ನವದೆಹಲಿ: ಉಪ್ಪಿನಿಂದ ಹಿಡಿದು ಬೇಳೆಯವರೆಗೂ, ತರಕಾರಿಯಿಂದ ಹಿಡಿದು ಹಾಲಿನ ಪ್ಯಾಕೆಟ್‌ವರೆಗೂ ಆನೇಕ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಕಂಗಲಾಗಿದ್ದಾರೆ. ಇದು ಸಾಲದು ಎಂದು ಸೋಮವಾರದಿಂದ ನಿತ್ಯದ ಅಗತ್ಯ ವಸ್ತುಗಳ ಮೇಲೆ ಗೂಡ್ಸ್ ಆಂಡ್ ಸರ್ವೀಸ್ ಟ್ಯಾಕ್ಸ್ ಹೇರಿ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ.
ಕಳೆದ ತಿಂಗಳು ನಡೆದ ಜಿಎಸ್‌ಟಿಯ 47ನೇ ಸಮಾವೇಶದಲ್ಲಿ ಹಲವು ರೀತಿಯ ದೈನಂದಿನ ಬಳಕೆಯ ಸರಕುಗಳ ಮೇಲೆ ಜಿಎಸ್‌ಟಿ ವಿಧಿಸಿ ತೀರ್ಮಾನ ತೆಗೆದುಕೊಂಡಿದೆ. ಇದು ನಾಳೆಯಿಂದ ಜಾರಿಗೆ ಬರಲಿದ್ದು, ನೇರವಾಗಿ ಮತ್ತು ಪರೋಕ್ಷವಾಗಿ ಹತ್ತು ಹಲವು ರೀತಿಯಲ್ಲಿ ಜನಸಾಮಾನ್ಯರಿಗೆ ಇನ್ನಷ್ಟು ಕರಭಾರ ಹೇರಲಿದೆ.
Advertisement
Advertisement
ಜಿಎಸ್‌ಟಿಯಿಂದಾಗಿ ಜನಸಾಮಾನ್ಯರು, ಹೋಟೆಲ್ ಉದ್ಯಮದವರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಕೇಳಿಸಿಕೊಳ್ಳುವ ವ್ಯವಧಾನ ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿದೆ. ಯಾವ್ಯಾವ ವಸ್ತುಗಳು ನಾಳೆಯಿಂದ ದುಬಾರಿ ಆಗಲಿವೆ ಎನ್ನುವ ಮಾಹಿತಿ ಇಲ್ಲಿದೆ.
Advertisement
ಯಾವುದಕ್ಕೆ ಎಷ್ಟೆಷ್ಟು ಜಿಎಸ್‌ಟಿ?
ಪ್ಯಾಕೆಟ್ ಹಾಲು, ಮೊಸರು, ಪ್ಯಾಕೆಟ್ ಲಸ್ಸಿ, ಮಜ್ಜಿಗೆ, ಉಪ್ಪಿನಕಾಯಿ, ತರಕಾರಿ, ಪ್ಯಾಕ್ ಮಾಡಿದ ಹಪ್ಪಳ, ಪ್ಯಾಕ್ ಮಾಡಿದ ಜೇನುತುಪ್ಪ, ಪ್ಯಾಕ್ ಮಾಡಿದ ಬೆಲ್ಲ, ಪ್ಯಾಕ್ ಮಾಡಿದ ಗೋಧಿ ಹಿಟ್ಟು, ಪ್ಯಾಕ್ ಮಾಡಿದ ಅಕ್ಕಿ, ಸಾವಯವ ಆಹಾರ, ಕಾಂಪೋಸ್ಟ್ ಗೊಬ್ಬರ, ಮೀನು ಇವಿಷ್ಟಕ್ಕೆ ಶೇ.5 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ. ಇದನ್ನೂ ಓದಿ: ಸೋಮವಾರ ದೇಶದ 15ನೇ ರಾಷ್ಟ್ರಪತಿ ಚುನಾವಣೆ – ಜೂನ್ 21ಕ್ಕೆ ಮತ ಎಣಿಕೆ
Advertisement
ಹೋಟೆಲ್ ರೂಮ್ಸ್(1,000 ರೂ. ಒಳಗಿನ ಬಾಡಿಗೆ) – ಶೇ.12, ಹಾಸ್ಪಿಟಲ್ ರೂಮ್ಸ್(5,000 ರೂ. ಮೇಲ್ಪಟ್ಟ ಬಾಡಿಗೆ) – ಶೇ.5, ಸೋಲಾರ್ ವಾಟರ್ ಹೀಟರ್ – ಶೇ.5 ರಿಂದ ಶೇ.12ಕ್ಕೆ ಹೆಚ್ಚಳವಾಗಿದೆ. ಚರ್ಮದ ಉತ್ಪನ್ನಗಳು – ಶೇ.5 ರಿಂದ ಶೇ.12ಕ್ಕೆ ಜಿಎಸ್‌ಟಿ ಹೆಚ್ಚಳವಾಗಿದೆ.
