– ಈ ತನಿಖೆ ನಡೆಸಲು ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ ಎಂದ ಶಾಸಕ
ಮೈಸೂರು: ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರ ಕೈವಾಡವಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು (JDS Workers) ರಾಜ್ಯಾದ್ಯಂತ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ.
ಸಿಎಂ-ಡಿಸಿಎಂ ವಿರುದ್ಧ ಜೆಡಿಎಸ್ ನಾಯಕರು-ಕಾರ್ಯಕರ್ತರು ಮಂಡ್ಯ, ಮೈಸೂರು, ರಾಮನಗರ, ದೇವನಹಳ್ಳಿ, ಹುಬ್ಬಳ್ಳಿ, ಗದಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನಲ್ಲಿ ಡಿಸಿ ಕಚೇರಿ ಮುಂಭಾಗ ಜಿ.ಟಿ. ದೇವೇಗೌಡ ಹಾಗೂ ಸಾರಾ ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: 7 ದಿನಗಳ ಒಳಗಡೆ ವಿಚಾರಣೆಗೆ ಹಾಜರಾಗಿ – ನಡ್ಡಾ, ವಿಜಯೇಂದ್ರಗೆ ಬೆಂಗಳೂರು ಪೊಲೀಸರಿಂದ ಸಮನ್ಸ್
ಇದೇ ವೇಳೆ ಮಾತನಾಡಿದ ಜಿ.ಟಿ ದೇವೇಗೌಡ ಅವರು, ಪೆನ್‌ಡ್ರೈವ್ ಹಂಚಿಕೆ ಮಾಡಲು ಚೆನ್ನೈನ ಕಂಪನಿಯೊಂದರಲ್ಲಿ 3 ಕೋಟಿ ರೂ.ಗೆ ಪೆನ್‌ಡ್ರೈವ್ ಖರೀದಿಸಿದ್ದಾರೆ. ಆಸ್ಟ್ರೇಲಿಯಾ ಪ್ರಯೋಗಾಲಯದಲ್ಲಿ ಯಾವುದನ್ನ ಸೇರಿಸಬೇಕು ಅದನ್ನ ಸೇರಿಸಿ ಸಿನಿಮಾ ಮಾಡಿದಂತೆ ಮಾಡಿದ್ದಾರೆ. ಅಲ್ಲಿಂದ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಜಾಲ ಸೇರಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಅಂಬಾನಿ, ಅದಾನಿ ಟೆಂಪೋದಲ್ಲಿ ಹಣ ಕಳುಹಿಸುತ್ತಾರೆ- ಮೋದಿಗೆ ರಾಗಾ ತಿರುಗೇಟು
ಎಸ್‌ಐಟಿ ತನಿಖೆ (SIT Investigation) ರದ್ದಾಗಬೇಕು. ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು. ಈಗಿರುವ ಎಸ್‌ಐಟಿಯಿಂದ ಏನೂ ಕಂಡುಹಿಡಿಯೋದಕ್ಕೆ ಆಗೋದಿಲ್ಲ. ಪೆನ್‌ಡ್ರೈವ್ ಯಾರು ರಿಲೀಸ್ ಮಾಡಿದ್ರು ಅನ್ನೋ ಬಗ್ಗೆ ತನಿಖೆ ನಡೆಯುತ್ತಿಲ್ಲ. ಒಂದು ಪಕ್ಷದ ಮೇಲೆ ಗದಾಪ್ರಹಾರ ಮಾಡುವ ಕೆಲಸ ಆಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಜೆಡಿಎಸ್ ಮುಗಿಸಲು ಸಿಎಂ, ಡಿಸಿಎಂ ಮುಂದಾಗಿದ್ದಾರೆ. ಈ ಪೆನ್‌ಡ್ರೈವ್ ಕೇಸ್ ಹಿಂದೆ ಅಂತಾರಾಷ್ಟ್ರೀಯ ಜಾಲವೇ ಇದೆ. ಅವರನ್ನ ತನಿಖೆ ಮಾಡುವುದಕ್ಕೆ ಕರ್ನಾಟಕ ಪೊಲೀಸರಿಂದ ಸಾಧ್ಯವಿಲ್ಲ. ಸಿಬಿಐ ತನಿಖೆ ಬಿಟ್ರೆ ಬೇರೆ ಯಾವುದೇ ತನಿಖೆಯಿಂದ ನ್ಯಾಯ ಸಿಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.