– ಕೆಲವೇ ತಿಂಗಳ ಅಂತರದಲ್ಲಿ ರಾಜೀನಾಮೆ ನೀಡಿದ ಬಿಜೆಪಿಯ 4ನೇ ಸಿಎಂ
– ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ್ದ ಕರ್ನಾಟಕದ ಸಿಎಂ ಯಡಿಯೂರಪ್ಪ
ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ಅವರು ದಿಢೀರ್ ರಾಜೀನಾಮೆ ನೀಡಿದ್ದಾರೆ.
Gujarat Chief Minister Vijay Rupani resigns pic.twitter.com/J8hl8GCHui
— ANI (@ANI) September 11, 2021
Advertisement
ಇಂದು ಮಧ್ಯಾಹ್ನ ರಾಜ್ಯಪಾಲರ ನಿವಾಸಕ್ಕೆ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯದಲ್ಲಿ ಮುಂದಿನ ವರ್ಷ ಅಂದರೆ ಡಿಸೆಂಬರ್ 2022ರಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಇದರ ಮಧ್ಯೆಯೇ ಇದೀಗ ವಿಜಯ್ ರೂಪಾನಿ ಅವರು ರಾಜೀನಾಮೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಬಿಜೆಪಿಗೆ ಬರುವ ಮುನ್ನ ದುಡ್ಡಿನ ಆಫರ್ ಕೊಟ್ಟಿದ್ದು ನಿಜ: ಶ್ರೀಮಂತ ಪಾಟೀಲ್
Advertisement
ರಾಜೀನಾಮೆ ಬಳಿಕ ಮಾತನಾಡಿದ ವಿಜಯ್ ರೂಪಾನಿ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ. ಗುಜರಾತ್ ಪ್ರಗತಿಗೆ ಹೊಸ ನಾಯಕತ್ವ ಬರಬೇಕೆಂದು ನಾನು ನಂಬುತ್ತೇನೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
Advertisement
ಬಿಜೆಪಿ ಸಿದ್ಧಾಂತ ಆಧರಿತ ಪಕ್ಷ, ಹೈಕಮಾಂಡ್ ಆದೇಶದಂತೆ ನಮ್ಮ ಪಕ್ಷದ ಕಾರ್ಯಕರ್ತರ ಉದ್ದೇಶಗಳು ಬದಲಾಗುತ್ತಿರುವುದು ಸಂಪ್ರದಾಯವಾಗಿದೆ. ಬಿಜೆಪಿ ಕಾರ್ಯಕರ್ತನಾಗಿ ನನ್ನ ಕೆಲಸವನ್ನು ಮುಂದುವರಿಸುತ್ತೇನೆ ಎಂದು ರೂಪಾನಿಯವರು ಹೇಳಿದ್ದಾರೆ.
ವಿಜಯ್ ರೂಪಾನಿಯವರ ರಾಜೀನಾಮೆಗೆ ನಿಖರ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಇತ್ತೀಚೆಗೆ ರಾಜೀನಾಮೆ ನೀಡಿದ ಬಿಜೆಪಿ ಮುಖ್ಯಮಂತ್ರಿಗಳ ಪೈಕಿ ವಿಜಯ್ ರೂಪಾನಿಯವರು ನಾಲ್ಕನೇಯವರಾಗಿದ್ದಾರೆ. ಜುಲೈನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಅಲ್ಲದೆ ತ್ರಿವೇಂದ್ರ ರಾವತ್ ಅವರನ್ನು ಬದಲಾಯಿಸಿದ ನಾಲ್ಕು ತಿಂಗಳ ಬಳಿಕ ತಿರಾತ್ ಸಿಂಗ್ ರಾವತ್ ಅವರು ಉತ್ತರಾಖಂಡ್‍ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.