ವಿಧಾನಸಭೆ ಚುನಾವಣೆ: ಮೋದಿ ಜನಪ್ರಿಯತೆಗೆ ಕಾರಣ ಏನು? – ಜನಮನ ಗೆದ್ದ ಗುಜರಾತ್ ಮಾಡೆಲ್ ಯೋಜನೆಗಳೇನು?

Public TV
6 Min Read
NARENDRA MODI 11

ನವದೆಹಲಿ: ಗುಜರಾತ್‌ನಲ್ಲಿ (Gujarat Election) ಕಳೆದ 27 ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಳಿಕ ಪ್ರಧಾನಿ ಹುದ್ದೆ ಅಲಂಕರಿಸಿದರು‌. ನರೇಂದ್ರ ಮೋದಿ ಗೈರಿನಲ್ಲೂ ಗುಜರಾತ್‌ನಲ್ಲಿ ಬಿಜೆಪಿ ಪ್ರಬಲ ಹಿಡಿತ ಹೊಂದಿದ್ದು, ಈ ಬಾರಿಯೂ ಅಧಿಕಾರಕ್ಕೆ ಬರುವ ಉಮೇದಿನಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ರಾಜಕಾರಣದಿಂದ ಹೊರ ಬಂದು ಎಂಟು ವರ್ಷಗಳು‌ ಕಳೆದರೂ ಅವರ ಜನಪ್ರಿಯತೆ ಗುಜರಾತ್‌ನಲ್ಲಿ ಒಂದಿಷ್ಟೂ ಕಡಿಮೆಯಾಗಿಲ್ಲ. ಈಗಲೂ ಮೋದಿ ಅಪಾರ ಪ್ರಮಾಣದ ಜನಮನ್ನಣೆ ಹೊಂದಿದ್ದಾರೆ. ಇದಕ್ಕೆ ಅವರ ಅವಧಿಯಲ್ಲಿನ ಐದು ಯೋಜನೆಗಳು ಕಾರಣ ಎನ್ನಲಾಗಿದ್ದು, ಈ ಯೋಜನೆಗಳು ದೇಶದಲ್ಲಿ ಗುಜರಾತ್ ಮಾಡೆಲ್ ಎನ್ನುವ ಟ್ರೆಂಡ್ ಹುಟ್ಟುಹಾಕಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

BJP Flage

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕುಡಿಯುವ ನೀರಿಗಾಗಿ ತಂದ ಯೋಜನೆಗಳು, ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ನಡೆದ ಪ್ರಯತ್ನಗಳು, ಮೂಲ ಸೌಕರ್ಯಗಳ ವ್ಯವಸ್ಥೆ ಹಾಗೂ ಡೈರಿ ಉದ್ಯಮಕ್ಕೆ ಬೆಂಬಲ, ಪ್ರವಾಸೋದ್ಯಮಕ್ಕೆ ನೀಡಿದ ಒತ್ತು ಈಗಲೂ ಅವರಿಗೆ ಶ್ರೀರಕ್ಷೆಯಾಗಿದ್ದು ರಾಷ್ಟ್ರ ರಾಜಕಾರಣದಲ್ಲಿ ಗುಜರಾತ್ ಚರ್ಚೆಯ ಕೇಂದ್ರ ಬಿಂದುವಾಗುವಂತೆ ಮಾಡಿದೆ.

ಕುಡಿಯುವ ನೀರಿನ ಕೊರತೆ ನೀಗಿಸಿದ ಮೋದಿ
ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ವೇಳೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸೌನಿ ಯೋಜನೆ ಅನುಷ್ಠಾನಗೊಳಿಸಿದರು. ನರ್ಮದಾ ನದಿಯಿಂದ ವಿಶೇಷವಾಗಿ ಸೌರಾಷ್ಟ್ರ ಮತ್ತು ಕಛ್ ಪ್ರದೇಶಗಳಲ್ಲಿ ಕುಡಿಯುವ ನೀರು ಒದಗಿಸಿದರು. ಈ ಯೋಜನೆಯ ಮೂಲಕ 10 ಲಕ್ಷ ಎಕರೆ ಭೂಮಿಯನ್ನು ಮೋದಿ ನೀರಾವರಿ ಮಾಡಿದರು. ಯೋಜನೆ ಅಡಿ ಸೌರಾಷ್ಟ್ರ ಪ್ರದೇಶದಲ್ಲಿ 1,370 ಕಿಮೀ ನೀರಿನ ಪೈಪ್‌ಲೈನ್‌ಗಳು ಹಾಕುವುದು ಪೂರ್ಣಗೊಂಡಿವೆ ಮತ್ತು 1,150 ಕಿಮೀ ಉದ್ದದ ಪೈಪ್‌ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ‌ ಒಂದು ಮಡಿಕೆ ನೀರಿಗಾಗಿ ಕಿಲೋ ಮೀಟರ್ ನಡೆಯಬೇಕಿದ್ದ ಜನರ ಪರಿಸ್ಥಿತಿ ಸುಧಾರಿಸಿದೆ. ಇದನ್ನೂ ಓದಿ: ಲೈವ್ ಸ್ಟ್ರೀಮ್ ನಡೆಸುತ್ತಿರುವಾಗಲೇ ಕೊರಿಯಾದ ಯುವತಿಗೆ ಮುಂಬೈನಲ್ಲಿ ಕಿರುಕುಳ – ಇಬ್ಬರು ಅರೆಸ್ಟ್

