದೌರ್ಜನ್ಯದ ಸುದ್ದಿ ಹರಡುತ್ತಿದ್ದಂತೆ, ರೊಚ್ಚಿಗೆದ್ದ ಸ್ಥಳೀಯ ನಿವಾಸಿಗಳು ಉಮರ್ಗಾಮ್ ಪೊಲೀಸ್ ಠಾಣೆಗೆ (Umargam Police Station) ಮುತ್ತಿಗೆ ಹಾಕಿದ್ದಾರೆ. ಠಾಣೆ ಮುಂದೆಯೇ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಯನ್ನ ಬಂಧಿಸಿ, ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: 12 ನೂತನ ಕೈಗಾರಿಕಾ ಸ್ಮಾರ್ಟ್ ಸಿಟಿ, 10 ಲಕ್ಷ ಹೊಸ ಉದ್ಯೋಗ ಸೃಷ್ಟಿ: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ
ಇದಾದ ನಂತರ ಪೊಲೀಸರು ಮಧ್ಯಾಹ್ನದ ಒಳಗೆ ಆರೋಪಿಯನ್ನು ಹಿಡಿದು ತರುವುದಾಗಿ ಊರಿನ ಜನರಿಗೆ ಭರವಸೆ ನೀಡಿದ್ದರು. ಆದಾಗ್ಯೂ ಜಗ್ಗದ ಜನ ಶೀಘ್ರ ನ್ಯಾಯ ದೊರಕಿಸಿಕೊಡುವಂತೆ ಹಾಗೂ ಕಾಮುಕನಿಗೆ ಮರಣದಂಡನೆ ವಿಧಿಸುವಂತೆ ಪಟ್ಟು ಹಿಡಿದರು. ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಉಮರ್ಗಾಮ್‌ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು.
ಸದ್ಯ ತನಿಖೆ ಮುಂದುವರಿಸುತ್ತಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಇತ್ತ ಸಂತ್ರಸ್ತ ಮಗುವಿನ ವೈದ್ಯಕೀಯ ಪರೀಕ್ಷೆ ನಡೆಸುವ ಜೊತೆಗೆ ಶಾಂತಿ ಸುವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: Chikkaballapur | ಭೀಕರ ರಸ್ತೆ ಅಪಘಾತ – ಮದುವೆಗೆಂದು ತೆರಳುತ್ತಿದ್ದ ಅಪ್ಪ-ಅಮ್ಮ-ಮಗನ ದುರ್ಮರಣ