ನ್ಯೂಯಾರ್ಕ್: ತನ್ನದೇ ದಾಖಲೆ ಮುರಿದು ವಿಶ್ವದ ಅತಿ ಉದ್ದದ ಲಿಮೋಸಿನ್ ಕಾರು ಗಿನ್ನಿಸ್ ದಾಖಲೆ ನಿರ್ಮಿಸಿದೆ.
‘ದಿ ಅಮೇರಿಕನ್ ಡ್ರೀಮ್’ ಎಂಬ ಹೆಸರಿನ ಲಿಮೋಸಿನ್ ಕಾರನ್ನು 1986ರಲ್ಲಿ ಪ್ರಸಿದ್ಧ ಮೆಕ್ಯಾನಿಕ್ ಜೇ ಓರ್ಬರ್ಗ್ ಅವರು ತಯಾರಿಸಿದ್ದರು. ಮೊದಲಿಗೆ ಈ ಕಾರು ಬರೋಬ್ಬರಿ 60 ಅಡಿ ಉದ್ದವಿತ್ತು. ನಂತರದಲ್ಲಿ ಅವರು ಅದರ ಉದ್ದವನ್ನು 100 ಅಡಿಯವರೆಗೆ ವಿಸ್ತರಿಸಿದ್ದಾರೆ.
Advertisement
ಸಾಧಾರಣ ಕಾರುಗಳು ಸರಾಸರಿ 14 ಅಡಿಗಳನ್ನು ಹೊಂದಿರುತ್ತವೆ. ಆದರೆ ಇದರ ಉದ್ದವು 10 ಟಾಟಾ ನ್ಯಾನೋ ಕಾರುಗಳನ್ನು ಸಾಲಾಗಿ ನಿಲ್ಲಿಸಿ ಜೋಡಿಸಿದರೆ ಇದು ಒಂದು ಕಾರು ಆಗುತ್ತದೆ. ಈಗಾಗಲೇ ಈ ಲಿಮೋಸಿನ್ ಹಾಲಿವುಡ್ ಚಿತ್ರರಂಗದ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ. ಆದಾಗ್ಯೂ, ಇದರ ನಿರ್ವಹಣೆಯು ಆರ್ಥಿಕವಾಗಿ ಅಸಾಧ್ಯವಾದ ಕಾರಣ ನ್ಯೂಜೆರ್ಸಿಯ ಗೋದಾಮಿನಲ್ಲಿ ಇಡಲಾಗಿತ್ತು.
Advertisement
Advertisement
ಮೊದಲಿಗೆ ಕಾರು 60 ಅಡಿ ಉದ್ದ ಇದ್ದಾಗ ಇದನ್ನು ಬಾಡಿಗೆಗೆ ನೀಡಲಾಗುತ್ತಿತ್ತು. ನಂತರ ಇದರ ಐಷಾರಾಮಿ ಫೀಚರ್‍ಗಳ ನಿರ್ವಹಣೆಯು ಆರ್ಥಿಕವಾಗಿ ಅಸಾಧ್ಯವೆಂದು ಪರಿಗಣಿಸಲಾಯಿತು. ಆದಾಗ್ಯೂ, ನ್ಯೂಯಾರ್ಕ್‍ನ ನಸ್ಸೌ ಕೌಂಟಿಯಲ್ಲಿರುವ ಆಟೋಸಿಯಮ್ ಟೆಕ್ನಿಕಲ್ ಟೀಚಿಂಗ್ ಮ್ಯೂಸಿಯಂನ ಮಾಲೀಕ ಮೈಕೆಲ್ ಮ್ಯಾನಿಂಗ್, ಲಿಮೋಸಿನ್ ಅನ್ನು ತುಂಬಾ ಇಷ್ಟಪಟ್ಟು ಖರೀದಿಸಿದ್ದರು. ನಂತರದಲ್ಲಿ ಆಟೋಸಿಯಮ್ಸ್ ಗುತ್ತಿಗೆ ಮುಗಿದ ನಂತರ ಕಾರನ್ನು ಆನ್‍ಲೈನ್ ಶಾಪಿಂಗ್ ತಾಣ ಇಬೇಯಲ್ಲಿ ಮಾರಿದರು. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ವ್ಯಾಕ್ಯೂಮ್ ಬಾಂಬ್ ಪ್ರಯೋಗ ಆರೋಪ – ಏನಿದರ ವಿಶೇಷ?
Advertisement
ಎಷ್ಟೋ ದಿನಗಳ ಕಾಲ ನ್ಯೂಜೆರ್ಸಿಯ ಗೋದಾಮಿನಲ್ಲಿ ನಿಲುಗಡೆ ಮಾಡಿದ್ದ ಕಾರಿನ ಎಲ್ಲಾ ಭಾಗಗಳು ತುಕ್ಕು ಹಿಡಿದ್ದು, ಕಾರಿನ ಕಿಟಕಿಗಳೆಲ್ಲಾ ಒಡೆದು ಹೋಗಿದ್ದವು. ನಂತರದಲ್ಲಿ ಮೈಕೆಲ್ ಡೆಜರ್ ಅವರು 2019ರಲ್ಲಿ ಲಿಮೋಸಿನ್ ಅನ್ನು ಖರೀದಿಸಿ ಅದಕ್ಕೆ ಈಗ ಮತ್ತೆ ಹೊಸ ರೂಪವನ್ನು ನೀಡಿದ್ದಾರೆ. ಲಿಮೋಸಿನ್ ಈಗ ಪ್ರಸ್ತುತವಾಗಿ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ಡೆಜರ್‌ಲ್ಯಾಂಡ್ ಪಾರ್ಕ್ ಕಾರ್ ಮ್ಯೂಸಿಯಂನಲ್ಲಿ ಪ್ರವಾಸಿಗರ ಆಕರ್ಷಣೆಗಾಗಿ ಇರಿಸಲಾಗಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಆಮದಿಗೆ ಮಾತ್ರ ಅಮೆರಿಕ ನಿರ್ಬಂಧ – ಯುರೇನಿಯಂಗೆ ಇಲ್ಲ ನಿಷೇಧ
ಇದರಲ್ಲಿ ಬರೋಬ್ಬರಿ 75 ಜನರು ಕುಳಿತು ಪ್ರಯಾಣ ಮಾಡಬಹುದಾಗಿದೆ. 100 ಅಡಿ ಉದ್ದ ಇರುವ ಈ ಕಾರಿನಲ್ಲಿ ಹೆಲಿಪ್ಯಾಡ್, ಡೈವಿಂಗ್ ಬೋರ್ಡ್ ಸೇರಿದಂತೆ ಈಜುಕೊಳ, ಗಾರ್ಡನ್ ಅನ್ನು ಕೂಡಾ ಹೊಂದಿದೆ.