ಗಾಂಧೀನಗರ: ಗುಜರಾತ್ ವಿಧಾನಸಭೆ ಚುನಾವಣೆಗೆ (Gujarat Assembly polls) ದಿನಾಂಕ ಘೋಷಣೆಯಾಗಿದೆ. ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೂ ಆರು ತಿಂಗಳು ಮುನ್ನವೇ ಕಾಂಗ್ರೆಸ್ (Congress), ಬಿಜೆಪಿ (BJP) ಸಾಕಷ್ಟು ತಯಾರಿ ಮಾಡಿಕೊಂಡಿದ್ದು, ಈ ಬಾರಿ ಆಪ್ (AAP) ಅಸ್ತಿತ್ವಕ್ಕಾಗಿ ಹೋರಾಟ ಆರಂಭಿಸಿದೆ.
Advertisement
ಆಪ್ ಕೂಡಾ ಸಾಕಷ್ಟು ಕ್ರಿಯಾಶೀಲವಾಗಿ ಕೆಲಸ ಆರಂಭಿಸಿದ್ದು, ಜನರಿಂದ ಸಿಎಂ ಅಭ್ಯರ್ಥಿಯನ್ನು ಅಯ್ಕೆ ಮಾಡುವ ಪ್ರಯತ್ನ ಮಾಡಿದೆ. ಗುಜರಾತ್ ಚುನಾವಣಾ ಅಖಾಡಕ್ಕೆ ಆಪ್ ಇಳಿದಿರುವ ಹಿನ್ನೆಲೆ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಒತ್ತಡ ಹೆಚ್ಚುವಂತೆ ಮಾಡಿದ್ದು, ಆಪ್ ಯಾರ ಮತಗಳಿಗೆ ಕನ್ನ ಹಾಕಲಿದೆ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಾಮ್‌ನಗರ ಉತ್ತರದಿಂದ ಬಿಜೆಪಿ ಟಿಕೆಟ್
Advertisement
Advertisement
1985 ರಿಂದ 2017ರ ನಡುವಿನ ಆರು ಚುನಾವಣೆಗಳಲ್ಲಿ ಬಿಜೆಪಿಯ ಮತಗಳಿಕೆ ಹೆಚ್ಚಾಗಿ ನಲವತ್ತರ ಗಡಿ ದಾಟಿದೆ. ಆದರೆ ಕಾಂಗ್ರೆಸ್ ಕೂಡ ಹಿಂದೆ ಬಿದ್ದಿಲ್ಲ. ಇದು ಮೂವತ್ತು ಮತ್ತು ಅದಕ್ಕೂ ಹೆಚ್ಚಿನ ಮತ ಪ್ರಮಾಣವನ್ನು ಗಳಿಸಿದೆ. ಕಳೆದ ಚುನಾವಣಾ ಸಮಯದಲ್ಲಿ 40% ಅಂಕವನ್ನು ಮೀರಿದೆ. ರಾಹುಲ್ ಗಾಂಧಿ (Rahul Gandhi) ಅವರು ಉತ್ಸಾಹಭರಿತ ಪ್ರಚಾರದ ಬಳಿಕವೂ ಕಾಂಗ್ರೆಸ್ ಚುನಾವಣೆ ಸೋತಿತು. ಇದನ್ನೂ ಓದಿ: ಮೋರ್ಬಿ ಸೇತುವೆ ದುರಂತ – ನದಿಗೆ ಹಾರಿ ಜನರ ಪ್ರಾಣ ಉಳಿಸಿದ ಮಾಜಿ ಶಾಸಕನಿಗೆ ಬಿಜೆಪಿಯಿಂದ ಟಿಕೆಟ್
Advertisement
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಚಾರವನ್ನು ಹೆಚ್ಚಿಸಿದ ನಂತರ ಸೂರತ್ ಭಾಗ ಬಿಜೆಪಿಯ ರಕ್ಷಣೆಗೆ ಬಂದಿತು ಎಂದು ಹಿರಿಯ ರಾಜಕೀಯ ಪತ್ರಕರ್ತ ಇಫ್ತಿಕರ್ ಗಿಲಾನಿ ವಿಶ್ಲೇಷಿಸುತ್ತಾರೆ. 1995 ರಿಂದ ಬಿಜೆಪಿ-ಕಾಂಗ್ರೆಸ್ ನಡುವಿನ ಅಂತರವು ಹೆಚ್ಚುತ್ತಲೇ ಇತ್ತು ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಅದು ಕಡಿಮೆಯಾಗಿದೆ, 2012 ಮತ್ತು 2017 ರಲ್ಲಿ ಗಮನಾರ್ಹ ಬದಲಾವಣೆಯಾಗಿದೆ.