ಭೂಪಟ, ಅಟ್ಲಾಸ್ – ಶೇ.12, ಪ್ರಿಂಟಿಂಗ್, ಇಂಕ್, ಪೆನ್ಸಿಲ್, ಮೆಂಡರ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಡ್ರಾಯಿಂಗ್‌ಗೆ ಬಳಸುವ ಉಪಕರಣಗಳು – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಬ್ಲೇಡ್, ಸ್ಪೂನ್, ಫೋರ್ಕ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 944 ಪಾಸಿಟಿವ್ ಕೇಸ್ – 3 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ
ಎಲ್‌ಇಡಿ ಬಲ್ಬ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ಮೋಟಾರ್ ಪಂಪ್, ಸೈಕಲ್ ಪಂಪ್ – ಶೇ.12 ರಿಂದ ಶೇ.18ಕ್ಕೆ ಹೆಚ್ಚಳವಾಗಿದೆ. ರುಬ್ಬವ ಯಂತ್ರ, ಡೈರಿ ಮೆಷಿನ್ – ಶೇ.12 ರಿಂದ ಶೇ.18ಕ್ಕೆ ಜಿಎಸ್‌ಟಿ ಹೆಚ್ಚಳವಾಗಿದೆ.
ಜಿಎಸ್‌ಟಿ ಇಳಿಕೆ:
ಆರ್ಥೋಪೆಡಿಕ್ ಉಪಕರಣ – ಶೇ.12 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಟ್ರಾನ್ಸ್‌ಪೋರ್ಟ್ ಗೂಡ್ಸ್ – ಶೇ.18 ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಬಾಡಿಗೆ ಟ್ರಕ್, ಇತರೆ ವಾಹನಗಳ ಬಾಡಿಗೆ ಮೇಲಿನ ಸುಂಕ ಇಳಿಕೆಯಾಗಿದೆ.
ಜಿಎಸ್‌ಟಿ ಹೇರಿಕೆ ಬೆನ್ನಲ್ಲೇ ಕರ್ನಾಟಕ ಹಾಲು ಒಕ್ಕೂಟ(ಕೆಎಂಎಫ್) ತನ್ನ ಉತ್ಪನ್ನಗಳ ಬೆಲೆಯನ್ನು ಸಹಜವಾಗಿಯೇ ಏರಿಕೆ ಮಾಡಿದೆ. ಸದ್ಯ ಹಾಲಿನ ದರವನ್ನು ಹೆಚ್ಚಳ ಮಾಡಿಲ್ಲ. ಉಳಿದಂತೆ ಯಾವ ಯಾವ ಉತ್ಪನ್ನಗಳ ಬೆಲೆ ಎಷ್ಟೆಷ್ಟು ಏರಿಕೆ ಆಗಿದೆ ಎಂಬ ಮಾಹಿತಿ ಇಲ್ಲಿದೆ.
ನಂದಿನಿ ಹಾಲಿನ ಬೆಲೆ ಸದ್ಯಕ್ಕೆ ಏರಿಕೆಯಾಗಿಲ್ಲ. ಲೀಟರ್ ಮೊಸರಿನ ಬೆಲೆ 43 ರೂ.ನಿಂದ 46 ರೂ.ಗೆ ಏರಿಕೆಯಾಗಿದೆ. ಅರ್ಧ ಲೀಟರ್ ಮೊಸರು – 22 ರೂ.ನಿಂದ 24 ರೂ.ಗೆ ಏರಿಕೆಯಾಗಿದೆ. ಮಜ್ಜಿಗೆ 200 ಎಂಎಲ್ – 7 ರೂ.ನಿಂದ 8 ರೂ.ಗೆ ಏರಿಕೆಯಾಗಿದೆ. ಪ್ಯಾಕೆಟ್ ಲಸ್ಸಿ – 10 ರೂ.ನಿಂದ 11ರೂ.ಗೆ ಏರಿಕೆಯಾಗಿದೆ.