Sardar Sarovar Canal

ನರ್ಮದಾ ನದಿಗೆ ಕಾಲುವೆ, ಉಪ ಕಾಲುವೆಗಳನ್ನು ಹೆಚ್ಚಿಸಿದೆ. ಕಾಲುವೆಗಳ ಜಾಲ ಒಟ್ಟು 17 ಜಿಲ್ಲೆಗಳಲ್ಲಿ 71,748 ಕಿಮೀ ಉದ್ದವನ್ನು ಹೊಂದಿದೆ. ಪ್ರಧಾನಿಯಾಗಿ ನರೇಂದ್ರ ಮೋದಿ ಇತ್ತೀಚೆಗೆ ಗುಜರಾತ್‌ನ ಕಚ್ ಶಾಖಾ ಕಾಲುವೆಯನ್ನು ಉದ್ಘಾಟಿಸಿದರು. ಇದು ಪಶ್ಚಿಮ ಗುಜರಾತ್‌ನ ಕೊನೆಯ ಮೈಲಿಯನ್ನು ನರ್ಮದಾ ನದಿಯ ನೀರಿನಿಂದ ಮಧ್ಯ ಗುಜರಾತ್‌ನಲ್ಲಿ 750 ಕಿಮೀ ದೂರದಲ್ಲಿ ಸಂಪರ್ಕಿಸುತ್ತದೆ. ಇದಲ್ಲದೆ ಸರ್ದಾರ್ ಸರೋವರ ಅಣೆಕಟ್ಟು ಗುಜರಾತ್‌ನ 15 ಜಿಲ್ಲೆಗಳಲ್ಲಿನ 73 ತಾಲೂಕುಗಳಲ್ಲಿ 18.45 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಒಳಗೊಂಡಿರುವ 3,000 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಾವರಿ ಸೌಲಭ್ಯಗಳನ್ನು ಒದಗಿಸುತ್ತದೆ. ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಕುಡಿಯುವ ನೀರು ತಲುಪಿಸಿದೆ. 2019 ರಲ್ಲಿ ಪ್ರಧಾನ ಮಂತ್ರಿಯಾಗಿ ಪ್ರಾರಂಭಿಸಿದ ‘ನಲ್ ಸೇ ಜಲ ಯೋಜನೆ’ ಗುಜರಾತ್‌ನಲ್ಲಿ ಪೂರ್ಣಗೊಂಡಿದ್ದು, ಪ್ರಸ್ತುತ ರಾಜ್ಯದ ಎಲ್ಲಾ ಮನೆಗಳಿಗೆ ಕುಡಿಯುವ ನೀರಿನೊಂದಿಗೆ ಟ್ಯಾಪ್ ಸಂಪರ್ಕವನ್ನು ಹೊಂದಿವೆ.

