ಕೋಲಾರ: ಸದ್ಯಕ್ಕೆ ನಮ್ಮ ಪಾಡಿಗೆ ನಾವಿದ್ದೇವೆ, ನಾಳೆ ಬಿಜೆಪಿಯೋ, ಜೆಡಿಎಸ್, ಕಾಂಗ್ರೆಸ್ ಏನ್ ಬೇಕಾದ್ರು ಆಗಬಹುದು, ಶಾಸಕನಾಗಿರುವವರೆಗೂ ಜೆಡಿಎಸ್ ಶಾಸಕನಾಗಿರುವೆ ಎಂದು ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದ್ದ ಸದಸ್ಯರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮೆಲ್ಲರಿಗೂ ಮನಸ್ಸಲ್ಲಿ ರಾಜಕೀಯ ಮಾಡುವ ಪರಿಸ್ಥಿತಿ ಇದೆ. ಕ್ಷೇತ್ರದಲ್ಲಿ ನೀವಿರಬೇಕು ಎನ್ನುವ ಒತ್ತಾಯವನ್ನು ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಅನಿವಾರ್ಯವಾಗಿ ಮುಂದುವರಿಯಲಾಗುತ್ತಿದೆ ಎಂದು ತಿಳಿಸಿದರು.
Advertisement
Advertisement
ಜೆಡಿಎಸ್ ಪಕ್ಷದಿಂದ ಸಚಿವರಾದ ಬಳಿಕ ವರಿಷ್ಠರಾದ ದೇವೇಗೌಡ ಅವರಿಗೆ, ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸಿ ವಾಪಸ್ ಆದಾಗಿನಿಂದ ಇದುವರೆಗೂ ಅವರು ನಮ್ಮನ್ನು ಕರೆದು ಮಾತನಾಡಿಲ್ಲ, ನಾವು ಹೋಗಿಲ್ಲ, ನಮ್ಮಿಬ್ಬರಲ್ಲಿ ಯಾವುದೇ ಸಂಬಂಧವೇ ಇಲ್ಲದಂತಾಗಿದೆ ಎಂದರು.
Advertisement
ನಾನು ಸಿದ್ದರಾಮಯ್ಯ ಈ ಹಿಂದೆ ಖಾಸಗಿ ಕಾರ್ಯಕ್ರಮದಲ್ಲಿ ಒಂದಾಗಿದ್ದು, ಅಲ್ಲಿ ನಾನು 1983ರಿಂದ ಇಬ್ಬರ ರಾಜಕೀಯ ಜೀವನದ ಬಗ್ಗೆ ಎಲ್ಲವನ್ನು ತಿಳಿಸಿದೆ. ಆಗ ಸಿದ್ದರಾಮಯ್ಯ ಅವರು ಅದನ್ನೆಲ್ಲಾ ಒಪ್ಪಿಕೊಂಡರು ಅಷ್ಟೆ. ಆಗ ಮುಕ್ತವಾಗಿ ಮಾತನಾಡಿದ ವೇಳೆ ಅವರು ಕೂಡ ನನ್ನ ಕುರಿತು ಒಳ್ಳೆಯ ಮಾತನಾಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ
Advertisement
ನನ್ನ ಮಗ ಹರೀಶ್ ಗೌಡ ಹಾಗೂ ನಾನು ಇಬ್ಬರು ನಿಲ್ಲಬೇಕು ಎಂದು ಕಾಂಗ್ರೆಸ್‍ನಲ್ಲಿ ಅವಕಾಶ ಕೊಡಿ ಎಂದು ನಮ್ಮ ಅಭಿಪ್ರಾಯ ತಿಳಿಸಿದ್ದೇನೆ. ಸಿದ್ದರಾಮಯ್ಯ ಅವರು ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದಿದ್ದಾರೆ. ಹಾಗಾಗಿ ಯಾವ ತೀರ್ಮಾನ ತೆಗೆದುಕೊಂಡಿಲ್ಲ, ಯಾವ ತೀರ್ಮಾನ ಮಾಡಿಲ್ಲ ಅಲ್ಲಿಗೆ ಬಿಟ್ಟಿದ್ದಾರೆ ಎಂದು ತಿಳಿಸಿದರು.
ನನ್ನ ಮಗ ಹರೀಶ್ ಗೌಡಗೆ ಹುಣಸೂರು, ಕೆ.ಆರ್.ನಗರ, ಚಾಮರಾಜ ನಗರ 3 ಕ್ಷೇತ್ರಗಳನ್ನು ಕೇಳಿದ್ದೇನೆ. ಸಿದ್ದರಾಮಯ್ಯ ಅವರನ್ನ ಮೈಸೂರು ಜಿಲ್ಲೆಯ ಹುಣಸೂರು ಜನರೆ ಕರೆಯುತ್ತಿದ್ದಾರೆ. ಶ್ರೀನಿವಾಸಗೌಡರು ಕೋಲಾರಕ್ಕೂ ಕರೆದಿದ್ದಾರೆ. ಅದು ಬಿಟ್ಟರೆ ಸಿದ್ದರಾಮಯ್ಯ ಅವರ ಜೊತೆಗೆ ಯಾವುದೆ ಚರ್ಚೆ ಮಾಡಿಲ್ಲ ನಮ್ಮೊಂದಿಗೆ ಯಾವುದೇ ಒಪ್ಪಂದ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮಾತ್ರ ಚಾಮುಂಡೇಶ್ವರಿ ಕ್ಷೇತ್ರದಲ್ಲೆ ನಿಲ್ಲುವುದು ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಕೋಲಾರದ ವಿಚಾರ ನಾನು ಮಾತನಾಡಿಲ್ಲ. ನಾನು ಕಾಂಗ್ರೆಸ್‌ಗೆ ಹೋಗಿಲ್ಲ, ಹಾಗಾಗಿ ಅಲ್ಲಿ ನಡೆಯುವ ತೀರ್ಮಾನ ನನಗೆ ಗೊತ್ತಿಲ್ಲ, ಪಂಚರಾಜ್ಯ ಚುನಾವಣೆ ಯಾವ ದಿಕ್ಕಿನಲ್ಲಿ ಸಾಗುತ್ತೇ ಎನ್ನುವುದನ್ನು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಇದನ್ನೂ ಓದಿ: ಪಂಜಾಬ್ ಮಾಫಿಯಾಗಳಿಂದ ತುಂಬಿದೆ: ಎಎಪಿ ಸಿಎಂ ಅಭ್ಯರ್ಥಿ