ಬೆಂಗಳೂರು: ಕೊರೊನಾ ಮತ್ತೆ ತನ್ನ ಆರ್ಭಟ ಶುರುಮಾಡಿದೆ. ಮೂರನೇ ಅಲೆ ಆರಂಭವಾಗಿದ್ದು, ಸರ್ಕಾರ ಹೊಸ ಟಫ್ ರೂಲ್ಸ್ ಜಾರಿಗೆ ತಂದಿದೆ. ಇಂದಿನಿಂದ ವೀಕ್ ಎಂಡ್ ಕಫ್ರ್ಯೂ ಕೂಡ ಶುರುವಾಗಲಿದೆ. ಈ ನಡುವೆ ಡಾ.ವಿಶಾಲ್ ರಾವ್ ಅವರು ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ನೀಡಬೇಕು ಎಂದು ವಿನಂತಿಸಿಕೊಂಡಿದರು.
ಪ್ರಸ್ತುತ ಆರೋಗ್ಯ ಇಲಾಖೆಗೆ ಹೊಸ ತಲೆನೋವೊಂದು ಶುರುವಾಗಿದೆ. ಸೆಲ್ಫ್ ಕೋವಿಡ್ ಟೆಸ್ಟಿಂಗ್ ಮಾಡಿಕೊಳ್ಳುವವರು ಸರ್ಕಾರಕ್ಕೆ ಮತ್ತು ಸಮಾಜಕ್ಕೆ ಹೊಸ ತಲೆನೋವನ್ನ ಸೃಷ್ಟಿ ಮಾಡ್ತಿದ್ದಾರೆ. ಈ ಕುರಿತು ಮಾತನಾಡಿದ ವಿಶಾಲ್ ಅವರು, ಜನರ ಅನುಕೂಲಕ್ಕೆ ಎಂದು ಟೆಸ್ಟಿಂಗ್ ಕಿಟ್ ಬಂದಿದ್ದು, ಅದನ್ನು ಜನರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮೆಡಿಕಲ್ ಶಾಪ್ ಗಳಲ್ಲಿ ಕೋವಿ ಸೆಲ್ಫ್ ಟೆಸ್ಟ್ ಕಿಟ್ ಸಿಗುತ್ತೆ. ಆ ಕಿಟ್ ನಲ್ಲಿ ಟೆಸ್ಟಿಂಗ್ ಮಾಡಿಕೊಳ್ಳುವವರು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡ್ತಿಲ್ಲ. ಒಂದು ವೇಳೆ ಪಾಸಿಟಿವ್ ಬಂದರೂ ಅದು ಸರ್ಕಾರಕ್ಕೆ ತಿಳಿಯುತ್ತಿಲ್ಲ ಎಂದು ವಿವರಿಸಿದರು. ಇದನ್ನೂ ಓದಿ: 700 ಕುರಿಗಳಿಂದ ವ್ಯಾಕ್ಸಿನ್ ಸಂದೇಶ- ಮೆಚ್ಚಿದ ನೆಟ್ಟಿಗರು
Advertisement
Advertisement
ಯಾರಿಂದ ಸೋಂಕು ಹರಡುತ್ತಿದೆ ಎಂಬುದರ ಬಗ್ಗೆ ಆರೋಗ್ಯ ಇಲಾಖೆಗೆ ಯಾವುದೇ ಮಾಹಿತಿ ಲಭ್ಯವಾಗ್ತಿಲ್ಲ. ಸರ್ಕಾರಕ್ಕೆ ಕೆಲವರು ಮಾಹಿತಿ ನೀಡಿದರೆ, ಇನ್ನೂ ಕೆಲ ವರ್ಗದವರು ಯಾವ ಮಾಹಿತಿಯನ್ನು ನೀಡದೇ ಸುಮ್ಮನೆ ಇರುತ್ತಿದ್ದಾರೆ. ಮೆಡಿಕಲ್ ಶಾಪ್ ಗಳಲ್ಲೂ ಟೆಸ್ಟ್ ಕಿಟ್ ಕೊಡುವಾಗ ಯಾವುದೇ ನೋಂದಣಿ ಮಾಡಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.
Advertisement
Advertisement
ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ಐಸಿಎಂಆರ್ ಕೂಡಲೇ ಈ ಟೆಸ್ಟಿಂಗ್ ಗೆ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಸೆಲ್ಫ್ ಟೆಸ್ಟಿಂಗ್ ಕಿಟ್ ದುರುಪಯೋಗ ತಡೆಯಲು ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಸಲಹೆಯನ್ನು ನೀಡಿದರು. ಇದನ್ನೂ ಓದಿ: ಬಟನ್ ಒತ್ತಿದ್ರೆ ಕಾರಿನ ಬಣ್ಣವೇ ಬದಲಾಗುತ್ತೆ
ಕೂಡಲೇ ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ಸೆಲ್ಫ್ ಟೆಸ್ಟಿಂಗ್ ಕಿಟ್ ಮತ್ತು ಆ್ಯಂಟಿಜನ್ ಕಿಟ್ ಗಳ ಟೆಸ್ಟಿಂಗ್ ರಿಪೋರ್ಟ್ ದಾಖಲೆಯಾಗುವಂತೆ ಮಾಡುವ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಪ್ರೈವೆಟ್ ಲ್ಯಾಬ್ ನಲ್ಲಿ ಆ್ಯಂಟಿಜನ್ ಕಿಟ್ ರಿಪೋರ್ಟ್ ಕೂಡ ದಾಖಲು ಆಗ್ತಿಲ್ಲ. ಈ ಎರಡು ಮಾದರಿಯ ಟೆಸ್ಟಿಂಗ್ ಬಗ್ಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಬೇಕು. ಜೊತೆಗೆ ಇದರಿಂದಾಗುವ ಅನಾಹುತವನ್ನು ಕೂಡಲೇ ತಡೆಯಬೇಕು ಎಂದು ಎಚ್ಚರಿಸಿದರು.