ಬೆಂಗಳೂರು: ಪಕ್ಷದ ಮೇಲೆ ಮುನಿಸು ಮರೆತು ಮರಳಿ ಮನೆಗೆ ಬಂದಿರುವ ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ (GT Devegowda) ಮೂರೂವರೆ ವರ್ಷಗಳ ಬಳಿಕ ಪಕ್ಷದ ಕಚೇರಿಗೆ ಆಗಮಿಸಿದರು.
ಜೆಪಿ ಭವನಕ್ಕೆ ಭೇಟಿ ನೀಡಿದ ಜಿ.ಟಿ ದೇವೇಗೌಡ ಸುಮಾರು ಒಂದೂವರೆ ಗಂಟೆಗಳ ಕಾಲ ಕಚೇರಿಯಲ್ಲಿ ಸಮಯ ಕಳೆದರು. ಮೂರೂವರೆ ವರ್ಷಗಳ ಬಳಿಕ ಕಚೇರಿಗೆ ಆಗಮಿಸಿದ ಜಿ.ಟಿ ದೇವೇಗೌಡರಿಗೆ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಸಿಹಿ ತಿನ್ನಿಸಿ ಆತ್ಮೀಯವಾಗಿ ಸ್ವಾಗತ ಮಾಡಿದರು. ಸುಮಾರು ಒಂದೂವರೆ ಗಂಟೆ ಪಕ್ಷದ ಕಚೇರಿಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಇಬ್ಬರು ಮಾತುಕತೆ ನಡೆಸಿದರು.
ಕುಮಾರಸ್ವಾಮಿ ಜೊತೆ ಮಾತುಕತೆ ಬಳಿಕ ಮಾತನಾಡಿದ ಜಿ.ಟಿ ದೇವೇಗೌಡ, ಬೆಳಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ಕೋರಿದ್ದೇನೆ. ಮಳೆ ಬಂದು ನಾಲೆ, ಸೇತುವೆ, ರಸ್ತೆ ಎಲ್ಲವೂ ಹಾಳಾಗಿದೆ. ಇದೆಲ್ಲವನ್ನೂ ಅಭಿವೃದ್ಧಿ ಪಡಿಸುವ ಶಕ್ತಿ ದೇವರು ಕೊಡಲಿ ಎಂದು ಸಿಎಂಗೆ ಶುಭ ಕೋರಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನ. 1ಕ್ಕೆ JDS ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಕುಮಾರಸ್ವಾಮಿ
ಮುಖ್ಯಮಂತ್ರಿಗಳ ಭೇಟಿ ಬಳಿಕ ಈಗ ನಮ್ಮ ನಾಯಕರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಸಿಹಿ ತಿನ್ನಿಸಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ರಾಜ್ಯಕ್ಕೆ, ಕನ್ನಡ ನಾಡಿಗೆ ಒಳ್ಳೆಯದಾಗಬೇಕು. ಇವತ್ತು ನಾನು ದೀಪಾವಳಿ ಹಬ್ಬದ ಶುಭಾಶಯ ಕೋರಲು ಬಂದಿದ್ದೇನೆ. ಎಲ್ಲರಿಗೂ ಒಳ್ಳೆಯದಾಗಲಿ ಅಂತ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದರು.
ಮಾಜಿ ಸಚಿವರು ಹಾಗೂ @JanataDal_S ಪಕ್ಷದ ಹಿರಿಯ ನಾಯಕರೂ ಆಗಿರುವ ಶ್ರೀ @GTDevegowda ಅವರು ಇಂದು ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಭೇಟಿಯಾಗಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಆಭಾರಿ.1/2#ದೀಪಾವಳಿ pic.twitter.com/Y0cPsHPdFT
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 26, 2022
ಕಳೆದ ಮೂರೂವರೆ ವರ್ಷಗಳಿಂದ ಪಕ್ಷದ ಮೇಲೆ ಜಿ.ಟಿ ದೇವೇಗೌಡ ಮುನಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ದೇವೇಗೌಡರು ಜಿ.ಟಿ ದೇವೇಗೌಡರ ಮನೆಗೆ ತೆರಳಿ ಮನವೊಲಿಸಿದ್ದರು. ಇದನ್ನೂ ಓದಿ: ದೈವ ನರ್ತಕರಿಗೆ ಮಾಸಾಶನ – ವೀರಗಾಸೆ ಕುಣಿತ ಮಾಡುವ ನಮಗೂ ಕೊಡಿ ಪುರವಂತರು ಒತ್ತಾಯ