ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ಕೊಡುತ್ತಿರುವ ಗ್ಯಾರಂಟಿಗಳಿಂದ ಬಡವರ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬನೆ ಆಗುತ್ತಿವೆ ಎಂದು ಸಚಿವ ಹೆಚ್.ಸಿ ಮಹದೇವಪ್ಪ (H.C Mahadevappa) ಗ್ಯಾರಂಟಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿಗಳಿಂದ ಪ್ರಬಲ ಆರ್ಥಿಕ ವ್ಯವಸ್ಥೆಯು ದುರ್ಬಲ ಆಗುತ್ತದೆ ಎಂಬ ಪ್ರಧಾನಿ ಮೋದಿ (Narendra Modi) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯವರು ಪ್ರಬಲವಾಗಿರುವ ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟು ಬಡತನ ನಿರ್ಮೂಲನೆ ಮಾಡಿದ್ದಾರೆ? ಇವರಿಂದ ಬಡತನ ನಿರ್ಮೂಲನೆ ಆಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸೋಲಿನ ಹತಾಶೆಯಿಂದ ಬಿಜೆಪಿಯಿಂದ ಕಮಿಷನ್ ಆರೋಪ: ಹೆಚ್.ಸಿ ಮಹದೇವಪ್ಪ
ನಮ್ಮ 5 ಗ್ಯಾರಂಟಿಗಳಿಂದ ಒಂದು ಕುಟುಂಬಕ್ಕೆ ತಿಂಗಳಿಗೆ 4-5 ಸಾವಿರ ರೂ. ವರಮಾನ ಬರುತ್ತದೆ. ವಾರ್ಷಿಕ 50 ಸಾವಿರ ರೂ. ಬೇರೆಯ ಕೆಲಸಗಳಿಗೆ ಸಹಾಯ ಆಗಲಿದೆ. ಕುಟುಂಬಗಳಿಗೆ ಆರ್ಥಿಕ ಸ್ವಾವಲಂಬನೆ ಕೊಟ್ಟರೆ ಅದು ತಪ್ಪಾ? ಬಡವರಿಗೆ ಕಾರ್ಯಕ್ರಮಗಳಿಗೆ ಹಣ ಕೊಟ್ಟರೆ ರಾಜ್ಯ ಮತ್ತು ದೇಶ ದಿವಾಳಿ ಆಗುತ್ತಾ? ಅದಾನಿ ಮತ್ತು ಅಂಬಾನಿಗೆ ಸಾಲ ಮನ್ನಾ ಮಾಡಿದರೆ ದೇಶ ದಿವಾಳಿ ಆಗೋದಿಲ್ಲವೇ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಗುತ್ತಿಗೆದಾರರಿಂದ ಕಮಿಷನ್ ಕೇಳಿದ್ದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ: ಡಿಕೆಶಿ
Web Stories