ನಗರ-ಗ್ರಾಮೀಣ ವಿಭಜನೆ:
ಇಡೀ ಗುಜರಾತ್‍ನಲ್ಲಿ ಕಾಂಗ್ರೆಸ್ ದುರ್ಬಲ ಪಕ್ಷವಾಗಿದೆ ಎಂಬುದು ಒಪ್ಪಲು ಸಾಧ್ಯವಿಲ್ಲ ಎಂದು ಸ್ಥಳೀಯ ಚುನಾವಣಾ ತಜ್ಞರು ಹೇಳುತ್ತಾರೆ. ಗ್ರಾಮೀಣ ಪ್ರದೇಶವು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಲ್ಲಿ, 2017ರ ಚುನಾವಣೆಯಲ್ಲಿ ಪಕ್ಷವು ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‍ನ ಸಂಖ್ಯೆ 57 ರಿಂದ 71ಕ್ಕೆ ಏರಿತು. ಬಿಜೆಪಿ 77 ರಿಂದ 63 ಕ್ಕೆ ಇಳಿದಿತ್ತು. ವಿಧಾನಸಭೆ ಚುನಾವಣೆ ಬಳಿಕ ನಡೆದ 42 ನಗರ ಸ್ಥಾನಗಳ ಚುನಾವಣೆಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – 14 ಮಂದಿ ಮಹಿಳೆಯರು ಸೇರಿ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ
ಆದರೆ ಈ ಚುನಾವಣಾ ಫಲಿತಾಂಶದಲ್ಲಿ ಆಸಕ್ತಿದಾಯಕ ಹೊಸ ವಿಚಾರ ಸೇರ್ಪಡೆಗೊಂಡಿದೆ. ಈ ಚುನಾವಣೆಯಲ್ಲಿ ಎಎಪಿ ಮೂರನೇ ಪಕ್ಷವಾಗಿ ಹೊರ ಹೊಮ್ಮಿದೆ. ಎಎಪಿ ಪ್ರಾಥಮಿಕವಾಗಿ ನಗರ ಕೇಂದ್ರಿತ ಪಕ್ಷವಾಗಿದೆ. ಅದರ ನಾಯಕ ಅರವಿಂದ್ ಕೇಜ್ರಿವಾಲ್‍ಗೆ (Arvind Kejriwal) ಅಹಮದಾಬಾದ್, ಸೂರತ್ ಮತ್ತು ಇತರ ನಗರಗಳಲ್ಲಿ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. 2021ರ ಸೂರತ್ ಮುನ್ಸಿಪಲ್ ಚುನಾವಣೆಯಲ್ಲಿ, ಎಎಪಿ ಕಾಂಗ್ರೆಸ್ ಬದಲಿಗೆ ವಿರೋಧ ಪಕ್ಷವಾಯಿತು. ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ಗಾಂಧಿನಗರದಲ್ಲೂ ಕಾಂಗ್ರೆಸ್‍ಗೆ ಭಾರಿ ಹಾನಿ ಮಾಡಿದೆ. ಇದು ಎಎಪಿ ಕಾಂಗ್ರೆಸ್ ಮತಗಳನ್ನು ಕಡಿತಗೊಳಿಸುತ್ತದೆ ಮತ್ತು ಬಿಜೆಪಿಗೆ ಸಹಾಯ ಮಾಡುತ್ತದೆ ಎಂಬ ಸಾಮಾನ್ಯ ಗ್ರಹಿಕೆಗೆ ಕಾರಣವಾಗುತ್ತದೆ.
ಆದರೆ ಎಎಪಿಯನ್ನು ಕೇವಲ ಕಾಂಗ್ರೆಸ್ ವೋಟ್ ಕಟ್ಟರ್ ಎಂದು ತಳ್ಳಿಹಾಕುವುದು ಮೂರ್ಖತನವಾಗಬಹುದು, ಅರವಿಂದ್ ಕೇಜ್ರಿವಾಲ್ ಅವರ ಪಕ್ಷವು ನಗರ ಪ್ರದೇಶಗಳಲ್ಲಿ ಕೆಲವು ಕಾಂಗ್ರೆಸ್ ಮತಗಳನ್ನು ಪಡೆಯಬಹುದು ಆದರೆ ಈ ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷವು ಬಲಿಷ್ಠವಾಗಿಲ್ಲ ಎನ್ನುವ ಅಂಶವನ್ನು ಮರೆಯುವಂತಿಲ್ಲ. ಇಲ್ಲಿ ಆಪ್ ಕಾಂಗ್ರೆಸ್‍ಗಿಂತ ಬಿಜೆಪಿಗೂ ಹೆಚ್ಚು ಹಾನಿ ಮಾಡುವ ನಿರೀಕ್ಷೆಗಳಿದೆ.
ನಗರ ಪ್ರದೇಶಗಳಲ್ಲಿ ಬಿಜೆಪಿಯ ಒಂದಷ್ಟು ಮತಗಳನ್ನು ಆಪ್ ಕಿತ್ತುಕೊಂಡರು ಕಾಂಗ್ರೆಸ್ ಪ್ರಬಲವಾಗಿರುವ ನಗರ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕಾಂಗ್ರೆಸ್ ಗ್ರಾಮೀಣ ಪ್ರದೇಶಗಳನ್ನು ಉಳಿಸಿಕೊಂಡು ನಗರ ಕ್ಷೇತ್ರಗಳಲ್ಲಿ ಆಪ್‍ನಿಂದ ಲಾಭವಾದಲ್ಲಿ ಕೈ ಪಡೆ ಗೆಲುವಿನ ದಡಕ್ಕೆ ಸನಿಹವಾಗಬಹುದು. ಒಂದು ವೇಳೆ ನಗರ ಭಾಗದಲ್ಲಿ ಆಪ್ ಕೆಲವು ಸ್ಥಾನಗಳನ್ನು ಗೆದ್ದರು, ಬಲಿಷ್ಠವಾಗಿರುವ ಕಾಂಗ್ರೆಸ್ ಒಟ್ಟಾಗುವ ಸಾಧ್ಯತೆಗಳಿದೆ. ಈ ಹಿಂದೆ ದೆಹಲಿಯಲ್ಲಿ ಮೈತ್ರಿ ಸರ್ಕಾರ ನಡೆಸಿದ ಉದಾಹರಣೆಯೂ ಇದೆ.
ಕಾಂಗ್ರೆಸ್‍ಗೆ ಸವಾಲುಗಳು:
ಬಿಜೆಪಿ ಕಳೆದ 27 ವರ್ಷಗಳಿಂದ ಸತತವಾಗಿ ಅಧಿಕಾರದಲ್ಲಿದೆ. ಪಕ್ಷಕ್ಕೆ ಸಂಪೂರ್ಣ ಜನಪ್ರಿಯತೆಯಿಲ್ಲದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಬಲದಿಂದ ಅದು ಗೆಲ್ಲಬಹುದು. ಕಳೆದ ಬಾರಿ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ರಾಹುಲ್ ಗಾಂಧಿ ಈ ಬಾರಿ ಭಾರತ್ ಜೋಡೋ ಯಾತ್ರೆಯಲ್ಲಿದ್ದಾರೆ. ಗುಜರಾತ್ ಚುನಾವಣಾ ಮಾಂತ್ರಿಕ ಅಹ್ಮದ್ ಪಟೇಲ್ ನಿಧನರಾಗಿದ್ದಾರೆ. ಸೋನಿಯಾಗಾಂಧಿ ಪೂರ್ಣ ಪ್ರಮಾಣದಲ್ಲಿ ಚುನಾವಣೆಯಲ್ಲಿ ತೊಡಗಿಸಿಕೊಂಡಿಲ್ಲ. ಹೊಸ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗುಜರಾತ್‍ನಲ್ಲಿ ಪ್ರಭಾವ ಬೀರಬಲ್ಲರು ಎನ್ನಲು ಸಾಧ್ಯವಿಲ್ಲ. ಈ ನಡುವೆ ಪಾಟಿದಾರ್ ಹೋರಾಟಗಾರ ಹಾರ್ದಿಕ್ ಪಟೇಲ್ ಬಿಜೆಪಿ ಸೇರಿದ್ದಾರೆ. ಹೀಗಾಗಿ ಸ್ಥಳೀಯ ನಾಯಕರ ಮೇಲೆ ಚುನಾವಣೆ ಹೆಚ್ಚು ಕೇಂದ್ರಿಕೃತವಾಗಿದ್ದು, ಇವುಗಳನ್ನು ಮೀರಿ ಕಾಂಗ್ರೆಸ್ ಜನರ ಮನ ಗೆಲ್ಲಬೇಕಿದೆ.