– ಮತ್ತೋರ್ವ ಭದ್ರತಾ ಸಿಬ್ಬಂದಿ ಜೀವನ್ಮರಣ ಹೋರಾಟ
ವಾಷಿಂಗ್ಟನ್: ಶ್ವೇತಭವನದ ಸಮೀಪ ನಡೆದ ಗುಂಡಿನ ದಾಳಿಯಲ್ಲಿ (White House Shooting) ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ಪೈಕಿ ಓರ್ವ ಮಹಿಳಾ ಗಾರ್ಡ್ ಸಾವನ್ನಪ್ಪಿದ್ದು, ಮತ್ತೊಬ್ಬರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಪಡೆಯ ಮಹಿಳಾ ಗಾರ್ಡ್ ಸಾರಾ ಬೆಕ್‌ಸ್ಟ್ರೋಮ್ ಸಾವನ್ನಪ್ಪಿರುವುದಾಗಿ ಟ್ರಂಪ್ (Donald Trump) ತಿಳಿಸಿದ್ದಾರೆ. ಯುಎಸ್ ಸೈನಿಕರಿಗೆ ವಿಡಿಯೋ ಕರೆ ಮಾಡಿ ಈ ಬಗ್ಗೆ ಮಾಹಿತಿ ಪಡೆದುಕೊಂಡೆ. ಮತ್ತೊಬ್ಬರು ಸಿಬ್ಬಂದಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಕೂಡ ಕೆಟ್ಟದ್ದಾಗಿದೆ. ಈಗಲೇ ಏನೂ ಹೇಳೋಕಾಗಲ್ಲ ಅಂತ ವೈದ್ಯರು ತಿಳಿಸಿದ್ದಾರೆ ಎಂದು ಟ್ರಂಪ್ ವಿವರಿಸಿದ್ದಾರೆ. ಇದನ್ನೂ ಓದಿ: ಶ್ವೇತಭವನದ ಬಳಿ ಗುಂಡಿನ ದಾಳಿ – ಆ ಪ್ರಾಣಿ ದುಬಾರಿ ಬೆಲೆ ತೆರಬೇಕಾಗುತ್ತೆ ಅಂತ ಟ್ರಂಪ್ ಎಚ್ಚರಿಕೆ

ಶ್ವೇತಭವನದ ಬಳಿ ಗುಂಡಿನ ದಾಳಿ
ಶ್ವೇತಭವನದ ಸಮೀಪ ಒಂದು ದಿನದ ಹಿಂದೆ ನಡೆದ ಗುಂಡಿನ ದಾಳಿಯಲ್ಲಿ ವೆಸ್ಟ್ ವರ್ಜೀನಿಯಾ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲೇ ಕಗ್ಗೊಲೆಯಾದ್ರಾ? – ಪಾಕ್ ಅಧಿಕಾರಿಗಳು ಹೇಳಿದ್ದೇನು?
ಬಿಗ್ ವಾರ್ನಿಂಗ್ ಕೊಟ್ಟಿರುವ ಟ್ರಂಪ್
ಇನ್ನೂ ಶ್ವೇತಭವನದ ಬಳಿ ಗುಂಡಿ ದಾಳಿ ನಡೆದ ಘಟನೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್‌ನಲ್ಲಿ ವೇದಿಕೆಯಲ್ಲಿ ಪ್ರತಿಕ್ರಿಯಿಸಿದ್ದರು. ಆ ಪ್ರಾಣಿ ಶೀಘ್ರದಲ್ಲೇ ದುಬಾರಿ ಬೆಲೆ ತೆರಬೇಕಾಗುತ್ತೆ ಅಂತ ಬಿಗ್ ವಾರ್ನಿಂಗ್ ಕೊಟ್ಟಿದ್ದರು. ಅಲ್ಲದೇ ಗುಂಡಿನ ದಾಳಿ ಬಳಿಕ ವಾಷಿಂಗ್ಟನ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿ ನಿಯೋಜಿಸುವಂತೆ ಟ್ರಂಪ್ ಸೂಚನೆ ಕೂಡ ಕೊಟ್ಟಿದ್ದಾರೆ.

