ಗಾಂಧಿನಗರ: ಗುಜರಾತ್ ಚುನಾವಣೆಯ ಮತ ಎಣಿಕೆ(Gujarat Election Result) ಆರಂಭಗೊಂಡಿದ್ದು ಬಿಜೆಪಿ(BJP) ಆರಂಭಿಕ ಮುನ್ನಡೆ ಸಾಧಿಸಿದೆ.
ಅಂಚೆ ಮತಗಳ ಎಣಿಕೆಯ ಬಳಿಕ ಬ್ಯಾಲೆಟ್ ಎಣಿಕೆ ನಡೆಯುತ್ತಿದೆ. ಬೆಳಗ್ಗೆ 8:20ರ ಟ್ರೆಂಡ್ ಪ್ರಕಾರ ಬಿಜೆಪಿ 93, ಕಾಂಗ್ರೆಸ್ 14, ಆಪ್ 4 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
Advertisement
ಗುಜರಾತ್‌ನಲ್ಲಿ ಒಟ್ಟು 182 ಸ್ಥಾನಗಳಿದ್ದು ಬಹುಮತಕ್ಕೆ 92 ಸ್ಥಾನಗಳ ಅಗತ್ಯವಿದೆ. ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ತಿಳಿಸಿವೆ. ಹೀಗಾಗಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ.
Advertisement
Advertisement
2017ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬಿರುಸಿನ ಸ್ಪರ್ಧೆ ನಡೆದಿತ್ತು. ಆದರೂ ಅಂತಿಮವಾಗಿ ಬಿಜೆಪಿ 99, ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದುಕೊಂಡಿತ್ತು.
Advertisement
ಈ ಬಾರಿಯೂ ಬಿಜೆಪಿ ಗೆದ್ದರೆ ಸತತ 7ನೇ ಬಾರಿ ಅಧಿಕಾರದ ಗದ್ದುಗೆ ಏರಿದಂತಾಗುತ್ತದೆ. ಕಳೆದ 27 ವರ್ಷಗಳಿಂದ ಬಿಜೆಪಿ ಗುಜರಾತ್‌ನಲ್ಲಿ ಅಧಿಕಾರದಲ್ಲಿದೆ. 1995 ರಿಂದ ನಡೆದ 6 ಚುನಾವಣೆಗಳಲ್ಲಿ ಕಮಲ ಅರಳುತ್ತಲೇ ಇದೆ. ಮೋದಿ ಪ್ರಧಾನಿಯಾದ ಬಳಿಕ ನಾಯಕತ್ವದ ಕೊರತೆ ಅನುಭವಿಸಿದರೂ ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಆಡಳಿತ ವಿರೋಧಿ ಅಲೆಯನ್ನು ಕಡಿಮೆ ಮಾಡಿದ್ದು ಬಿಜೆಪಿಗೆ ನೆರವಾಗಿದೆ.