ಮೈಸೂರು: ಸಿದ್ದರಾಮಯ್ಯ ನನ್ನನ್ನು ಕಾಂಗ್ರೆಸ್‍ಗೆ ಕರೆದಿಲ್ಲ, ಬಿಜೆಪಿಗೆ ಹೋಗಬೇಡ ಅಂದಿದ್ದಾರೆ ಅಷ್ಟೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಪಬ್ಲಿಕ್ ಟಿವಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರು ನನ್ನ ಕಾಂಗ್ರೆಸ್‍ಗೆ ಬಾ ಎಂದು ಕರೆದಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‍ಗೆ ಬಾ ಎಂದು ನೇರವಾಗಿ ಕರೆದಿಲ್ಲ. ಜೆಡಿಎಸ್‍ನಲ್ಲೇ ಇರು ಅಥವಾ ಬಿಟ್ಟು ಬಿಡು ಅಂತಾನೂ ಸಿದ್ದರಾಮಯ್ಯ ಹೇಳಿಲ್ಲ. ಆದರೆ, ಬಿಜೆಪಿಗೆ ಮಾತ್ರ ಹೋಗಬೇಡ ಅಂತಾ ಹೇಳಿದ್ದಾರೆ ಎಂದು ತಿಳಿಸಿದರು.
Advertisement
Advertisement
ನನ್ನ ಮತದಾರರು ಯಾವ ಪಕ್ಷಕ್ಕೆ ಹೋಗು ಅಂತಾರೋ ಆ ಪಕ್ಷಕ್ಕೆ ಹೋಗುತ್ತೇನೆ. ಜೆಡಿಎಸ್‍ನಲ್ಲಿ ಉಳಿರಿ ಎಂದರು ಸರಿ. ಬಿಜೆಪಿಗೆ ಹೋಗು ಎಂದರು ಸರಿ. ಕಾಂಗ್ರೆಸ್‍ಗೆ ಹೋಗು ಎಂದರು ಸರಿ. ಜನ ಏನು ಹೇಳುತ್ತಾರೋ ಅದನ್ನೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಇಡಿ ವಿಚಾರಣೆಗೆ ಸೋನಿಯಾ ಹಾಜರ್ – ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ
Advertisement
Advertisement
ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಅವರಿಗೆ ಈಗ ಮನದಟ್ಟಾಗಿದೆ. ಕಳೆದ ಬಾರಿಯೆ ಸ್ಪರ್ಧಿಸಬಾರದಿತ್ತು. ನಾನು ತಪ್ಪು ಮಾಡಿದೆ ಎಂದು ಅವರಿಗೆ ಗೊತ್ತಾಗಿದೆ. ಹೀಗಾಗಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಲ್ಲ ಎಂದು ಹೇಳಿದ್ದಾರೆ. ಹುಣಸೂರು ಮತ್ತು ಚಾಮುಂಡೇಶ್ವರಿ ಕ್ಷೇತ್ರ ನಮ್ಮದೆ. ಕಳೆದ ಬಾರಿ ಹೆಚ್. ವಿಶ್ವನಾಥ್‌ಗಾಗಿ ಹುಣಸೂರು ಕ್ಷೇತ್ರ ಬಿಟ್ಟ ಕೊಟ್ಟೆವು ಅಷ್ಟೆ ಎಂದರು. ಇದನ್ನೂ ಓದಿ: ಇಡಿ ವಿರುದ್ಧ ಆಕ್ರೋಶ – ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು