ಗಾಂಧೀನಗರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆ ಇಮೇಲ್ ಕಳುಹಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದ ಬದೌನ್‍ನ ಯುವಕನನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದೆ.
ಬದೌನ್‍ನ ಆದರ್ಶನಗರದ ನಿವಾಸಿ ಅಮನ್ ಸಕ್ಸೇನಾ (25) ಬಂಧಿತ ಆರೋಪಿ. ಈತ ಸೋಮವಾರ ಜಾಮ್‍ನಗರದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿ ಅವರಿಗೆ ಜೀವ ಬೆದರಿಕೆಯ ಇಮೇಲ್ ಕಳುಹಿಸಿದ್ದ. ಸಕ್ಸೇನಾ ಮುಂಬೈನ ಐಐಟಿಯಲ್ಲಿ ಬಿಟೆಕ್ ಪದವಿ ಪಡೆದಿದ್ದು, ಪ್ರೀತಿಸಿದ್ದ ಹುಡುಗಿಗೆ (Girl Friend) ಹತ್ತಿರವಾಗಿದ್ದ ವ್ಯಕ್ತಿಯಿಂದ ಸೇಡು ತೀರಿಸಿಕೊಳ್ಳಲು ಆ ಇಮೇಲ್ (E Mail) ಕಳುಹಿಸಿದ್ದನು.
ಘಟನೆಯೇನು?: ಪ್ರಧಾನಿ ನರೇಂದ್ರ ಮೋದಿ ಅವರ ಇಮೇಲ್‍ಗೆ ಬಂದಿದ್ದ ಜೀವ ಬೆದರಿಕೆ ಮೇಲ್ ಬಂದಿದ್ದನ್ನು ನೋಡಿದ್ದ ಪಿಎಂಒ (ಪ್ರಧಾನಿ ಕಚೇರಿ) ಘಟನೆಗೆ ಸಂಬಂಧಿಸಿ ತನಿಖೆ ನಡೆಸಲು ಗುಜರಾತ್ ಎಟಿಎಸ್‍ಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ಎಟಿಎಸ್ ವಿಚಾರಣೆಯನ್ನು ಪ್ರಾರಂಭಿಸಿತ್ತು. ಈ ವೇಳೆ ಬದೌನ್‍ನ ಆದರ್ಶನಗರದ ನಿವಾಸಿಯಿಂದ ಈ ಮೇಲ್ ಬಂದಿದೆ ಎಂದು ಪತ್ತೆ ಹಚ್ಚಿದ್ದಾರೆ. ಅದಾದ ಬಳಿಕ ತನಿಖೆಯನ್ನು ಮುಂದುವರಿಸಿದ ಎಟಿಎಸ್ ತಂಡ ಅಮನ್ ಸಕ್ಸೇನಾನನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಫುಲ್ ಆಕ್ಟೀವ್
ಈ ವೇಳೆ ಎಟಿಎಸ್ ಅಮನ್ ಸಕ್ಸೇನಾನನ್ನು ತೀವ್ರವಾಗಿ ವಿಚಾರಣೆ ನಡೆಸಿದೆ. ಈ ವೇಳೆ ಅಮನ್ ಸಕ್ಸೇನಾ ಮಾತನಾಡಿ, ತಾನು ಪ್ರೀತಿಸಿದ್ದ ಹುಡುಗಿಗೆ ಮತ್ತೊಬ್ಬ ಹುಡುಗ ಹತ್ತಿರವಾಗಿದ್ದ. ಇದರಿಂದಾಗಿ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲು ಆತನ ಹೆಸರಲ್ಲಿ ಪ್ರಧಾನಿ ಮೋದಿ ಅವರಿಗೆ ಜೀವ ಬೆದರಿಕೆಯ ಮೇಲ್ ಅನ್ನು ಕಳುಹಿಸಿರುವುದಾಗಿ ಬಹಿರಂಗ ಪಡಿಸಿದ್ದಾನೆ. ಈ ಮೂಲಕ ಹುಡುಗಿಗೆ ಹತ್ತಿರವಾಗಿದ್ದ ವ್ಯಕ್ತಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದ ಎಂಬುದು ಬೆಳಕಿಗೆ ಬಂದಿದೆ. ಕರ್ನಾಟಕದ ಒಂದಿಂಚೂ ಜಾಗ ಮಹಾರಾಷ್ಟ್ರಕ್ಕೆ ಹೋಗೋದಿಲ್ಲ: ಜೋಶಿ