ಶಿಕ್ಷಣದಲ್ಲಿ ಕ್ರಾಂತಿ
ಗುಜರಾತ್‌ನ ಸಾಕ್ಷರತೆ ಪ್ರಮಾಣವು 2021 ರಲ್ಲಿ 82.5% ರಷ್ಟಿದೆ. 2001 ರಲ್ಲಿ ನರೇಂದ್ರ ಮೋದಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ 69% ರಷ್ಟಿತ್ತು. ಈ ಅವಧಿಯಲ್ಲಿ ಶಿಕ್ಷಣಕ್ಕೆ ನೀಡಿದ ಒತ್ತಿನಿಂದ ಕಳೆದೊಂದು ದಶಕದಲ್ಲಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಂಕಿಅಂಶಗಳ ಪ್ರಕಾರ ಗುಜರಾತ್‌ನಲ್ಲಿ 2001 ರಲ್ಲಿ ಸುಮಾರು 17 ಲಕ್ಷ ವಿದ್ಯಾರ್ಥಿಗಳು ಮಾಧ್ಯಮಿಕ ಮತ್ತು ಹೈಯರ್ ಸೆಕೆಂಡರಿ ತರಗತಿಗಳಿಗೆ ದಾಖಲಾಗಿದ್ದರೆ, 2021 ರಲ್ಲಿ ಈ ಸಂಖ್ಯೆ 29 ಲಕ್ಷಕ್ಕೆ ಏರಿದೆ. ಡ್ರಾಪ್‌ಔಟ್ ದರದಲ್ಲೂ ತೀವ್ರ ಇಳಿಕೆ ಕಂಡುಬಂದಿದೆ. 2001 ರಲ್ಲಿ ಗುಜರಾತ್ ಶಾಲೆಗಳಲ್ಲಿ ಡ್ರಾಪ್ಔಟ್ ಪ್ರಮಾಣವು ಪ್ರಾಥಮಿಕದಲ್ಲಿ 25%, ಉನ್ನತ ಪ್ರಾಥಮಿಕದಲ್ಲಿ 52% ಮತ್ತು ಹೈಸ್ಕೂಲ್‌ನಲ್ಲಿ 70% ಇತ್ತು. 2021 ರಲ್ಲಿ ಪ್ರಾಥಮಿಕದಲ್ಲಿ ಕೇವಲ 1%, ಉನ್ನತ ಪ್ರಾಥಮಿಕದಲ್ಲಿ 4.5% ಶೇಕಡಾ ಮತ್ತು ಹೈಸ್ಕೂಲ್‌ನಲ್ಲಿ 23% ಕ್ಕೆ ಇಳಿದಿದೆ. 2002 ರಲ್ಲಿ 21 ವಿಶ್ವವಿದ್ಯಾನಿಲಯಗಳಿದ್ದರೇ 2022 ರಲ್ಲಿ ಇದು 103 ಕ್ಕೆ ಏರಿದೆ. ಇದೇ ಅವಧಿಯಲ್ಲಿ ಕಾಲೇಜುಗಳು 775 ರಿಂದ 3,117 ಕ್ಕೆ ಹೇಗೆ ಏರಿಕೆಯಾಗಿದೆ.

 modi children

ಶಾಂತಿ ಮತ್ತು ಭದ್ರತೆ
ಗಲಭೆಗಳಿಲ್ಲದ ವಾತಾವರಣ, ಸ್ಥಿರ ಕಾನೂನು ಮತ್ತು ಸುವ್ಯವಸ್ಥೆ, ಭಯೋತ್ಪಾದನೆ ಮುಕ್ತ ವಾತಾವರಣವು ಗುಜರಾತ್‌ನಲ್ಲಿ ಜನರು ಬಿಜೆಪಿಯನ್ನು (BJP) ಬೆಂಬಲಿಸುವ ಮತ್ತೊಂದು ವಿಷಯವಾಗಿದೆ. ಇದು ಚುನಾವಣೆಯ ಸಮಯದಲ್ಲಿ ಪಕ್ಷವು ಆಡಳಿತ ವಿರೋಧಿಯನ್ನು ಸೋಲಿಸುವಂತೆ ಮಾಡುತ್ತದೆ. ಪಿಎಂ ಮೋದಿ ಅವರು ತಮ್ಮ ಪ್ರಸ್ತುತ ಪ್ರಚಾರದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ರಾಜ್ಯದಲ್ಲಿ ಯುವಕರು ಕಳೆದ 20 ವರ್ಷಗಳಲ್ಲಿ ಯಾವುದೇ ಗಲಭೆಗಳನ್ನು ಹೇಗಿವೆ ಎಂದು ನೋಡಿಲ್ಲ ಮತ್ತು ಭಯೋತ್ಪಾದನೆಯ ಭೀತಿಯಿಂದ ದೂರವಿರಬೇಕು ಎಂಬುದನ್ನು ಒತ್ತಿ ಹೇಳಿದ್ದಾರೆ. ರಾಜ್ಯಾದ್ಯಂತ ದೊಡ್ಡ ಹೋರ್ಡಿಂಗ್‌ಗಳಲ್ಲಿ ಬಿಜೆಪಿ ಮತ್ತೆ ಮತದಾರರನ್ನು ಆಕರ್ಷಿಸಲು ‘ಸುರಕ್ಷಾ ಮತ್ತು ಶಾಂತಿ’ ಥೀಮ್‌ಗೆ ಒತ್ತು ನೀಡಲಾಗುತ್ತಿದೆ. ಮೋದಿಯವರು ತಮ್ಮ ಭಾಷಣಗಳಲ್ಲಿ ಅಹಮದಾಬಾದ್ ಮತ್ತು ಸೂರತ್‌ನಲ್ಲಿ ಹಿಂದಿನ ಬಾಂಬ್ ಸ್ಫೋಟಗಳನ್ನು ಉಲ್ಲೇಖಿಸಿ ಕೇಂದ್ರದ ಯುಪಿಎ ಸರ್ಕಾರವು ಹೇಗೆ ತನಗೆ ಸಹಕರಿಸಲಿಲ್ಲ ಮತ್ತು ಕಾಂಗ್ರೆಸ್ ಭಯೋತ್ಪಾದನೆಯ ಬಗ್ಗೆ ಮೃದುವಾಗಿದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಶಾಲೆಗೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ – ನೋ ಎಂಟ್ರಿ ಎಂದ ಶಿಕ್ಷಕರು

ಡೈರಿ ಕ್ರಾಂತಿ
ಭಾರತದ ಒಟ್ಟು ಹಾಲಿನ ಉತ್ಪಾದನೆಯ 1/5 ಭಾಗವು ಗುಜರಾತ್‌ನಲ್ಲಿದೆ. ನರೇಂದ್ರ ಮೋದಿ ಅವರು “ಸಹಕಾರಿ ಮಾದರಿ ಗ್ರಾಮ” ಎಂಬ ಪರಿಕಲ್ಪನೆಯನ್ನು ರಚಿಸುವ ಮೂಲಕ ರಾಜ್ಯದಲ್ಲಿ ಪಶುಸಂಗೋಪನೆ ಕ್ಷೇತ್ರದ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿದರು. ಗುಜರಾತ್‌ನಲ್ಲಿ 35 ಲಕ್ಷ ಹಾಲು ಉತ್ಪಾದಕರನ್ನು ನೇರವಾಗಿ ಮತ್ತು 10 ಲಕ್ಷ ಕಾರ್ಮಿಕರನ್ನು ಪರೋಕ್ಷವಾಗಿ ನೇಮಿಸಿಕೊಳ್ಳಾಗಿದೆ. ಈ ಕ್ಷೇತದಲ್ಲಿ 2020-21ರ ಅವಧಿಯಲ್ಲಿ 39,000 ಕೋಟಿ ವಹಿವಾಟು ನಡೆದಿದೆ. ಮುಂದಿನ ವರ್ಷದ ಇದು 46,000 ಕೋಟಿ ರೂ. ತಲುಪುವ ನಿರೀಕ್ಷೆ ಇದೆ.

