ಭಾರತಕ್ಕೆ ನುಸುಳಿದ ಪಾಕಿಸ್ತಾನಿ ಮೀನುಗಾರರು- ನಾಲ್ವರ ಬಂಧನ

Public TV
1 Min Read
Pakistani fishermen seizes boats 1

ಗಾಂಧಿನಗರ: ಅಕ್ರಮವಾಗಿ ಭಾರತದ ಗಡಿಯನ್ನು ನುಸುಳುತ್ತಿದ್ದ ನಾಲ್ವರು ಪಾಕಿಸ್ತಾನಿ ಮೀನುಗಾರರನ್ನು ಬಿಎಸ್‍ಎಫ್‍ ಪಡೆ ಬಂಧಿಸಿ, ಅವರ ಬಳಿ ಇದ್ದ 10 ದೋಣಿಗಳನ್ನು ವಶ ಪಡಿಸಿಕೊಂಡಿದೆ.

ಇಂಡೋ ಪಾಕ್‍ನ ಗಡಿಭಾಗವಾದ ಗುಜರಾತ್‍ನ ಕಚ್ ಜಿಲ್ಲೆಯ ಹರಾಮಿ ನಲ್ಲಾ ಬಳಿ ಈ ಘಟನೆ ನಡೆದಿದೆ. ಕೆಲವು ಪಾಕಿಸ್ತಾನಿ ಮೀನುಗಾರರು ತಮ್ಮ ದೋಣಿಗಳೊಂದಿಗೆ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದರು. ಇದನ್ನು ಗಮನಿಸಿದ ಬಿಎಸ್‍ಎಫ್‍ನ ವಿಶೇಷ ತಂಡವು ತಕ್ಷಣ ಕ್ರಮ ಕೈಗೊಂಡು, ನಾಲ್ವರು ಮೀನುಗಾರರನ್ನು ಬಂಧಿಸಿದ್ದಾರೆ.

Pakistani fishermen seizes boats

ಈ ಹಿನ್ನೆಲೆಯಲ್ಲಿ ಹರಾಮಿ ನಲ್ಲಾ ಭೂಪ್ರದೇಶವನ್ನು ಬಿಎಸ್‍ಎಫ್ ಯೋಧರು ಸುತ್ತುವರಿದಿದ್ದು, ಬಿಗಿ ಭದ್ರತೆ ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ಆ ಪ್ರದೇಶದಲ್ಲಿ ಶೋಧ ಕಾರ್ಯವನ್ನು ನಡೆಸುತ್ತಿದೆ. ಹಾಗೂ ಪಾಕಿಸ್ತಾನಿ ಮೀನುಗಾರರಿಂದ ವಶಪಡಿಸಿಕೊಂಡ ದೋಣಿಯನ್ನು ಕೂಲಂಕೂಷವಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಸ್ಪದ ವಸ್ತುಗಳು ಪತ್ತೆ ಆಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಾವೇರಿಯಲ್ಲಿ ನಿರಂತರ ಮಳೆ – ಬ್ರಿಡ್ಜ್ ಕಂ ಬ್ಯಾರೇಜ್ ಮೇಲಿನ ಸಂಪರ್ಕ ಕಡಿತ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *