ವಿಜಯಪುರ: ಗ್ಯಾರಂಟಿ ಯೋಜನೆಗಳು (Guarantee Scheme) ಬಡವರ ಬದುಕಿಗೆ ಬದಲಾವಣೆ ತಂದಿವೆ ಎಂದು ಇಂಡಿ (Indi)ಶಾಸಕ ಯಶವಂತರಾಯಗೌಡ ಪಾಟೀಲ್ (Yashvantraygoud Patil) ಹೇಳಿದರು.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಕದ ರಾಜ್ಯ ಮಹರಾಷ್ಟ್ರದಲ್ಲಿ (Maharashtra) ವಿರೋಧ ಪಕ್ಷದವರು ಸರ್ಕಾರ ರಚನೆ ಮಾಡುತ್ತಿದ್ದಾರೆ. ನಿಮಗೆ ಗೊತ್ತಿದೆ ಅಲ್ಲಿ ಯಾವ ಆಧಾರದ ಮೇಲೆ ಆಯ್ಕೆ ಆಗಿದ್ದಾರೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿಗಳು ಬಡವರ ಬದುಕಿನಲ್ಲಿ ಬದಲಾವಣೆ ತಂದಿವೆ. ನಾವು ಕೇವಲ ಬಿಪಿಎಲ್ ಕೊಟ್ಟರೆ, ಮಹರಾಷ್ಟ್ರದಲ್ಲಿ ಎಲ್ಲರಿಗೂ ಗ್ಯಾರಂಟಿ ಯೋಜನೆ ಎಂದು ಬಿಜೆಪಿಗರ ಕಾಲೆಳೆದರು.ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಫಡ್ನವಿಸ್ ರಾಜ್ಯಭಾರ ಶುರು – ಡಿಸಿಎಂಗಳಾಗಿ ಶಿಂಧೆ, ಪವಾರ್ ಪದಗ್ರಹಣ
ಬಿಜೆಪಿಯವರೇ (BJP) ಗ್ಯಾರಂಟಿ ಯೋಜನೆಗಳಿಗೆ ವಿರೋಧ ಮಾಡಿದ್ದರು. ಇವತ್ತು ಗ್ಯಾರಂಟಿಗಳ ಮೇಲೆ ಅವರು ಸರ್ಕಾರ ರಚನೆ ಮಾಡುತ್ತಿರುವುದಾಗಿ ಅವರೇ ಹೇಳಿದ್ದಾರೆ ಎಂದು ಟಾಂಗ್ ಕೊಟ್ಟರು.
ಇನ್ನೂ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿ, ಅದು ಸಿಎಂ ಅವರ ಪರಮಾಧಿಕಾರ. ವಿಧಾನಸಭೆ ಚುನಾವಣೆ ವೇಳೆ ಜಿಲ್ಲೆಯ ಮೂವರನ್ನು ಕರೆಸಿ, ಮೂವರು ಸೇರಿ ಚುನಾವಣೆ ಮಾಡಿ, ಮೂವರಿಗೂ ಒಳ್ಳೆಯ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಅದೇ ರೀತಿ ಇಬ್ಬರಿಗೆ ಜಿಲ್ಲೆಯಲ್ಲಿ ಪ್ರಾತಿನಿಧ್ಯ ನೀಡಿದ್ದಾರೆ. ಈಗ ಸಿಎಂ ಅವರು ಅದನ್ನು ಗಮನದಲ್ಲಿಟ್ಟು ನೋಡುತ್ತಾರೆ ಅಂದುಕೊಂಡಿದ್ದೀನಿ ಎಂದು ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಪರೋಕ್ಷವಾಗಿ ಹೇಳಿದರು.ಇದನ್ನೂ ಓದಿ: ಜನಕಲ್ಯಾಣ ಸಮಾವೇಶಕ್ಕೆ ತೆರಳುವಾಗ ಸಚಿವ ಮುನಿಯಪ್ಪ ಕಾರು ಅಪಘಾತ