ಗಾಂಧಿನಗರ: ಗುಜರಾತ್‍ನ ರಾಜ್‍ಕೋಟ್‍ನಲ್ಲಿ ಮದುವೆ ಸಮಾರಂಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳು ಸೇರಿ ವರನಿಗೆ ಉಡುಗೊರೆಯಾಗಿ ನಿಂಬೆ ಹಣ್ಣನ್ನು ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್ ಆಗುತ್ತಿದೆ.
ದಿನೇ ದಿನೇ ನಿಂಬೆ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್‍ಕೋಟ್‍ನ ಧರೋಜಿ ಪಟ್ಟಣದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನಿಗೆ ಉಡುಗೋರೆ ನೀಡಲು ಆತನ ಸ್ನೇಹಿತರು ನಿಂಬೆ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
Advertisement
Advertisement
ವರನ ಸಂಬಂಧಿಕರು ಈ ಬಗ್ಗೆ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ನಿಂಬೆ ಹಣ್ಣಿನ ಬೆಲೆ ಸಾಕಷ್ಟು ಹೆಚ್ಚಾಗಿದೆ. ರಾಜ್‍ಕೋಟ್‍ನಲ್ಲಿ ಕೆಜಿಗೆ 250 ರೂ.ವನ್ನು ದಾಟಿದೆ. ಆದರೆ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ನಿಂಬೆ ಹಣ್ಣುಗಳನ್ನು ನೀಡಿದ್ದೇವೆ ಎಂದರು. ಇದನ್ನೂ ಓದಿ: 1 ಗಂಟೆ ಪುಸ್ತಕ ಓದಿದರೆ ಒಂದು ಉಡುಗೊರೆ – ಶಿಕ್ಷಣ ಪ್ರೇಮಿಯ ವಿನೂತನ ಪ್ರಯತ್ನ
Advertisement
गुजरात: राजकोट के धोराजी शहर में एक शादी समारोह के दौरान लोगों ने दूल्हे को नींबू भेंट किए।
दिनेश ने बताया, “इस समय राज्य और देश में नींबू की कीमतें बहुत बढ़ गई हैं। इस मौसम में नींबू की बहुत जरूरत पड़ती है। इसलिए मैंने नींबू भेंट किए हैं।” (16.04) pic.twitter.com/ciQ9MlwIC3
— ANI_HindiNews (@AHindinews) April 17, 2022
ಪ್ರಸ್ತುತ ಬೇಸಿಗೆ ಕಾಲದಲ್ಲಿ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ನಿಂಬೆ ಬೆಲೆ ಏರಿಕೆಯಾಗಿದೆ. ಈ ಬಾರಿ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ತಾಪಮಾನ ಹಾಗೂ ಹಬ್ಬ ಹರಿದಿನಗಳಿಂದ ಬೇಡಿಕೆ ಹೆಚ್ಚಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಶಿವಸೇನೆ ಶಾಸಕನ ಪತ್ನಿ ಶವ ಪತ್ತೆ
Advertisement
ತೆಲಂಗಾಣ, ರಾಜಸ್ಥಾನ ಮತ್ತು ದೇಶದ ಹಲವಾರು ಭಾಗಗಳಲ್ಲಿ ನಿಂಬೆ ಬೆಲೆ ಗಗನಕ್ಕೇರಿದೆ. ದೆಹಲಿಯ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಆಜಾದ್‍ಪುರ ಮಂಡಿಯಲ್ಲಿ ನಿಂಬೆಹಣ್ಣು ಕೆಜಿಗೆ 70 ರಿಂದ 90 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಹಣ್ಣಿನ ಬೆಲೆ ಗುಜರಾತ್‍ನಲ್ಲಿ ಕೆಜಿಗೆ 240 ರೂ.ಗೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಹಾಗೂ ಜೈಪುರದಲ್ಲಿ ನಿಂಬೆಹಣ್ಣು ಕೆಜಿಗೆ 200 ರೂ.ಕ್ಕೂ ಅಧಿಕ ಬೆಲೆಗೂ ದಾಟಿದೆ