ವಡೋದರಾ: ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (Rajeshwari Gayakwad) ಅವರ ಅತ್ಯುತ್ತಮ ಬೌಲಿಂಗ್, ಸೋಫಿ ಡಿವೈನ್ (Sophie Devine) ಅವರ ಆಲ್‌ರೌಂಡರ್ ಆಟದಿಂದ ಯುಪಿ ವಾರಿಯರ್ಸ್ (UP Warriorz) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) 45 ರನ್‌ಗಳಿಂದ ಜಯಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಗುಜರಾತ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ 153 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಯುಪಿ ವಿಕೆಟ್ ನಷ್ಟಕ್ಕೆ ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಹ್ಯಾಟ್ರಿಕ್ ಸೋಲುಗಳಿಂದ ಗುಜರಾತ್ ಕಂಗೆಟ್ಟಿದ ಗುಜರಾತ್‌ಗೆ ಈ ಗೆಲುವಿನಿಂದ ಪ್ಲೇ ಆಫ್ ಹಾದಿ ಜೀವಂತವಾಗಿದೆ.
ಯುಪಿ ಪರ ಫೋಬೆ ಲಿಚ್‌ಫೀಲ್ಡ್ 32 ರನ್, ಕ್ಲೋಯ್ ಟ್ರಯಾನ್ 30 ರನ್ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು. 8 ಮಂದಿ ಆಟಗಾರ್ತಿಯರು ಎರಡಂಕಿಯನ್ನು ದಾಟದ ಕಾರಣ ಪಂದ್ಯವನ್ನು ಸೋತಿದೆ. ಇದನ್ನೂ ಓದಿ: ಭಾರತಕ್ಕೆ ನಾವು ಹೋಗಲ್ಲ – ಐಸಿಸಿಗೆ ಬಾಂಗ್ಲಾ ಉತ್ತರ
𝐃𝐞𝐯𝐢𝐧𝐞 𝐏𝐨𝐰𝐞𝐫 💪
Couple of superb MAXIMUMS to sum up the @Giant_Cricket batting 🔥
Updates ▶️ https://t.co/Nlx8ASrDqO #TATAWPL | #KhelEmotionKa | #GGvUPW pic.twitter.com/EsrNnneqcb
— Women’s Premier League (WPL) (@wplt20) January 22, 2026
ಗುಜರಾತ್ ಪರ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ 4 ಓವರ್ ಎಸೆದು 16 ರನ್ ನೀಡಿ 3 ವಿಕೆಟ್ ಕೀಳುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ರೇಣುಕಾ ಸಿಂಗ್, ಸೋಫಿ ಡಿವೈನ್ ತಲಾ 2 ವಿಕೆಟ್ ಕಿತ್ತರು.
ಮೊದಲು ಬ್ಯಾಟ್ ಬೀಸಿದ ಗುಜರಾತ್ ಪರ ಬೆತ್ ಮೂನಿ 38 ರನ್, ಸೋಫಿ ಡಿವೈನ್ 50 ರನ್ (42 ಎಸೆತ, 2 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು.
ಎರಡನೇ ಸ್ಥಾನ:
ಈ ಪಂದ್ಯವನ್ನು ಗೆಲ್ಲುವ ಮೂಲಕ ಕೊನೆಯ ಸ್ಥಾನದಲ್ಲಿದ್ದ 6 ಅಂಕ ಸಂಪಾದಿಸಿದ ಗುಜರಾತ್ 2ನೇ ಸ್ಥಾನಕ್ಕೆ ಏರಿದೆ. ಮುಂಬೈ, ಡೆಲ್ಲಿ, ಯುಪಿ ತಲಾ 2 ಅಂಕ ಸಂಪಾದಿಸಿದ ಅನುಕ್ರಮವಾಗಿ 3,4,5 ಸ್ಥಾನಗಳನ್ನು ಪಡೆದಿದೆ. ಆಡಿರುವ ಎಲ್ಲಾ 5 ಪಂದ್ಯಗಳನ್ನು ಗೆದ್ದು 10 ಅಂಕ ಪಡೆದಿರುವ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ.
What happened there? 🤔
Early success for Renuka Singh and @Giant_Cricket 🥳
Updates ▶️ https://t.co/Nlx8ASrDqO #TATAWPL | #KhelEmotionKa | #GGvUPW pic.twitter.com/qHjzdGb8nS
— Women’s Premier League (WPL) (@wplt20) January 22, 2026

