ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾಗಿದ್ದರೂ ಗೆರಿಲ್ಲಾ ವಾರ್ ಬಿಸಿ ಜೋರಾಗಿದೆ. ರಾಜಣ್ಣ ಆಂಡ್ ಸನ್ ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದು, ಸಿಎಂ ಗೇಮ್ ಅಸಲಿ ಆಟ ಚಾಲೂ ಆಗಿದೆ. ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಪವರ್ ಗೇಮ್ ವಾರ್ ಶುರುವಾಗಿದೆ. ಅದರ ಭಾಗವಾಗಿಯೇ ಡಿಕೆಶಿ ವಿರುದ್ಧ ರಾಜಣ್ಣ (Rajanna), ರಾಜಣ್ಣ ಪುತ್ರ ರಾಜೇಂದ್ರ (Rajendra) ವಾಕ್ಸಮರಕ್ಕೆ ಇಳಿದಿದ್ದಾರೆ.
ತಂದೆ, ಮಗನ ವಾಕ್ಸಮರಕ್ಕೆ ಡಿಕೆ ಶಿವಕುಮಾರ್ (DK Shivakumar) ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ಡಿಕೆಶಿ ಆಪ್ತ ಮಾಗಡಿ ಬಾಲಕೃಷ್ಣ (Magadi Balakrishna) ಗಂಭೀರವಾದ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡುತ್ತಿದ್ದಾರೆ. ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ ಇದನ್ನೂ ಓದಿ: ಏರುತ್ತಿದೆ ಚಿನ್ನದ ಬೆಲೆ – 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ
ಸಿಎಂ ಸ್ಥಾನಕ್ಕಾಗಿ ಬಿಜೆಪಿ ಕದ ತಟ್ಟುತ್ತಾರೆ ಎನ್ನುವ ಮೂಲಕ ಡಿಕೆಶಿ ವಿರುದ್ದ ರಾಜಣ್ಣ ನಿರ್ಣಾಯಕ ಯುದ್ಧ ಸಾರಲು ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ. ಡಿಕೆಶಿ ಸಿಎಂ ಆಗಲು ಬಿಜೆಪಿಗೆ ಹೋಗುತ್ತಾರೆ ಎನ್ನುವುದೇ ಎನ್ನುವುದೇ ಸದ್ಯಕ್ಕೆ ರಾಜಣ್ಣ ಪಾಲಿನ ಸೆಪ್ಟೆಂಬರ್ ಅಸ್ತ್ರ ಎನ್ನಲಾಗುತ್ತಿದೆ. ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ
ಡಿಕೆಶಿ ಆರ್‌ಎಸ್‌ಎಸ್ ಎಸ್ ಗೀತೆ ಹಾಡಿದ್ದು, ಸಾಫ್ಟ್ ಹಿಂದುತ್ವದ ಇಮೇಜ್ ಬಿಲ್ಡ್ ಆಗಿರುವುದು ಎಲ್ಲವೂ ಸದ್ಯಕ್ಕೆ ರಾಜಣ್ಣ ಪಾಲಿನ ರಾಜಕೀಯ ಅಸ್ತ್ರ. ಸೆಪ್ಟೆಂಬರ್ ಕ್ರಾಂತಿ ಅಂದ್ರೆ ಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಜೆಪಿ ಬಾಗಿಲು ತಟ್ಟುತ್ತಾರೆ ಎಂಬ ಅಭಿಯಾನ ಜೋರಾಗಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಸಿಎಂ, ಡಿಸಿಎಂ ಇಬ್ಬರದ್ದೂ ಕಾದು ನೋಡಿ ಬಡಿಯುವ ತಂತ್ರ ಆಗಿದ್ದು, ಇಬ್ಬರಿಂದಲೂ ರಹಸ್ಯ ಪ್ಲ್ಯಾನ್ ಜೋರಾಗಿದೆ. ಹಾಗಾಗಿ ಸೆಪ್ಟೆಂಬರ್ ಕ್ರಾಂತಿ ಮಾತುಗಳಲ್ಲಷ್ಟೇ , ರಾಜಕೀಯ ಕ್ರಾಂತಿ ಸಂಕ್ರಾಂತಿ ಬಳಿಕವಷ್ಟೇ ಎಂಬ ಮಾತುಗಳಿದ್ದು ಕೇಳಿಬಂದಿದೆ. ಅಲ್ಲಿ ತನಕ ಪವರ್ ಶೇರ್ ಗೆರಿಲ್ಲಾ ವಾರ್ ಯಾವ ಹಂತ ತಲುಪಲಿದೆ ಎನ್ನುವುದೇ ಸದ್ಯದ ಕುತೂಹಲ.