ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಸಾರಿಗೆ ನಿಗಮಕ್ಕೆ ಇದೀಗ ಗ್ಯಾರಂಟಿ ಯೋಜನೆಗಳು ಭಾರವಾಗುತ್ತಿದ್ದು, ದಿನಕ್ಕೆ 3 ಕೋಟಿ ರೂ. ನಷ್ಟವಾಗುತ್ತಿದೆ ಎಂದು ರಾಜ್ಯ ಸಾರಿಗೆ ಸಚಿವ ಪ್ರತಾಪ್ ಸರನಾಯಕ್ (Pratap Sarnaik) ಹೇಳಿದರು.ಇದನ್ನೂ ಓದಿ: ಕುಸಿಯುತ್ತಿರುವ ರಾಜಕಾಲುವೆಗೆ ಕಟ್ಟಿಗೆ ಕಟ್ಟಿದ ಅಧಿಕಾರಿಗಳು – ಬಿಬಿಎಂಪಿ ಕಾರ್ಯವೈಖರಿಗೆ ಜನಾಕ್ರೋಶ
Advertisement
ಧಾರಾಶಿವ್‌ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಶೇ.50 ರಿಯಾಯಿತಿ ದರದಲ್ಲಿ ಟಿಕೆಟ್ ನೀಡುವ ಗ್ಯಾರಂಟಿ ಯೋಜನೆಯನ್ನು ಬಿಜೆಪಿ ಸರ್ಕಾರ ನೀಡಿತ್ತು. ಈ ಯೋಜನೆಯಿಂದಾಗಿ ಸಾರಿಗೆ ನಿಗಮಕ್ಕೆ ದಿನಕ್ಕೆ 3 ಕೋಟಿ ರೂ. ನಷ್ಟವಾಗುತ್ತಿದೆ ಎಂದು ತಿಳಿಸಿದರು.
Advertisement
ಈ ರೀತಿ ನಷ್ಟ ಮುಂದುವರೆದರೆ, ಸಾರಿಗೆ ಸಂಸ್ಥೆ ನಡೆಸುವುದು ತುಂಬಾ ಕಷ್ಟ. ಆಗ ರಿಯಾಯಿತಿ ಯೋಜನೆ ನಿಲ್ಲಿಸುವ ಪ್ರಸ್ತಾಪ ಮಾಡಬೇಕಾಗುತ್ತದೆ ಎಂದು ಹೇಳಿದರು.ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗುತ್ತಿದ್ದ ಪಾದಚಾರಿಗಳ ಮೇಲೆ ಹರಿದ ಬಸ್ – ಇಬ್ಬರು ಸಾವು