ಬೆಂಗಳೂರು: ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ ಎಂದು ಜೆಡಿಎಸ್ ಶಾಸಕ ಸುರೇಶ್ ಬಾಬು (Suresh Babu) ಆಕ್ರೋಶ ಹೊರಹಾಕಿದ್ದಾರೆ.
ಇಂದು ಗ್ಯಾರಂಟಿ ಯೋಜನೆ ಹಣ ವಿಳಂಬ, ಸಚಿವ ವೆಂಕಟೇಶ್‌ರಿಂದ ಎಂಜಿನಿಯರ್‌ಗೆ ಧಮ್ಕಿ ಹಾಕಿದ ಪ್ರಕರಣ ಖಂಡಿಸಿ ಜೆಡಿಎಸ್‌ನ ಶಾಸಕರು ಸುರೇಶ್ ಬಾಬು ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.ಇದನ್ನೂ ಓದಿ: ತರುಣ್ ಸುಧೀರ್ ನಿರ್ಮಾಣದ ಹೊಸ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂಟ್ರಿ
Advertisement
Advertisement
ಪ್ರತಿಭಟನೆ ವೇಳೆ ಮಾತನಾಡಿದ ಅವರು, ಸರ್ಕಾರ ಅನೇಕ ಭಾಗ್ಯಗಳು ಕೊಡ್ತಿದೆ. ಬೇಕಾಬಿಟ್ಟಿ ಗ್ಯಾರಂಟಿ ಹಣ ಕೊಡ್ತಿದ್ದಾರೆ. ಚುನಾವಣೆ ಬಂದರೆ ಮಾತ್ರ ಗ್ಯಾರಂಟಿ ಹಣ ಹಾಕ್ತಾರೆ. ಗ್ಯಾರಂಟಿ ಹಣ ತಿಂಗಳ ಪ್ರಾರಂಭದ 1 ರಿಂದ 5ನೇ ತಾರೀಖಿನ ಒಳಗೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
Advertisement
ಸಚಿವ ವೆಂಕಟೇಶ್ ಎಂಜಿನಿಯರ್‌ಗೆ ಧಮ್ಕಿ ಹಾಕಿದ್ದಾರೆ. ಸಚಿವರು ಹೀಗೆ ಮಾತಾಡೋದು ಸರಿಯಲ್ಲ. ಜೆಡಿಎಸ್ ಅವರಿಗೆ ಯಾಕೆ ಗುತ್ತಿಗೆ ಕೊಡ್ತೀರಾ ಎಂದು ಕೇಳುತ್ತಾರೆ. ಸಚಿವರು ಕೂಡಲೇ ತಮ್ಮ ಹೇಳಿಕೆ ವಾಪಸ್ ಪಡೆದು, ಕೂಡಲೇ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದರು.
Advertisement
ಗುತ್ತಿಗೆದಾರರಿಂದ ಕಮೀಷನ್ ಪಡೆಯುವ ಕೆಲಸ ಈ ಸರ್ಕಾರದಲ್ಲಿ ಆಗ್ತಿದೆ. ಈ ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವಾ? ಸಿಎಂ ಅವರೇ ಕಮೀಷನ್ ಕೊಡಬೇಡಿ ಎಂದು ಹೇಳಿದ್ದಾರೆ. ಸಿಎಂ ಅವರೇ ಹೀಗೆ ಹೇಳ್ತಿದ್ದಾರೆ ಅಂದರೆ ಕಮೀಷನ್ ನಡೆಯುತ್ತಿದೆ ಎಂದರ್ಥ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಅಧೋಗತಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಯಾವುದೇ ಇಲಾಖೆಗೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ರಾಜ್ಯದ ಬೊಕ್ಕಸದ ಹಣ ಎಲ್ಲಾ ಇಲಾಖೆಗೆ ವಿತರಣೆ ಮಾಡಬೇಕು. SCSP-TSP ಹಣವನ್ನ ಗ್ಯಾರಂಟಿಗೆ ಕೊಡೋದು ಸರಿಯಲ್ಲ. SC-ST ಜನರಿಗೆ ಮಾತ್ರ ಹಣ ನೀಡಬೇಕು. ಒಬ್ಬ ಮಂತ್ರಿ ಜೈಲಿಗೆ ಹೋಗಿ ಬಂದರು ನಾಚಿಕೆ ಆಗುವುದಿಲ್ಲ. ದಲಿತರ ವೋಟ್ ಮಾತ್ರ ನಿಮಗೆ ಬೇಕಾ? ಅವರ ಅಭಿವೃದ್ಧಿ ಬೇಡ್ವಾ? ದಲಿತರಿಗೆ ಈ ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಬಾಯಿ ಚಪ್ಪರಿಸುವ ಟೊಮೆಟೊ ಸಾಸ್‌ನಲ್ಲಿ ಅಪಾಯಕಾರಿ ರಾಸಾಯನಿಕ ಬಳಕೆ!