ಗಾಂಧಿನಗರ: ಗುಜರಾತ್ (Gujarat) ಮತ ಕಣದಲ್ಲಿ ಮಾತಿನ ಮತಾಪುಗಳ ಸಿಡಿತ ಜೋರಾಗಿದೆ. ತಮ್ಮನ್ನು ರಾವಣನಿಗೆ ಹೋಲಿಕೆ ಮಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದ್ದಾರೆ.
ಕಲೋಲ್ ರ‍್ಯಾಲಿಯಲ್ಲಿ ಮಾತಾಡಿದ ಅವರು, ತಮ್ಮನ್ನು ದೂಷಿಸಲು ಕಾಂಗ್ರೆಸ್ (Congress) ಪಕ್ಷದಲ್ಲಿ ಪೈಪೋಟಿ ಏರ್ಪಟ್ಟಿದೆ. ಮೋದಿಯನ್ನು ಅವಮಾನಿಸುವುದು ತನ್ನ ಹಕ್ಕೆಂದು ಕಾಂಗ್ರೆಸ್ ಭಾವಿಸಿದೆ ಎಂದು ಹರಿಹಾಯ್ದಿದರು.
Advertisement
Advertisement
ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅಂದ್ರೆ ತಮಗೆ ಗೌರವ ಇದೆ. ಆದರೆ ಅವರಿಗೆ ಹೈಕಮಾಂಡ್ ಆದೇಶ ಪಾಲಿಸೋದನ್ನು ಬಿಟ್ಟು ಬೇರೆ ಆಯ್ಕೆಗಳೇ ಇಲ್ಲ. ಖರ್ಗೆ ಅವರಿಂದ ಇಂತಹ ಹೇಳಿಕೆಯನ್ನು ಬಲವಂತವಾಗಿ ಕೆಲವರು ಕೊಡಿಸಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಸೋನಿಯಾ, ರಾಹುಲ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.
Advertisement
Advertisement
ಇದೇ ವೇಳೆ, ಪ್ರಧಾನಿ ಮೋದಿಯ ಇಂದಿನ ರೋಡ್ ಶೋ ದಾಖಲೆ ನಿರ್ಮಿಸಿದೆ. 50 ಕಿ.ಮೀ ರೋಡ್ ಶೋ ನಡೆಸಿದ ಮೋದಿ ಒಟ್ಟು ಮುರೂವರೆ ಗಂಟೆಗಳಲ್ಲಿ ಬರೋಬ್ಬರಿ 16 ಕ್ಷೇತ್ರಗಳಲ್ಲಿ ಮತಬೇಟೆ ನಡೆಸಿದ್ದಾರೆ. ಇದನ್ನೂ ಓದಿ: ಕಿವಿಯ ಉದ್ದನೆಯ ಕೂದಲಿಗಾಗಿ ಗಿನ್ನಿಸ್ ವರ್ಲ್ಡ್ ದಾಖಲೆ ಬರೆದ ನಿವೃತ್ತ ಶಿಕ್ಷಕ
Ambulance given way during a massive road show of Prime minister @narendramodi pic.twitter.com/lY2IuLfGO1
— Ankit Jain (@indiantweeter) December 1, 2022
ಇಂದು ಗುಜರಾತ್‍ನಲ್ಲಿ ಮೊದಲ ಹಂತದ ಮತದಾನವು ಸಣ್ಣಪುಟ್ಟ ಘಟನೆ ಹೊರತುಪಡಿಸಿದ್ರೆ ಶಾಂತಿಯುತವಾಗಿ ಮುಗಿದಿದೆ. 89 ಮತ ಕ್ಷೇತ್ರಗಳಲ್ಲಿ ಶೇಕಡಾ 57ರಷ್ಟು ಮತದಾನ ಆಗಿದೆ. ಇದು ಕಳೆದ ಚುನಾವಣೆಗೆ ಹೋಲಿಸಿದ್ರೆ ಕಡಿಮೆ ಆಗಿದ್ದು, ಎರಡನೇ ಹಂತದ ಮತದಾನ ಡಿಸೆಂಬರ್ 5ರಂದು ನಡೆಯಲಿದೆ. ಇದನ್ನೂ ಓದಿ: ಡಿ. 3 ರಂದು ಬೆಂಗಳೂರಿನಲ್ಲಿ ಗಣಿ ಹೂಡಿಕೆದಾರರ ಸಮಾವೇಶ : ಪ್ರಹ್ಲಾದ್ ಜೋಶಿ