ಗಾಂಧಿ ನಗರ: ಮುಂಬರುವ ಗುಜರಾತ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ತಿಳಿಸಿದೆ. ಇತ್ತ ಚುನಾವಣಾ ಆಯೋಗವು ಗುಜರಾತ ಚುನಾವಣೆಯ ದಿನಾಂಕವನ್ನು ಇಂದು ಪ್ರಕಟಿಸಲಿದೆ.
ಸೆಪ್ಟಂಬರ್ 25 ರಿಂದ ಅಕ್ಟೋಬರ್ 15 ರ ಅವಧಿಯಲ್ಲಿ ರಾಜ್ಯದ ಎಲ್ಲಾ 182 ಮತ ಕ್ಷೇತ್ರಗಳಲ್ಲಿ ಸುಮಾರು 18,000 ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಶೇ.48 ಜನರು ಬಿಜೆಪಿಗೆ ಮತ ಹಾಕುವದಗಿ ತಿಳಿಸಿದರೆ, ಶೇ. 38 ಜನರು ಕಾಂಗ್ರೆಸ್ ಗೆ ಮತ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
Advertisement
Advertisement
ಬಿಜೆಪಿ 115 ರಿಂದ 125 ಕ್ಷೇತ್ರಗಳಲ್ಲಿ ಜಯ ಪಡೆದರೆ, ವಿರೋಧಿ ಪಕ್ಷ ಕಾಂಗ್ರೆಸ್ 57ರಿಂದ 65 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.
Advertisement
ಆಡಳಿತದ ವಿರೋಧಿ ಅಲೆ, ಜಿಎಸ್‍ಟಿ ಜಾರಿ ಬಗ್ಗೆ ವರ್ತಕರ ಅಸಮಾಧಾನ, ಪಟೇಲ್, ಒಬಿಸಿ ಮತ್ತು ದಲಿತ ಸಮುದಾಯಗಳ ಪ್ರತಿಭಟನೆಗಳ ನಡುವೆಯೂ ಬಿಜೆಪಿ ಮತ್ತೊಮ್ಮೆ ಅಧಿಕಾರ ಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಕೆಲವರು ಜಿಎಸ್‍ಟಿ ಬಗ್ಗೆ ಅಸಮಧಾನವಿಲ್ಲ ಎಂದು ತಿಳಿಸಿದ್ದಾರೆ.
Advertisement
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಲಿದೆ ಎಂದು ಆಕ್ಸಿಸ್ ಮೈ ಇಂಡಿಯಾ ಹೇಳಿತ್ತು. ನಂತರ ದೆಹಲಿ, ಬಿಹಾರ ಮತ್ತು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಈ ಸಂಸ್ಥೆ ನಡೆಸಿದ್ದ ಸಮೀಕ್ಷೆಗಳು ಸರಿಯಾಗಿದ್ದವು.