amul diary

ಗುಜರಾತ್‌ನ ಡೈರಿ ಸಹಕಾರಿ ಜಾಲವು ಇಡೀ ಪ್ರಕ್ರಿಯೆಯಲ್ಲಿ ಯಾವುದೇ ಮಧ್ಯವರ್ತಿಯಿಲ್ಲದೆ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಗ್ರಾಹಕರಿಂದ ಪಡೆಯುವ ಹಣದಲ್ಲಿ ಶೇ.70ಕ್ಕೂ ಹೆಚ್ಚು ಹಣ ನೇರವಾಗಿ ರೈತರ ಜೇಬಿಗೆ ಸೇರುತ್ತಿದ್ದು, ಇದರಲ್ಲಿ ಮಹಿಳೆಯರೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಭಾರತದ ಅತಿದೊಡ್ಡ ಡೈರಿ ಸಹಕಾರಿ ಅಮುಲ್ ಗುಜರಾತ್‌ನ ಆನಂದ್‌ನಲ್ಲಿದೆ. ಕಚ್‌ನಲ್ಲಿರುವ ‘ಬನ್ನಿ’ ತಳಿಯ ಎಮ್ಮೆಗಳು ತಮ್ಮ ಹೆಚ್ಚಿನ ಇಳುವರಿ ಮತ್ತು ಹವಾಮಾನ-ನಿರೋಧಕ ಸಾಮರ್ಥ್ಯಗಳಿಂದ ಖ್ಯಾತಿ ಪಡೆದಿವೆ. 35 ಲಕ್ಷ ಹಾಲು ಉತ್ಪಾದಕರಲ್ಲಿ, 36% ಅಂದರೆ 12.5 ಲಕ್ಷ ರೈತರು ಮಹಿಳೆಯರಾಗಿದ್ದಾರೆ. ಈ‌ ಮಹಿಳೆಯರು ನಿರಂತರವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಪ್ರವಾಸೋದ್ಯಮ ಅಭಿವೃದ್ಧಿ
ಗುಜರಾತ್ ಈಗ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದು. ಇದರಲ್ಲಿ ಮೋದಿಯವರ ದೂರದೃಷ್ಟಿ ಮತ್ತು ರಾಜ್ಯವನ್ನು ಹಾಟ್ ಸ್ಪಾಟ್ ಮಾಡುವ ಉದ್ದೇಶ ಹೊಂದಿರುವ ಹಲವು ಯೋಜನೆಗಳಿವೆ. ರಾನ್ ಆಫ್ ಕಚ್‌ನಿಂದ ಕೆವಾಡಿಯಾದಲ್ಲಿನ ‘ಏಕತೆಯ ಪ್ರತಿಮೆ’ ವರೆಗೆ, ದ್ವಾರಕಾ-ಸೋಮನಾಥ್-ಅಂಬಾಜಿ ಸರ್ಕ್ಯೂಟ್ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್‌ನಲ್ಲಿರುವ ವಿಶ್ವದ ಅತಿದೊಡ್ಡ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಜನರನ್ನು ಆಕರ್ಷಿಸುತ್ತಿದೆ. ಮೋದಿ ಅವರು 2006 ರಲ್ಲಿ ಆರಂಭಿಸಿದ ‘ರಣ್ ಉತ್ಸವ’ ಧೋರ್ಡೊದಲ್ಲಿ 100 ದಿನಗಳ ಆಚರಣೆಯಾಗಿ ಬೆಳೆದಿದೆ ಮತ್ತು ಪ್ರತಿ ವರ್ಷ ಭಾರತ ಮತ್ತು ವಿದೇಶಗಳಿಂದ 4-5 ಲಕ್ಷ ಪ್ರವಾಸಿಗರನ್ನು ಇದರಲ್ಲಿ ಭಾಗಿಯಾಗುತ್ತಾರೆ. ಇದನ್ನೂ ಓದಿ: ವೇದಿಕೆಯ ಮೇಲೆ ಚುಂಬಿಸಿದ ವರ – ಮದುವೆ ಮುರಿದು ಠಾಣೆಗೆ ದೂರು ನೀಡಿದ ವಧು

sardar patel sports enclave

ಗಡಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ನಾಡಬೆಟ್‌ನಲ್ಲಿರುವ ಭಾರತ-ಪಾಕಿಸ್ತಾನ ಗಡಿ ವೀಕ್ಷಣಾ ಕೇಂದ್ರವನ್ನು ‘ಗುಜರಾತ್‌ನ ವಾಘಾ’ ಎಂದು ಅಭಿವೃದ್ಧಿಪಡಿಸಲಾಗಿದೆ. ಅಹಮದಾಬಾದ್‌ನ ಮೊಟೆರಾದಲ್ಲಿ 93 ಲಕ್ಷ ಚದರ ಅಡಿಗಳಲ್ಲಿ ನಿರ್ಮಿಸಲಾಗುತ್ತಿರುವ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್’ ಗುಜರಾತ್ ಒಲಿಂಪಿಕ್ಸ್ ಮಿಷನ್ ಅನ್ನು ಪ್ರಾರಂಭಿಸಲು ಹಾಗೂ 2036 ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಗುರಿಯೊಂದಿಗೆ ಹೊಂದಿದೆ. ಸಂಪೂರ್ಣ ಯೋಜನೆಗೆ 4,600 ಕೋಟಿ ವ್ಯಯ ಮಾಡಲಾಗುತ್ತಿದೆ. ಈ ಅಭಿವೃದ್ಧಿ ಯೋಜನೆಗಳು ಪ್ರಧಾನಿಯಾದ ಬಳಿಕವೂ ಮೋದಿ ಅವರ ಇಮೇಜ್ ಹೆಚ್ಚಲು ಕಾರಣವಾಗಿದೆ. ಅವರ ಕಾರಣದಿಂದಲೇ ಗುಜರಾತ್‌ನಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *