ಗುವಾಹಟಿ: ಪ್ಯಾರೇ ದೇಶವಾಸಿಗಳಿಗೆ ಸಿಹಿ ಸುದ್ದಿ. ನೀವು ದಿನನಿತ್ಯ ಬಳಸುವ ವಸ್ತುಗಳ ಬೆಲೆಗಳು ಇನ್ನು ಮುಂದೆ ಇಳಿಕೆಯಾಗಲಿವೆ. ಬರೋಬ್ಬರೀ 178 ದಿನಬಳಕೆ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) 10%ರಷ್ಟು ಇಳಿಕೆಯಾಗಿದೆ.
28% ರಷ್ಟಿದ್ದ ಜಿಎಸ್‍ಟಿ ತೆರಿಗೆಯನ್ನು 18%ಕ್ಕೆ ಇಳಿಸಲಾಗಿದೆ. ಶುಕ್ರವಾರ ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‍ಟಿ ಮಂಡಳಿಯ 23ನೇ ಸಭೆಯಲ್ಲಿ 178 ವಸ್ತುಗಳಿಗೆ ವಿಧಿಸಲಾಗಿದ್ದ ತೆರಿಗೆಯನ್ನು 18% ಇಳಿಕೆ ಮಾಡಿ, 50 ಸಾಮಗ್ರಿಗಳಿಗೆ ಮಾತ್ರ 28% ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರೆಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
Advertisement
ಹಣಕಾಸು ಸಚಿವ ಅರುಣ್ ಜೇಟ್ಲಿ ಸುದ್ದಿಗೋಷ್ಠಿ ನಡೆಸಿ, ಒಟ್ಟು 178 ವಸ್ತುಗಳ ಮೇಲಿನ ತೆರಿಗೆಯನ್ನು 18% ಇಳಿಸಲಾಗಿದ್ದು, ನವೆಂಬರ್ 15 ರಿಂದ ಪರಿಷ್ಕೃತ ತೆರಿಗೆ ಜಾರಿಯಾಗಲಿದೆ ಎಂದು ತಿಳಿಸಿದರು.
Advertisement
ಬಿಹಾರ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಪ್ರತಿಕ್ರಿಯಿಸಿ, ಗ್ರಾನೈಟ್, ಮಾರ್ಬಲ್, ಚಾಕ್ಲೇಟ್, ಚೂಯಿಂಗ್‍ಗಮ್, ವಾಚ್, ಬ್ಲೇಡ್, ಸ್ಟೌ, ಸೌಂದರ್ಯವರ್ಧಕಗಳು, ಶಾಂಪು ಮೇಲಿನ ತೆರಿಗೆಯನ್ನು ಇಳಿಸಲಾಗಿದೆ ಎಂದು ತಿಳಿಸಿದರು.
Advertisement
ಪೇಂಟ್, ಸೀಮೆಂಟ್ ಜೊತೆ ಲಕ್ಷುರಿ ಉತ್ಪನ್ನಗಳಾದ ವಾಶಿಂಗ್ ಮಶೀನ್, ಏರ್ ಕಂಡಿಷನ್ ಸೇರಿದಂತೆ 50 ಉತ್ಪನ್ನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ 28% ತೆರಿಗೆಯನ್ನು ಮುಂದುವರಿಸಲಾಗಿದೆ. ಸೆಣಬು ಮತ್ತು ಹತ್ತಿಯ ಕೈ ಚೀಲಗಳ ಮೇಲಿನ ತೆರಿಗೆಯನ್ನು 18% ರಿಂದ 12% ಕ್ಕೆ ಇಳಿಸಲಾಗಿದೆ.
Advertisement
ಮುಂದಿನ ದಿನಗಳಲ್ಲಿ 28% ತೆರಿಗೆ ವಿಧಿಸುವ ವಸ್ತುಗಳು 18% ತೆರಿಗೆ ವ್ಯಾಪ್ತಿಗೆ ಬರಲಿದೆ. ಈಗಲೇ ಈ ವಸ್ತುಗಳ ಮೇಲೆ ತೆರಿಗೆ ಇಳಿಸಿದರೆ ಆದಾಯ ಸಂಗ್ರಹಕ್ಕೆ ಭಾರೀ ಹೊಡೆತ ಬೀಳುತ್ತದೆ ಎಂದು ಸುಶೀಲ್ ಮೋದಿ ತಿಳಿಸಿದರು.
ಜುಲೈ ಒಂದರಂದು ದೇಶದಲ್ಲಿ ಜಿಎಸ್‍ಟಿ ಜಾರಿಯಾಗಿದ್ದು, ವಸ್ತುಗಳ ಮೇಲೆ 0%, 5%, 12%, 18%, 28% ತೆರಿಗೆ ವಿಧಿಸಲಾಗುತ್ತಿದೆ.
Filing of return for 3B will be continued till March. All tax payers will continue to file 3B till March 2018: Hasmukh Adhia, Finance & Revenue Secretary after 23rd #GSTCouncilMeet pic.twitter.com/bc1dPzWktG
— ANI (@ANI) November 10, 2017
All restaurants in the country to be levied GST of 5%, no ITC benefit to any restaurant: FM Arun Jaitley after 23rd #GSTCouncilMeet pic.twitter.com/EBviOSJhlb
— ANI (@ANI) November 10, 2017
13 items moved from 18% to 12%, 6 items from 18% to 5%, 8 items from 12% to 5%, 6 items from 5% to nil: FM Arun Jaitley after 23rd #GSTCouncilMeet
— ANI (@ANI) November 10, 2017
A Group Photo of the Union Finance Minister Shri @arunjaitley with the Finance Ministers & Senior Officers of the different States/UTs on the occasion of 23rd GST Council Meeting in Guwahati, Assam today. pic.twitter.com/VXL3DXg1rb
— Ministry of Finance (@FinMinIndia) November 10, 2017
Discussions get underway at the 23rd GST Council Meeting being Chaired by Union Finance Minister @arunjaitley at Guwahati today pic.twitter.com/KR7q1M57qr
— Ministry of Finance (@FinMinIndia) November 10, 2017