ಶ್ರೀನಗರ: ಏಕರೂಪದ ತೆರಿಗೆ ಜಿಎಸ್‍ಟಿಯನ್ನು ಜುಲೈ 1ರಿಂದಲೇ ಜಾರಿಗೊಳಿಸಲು ತುದಿಗಾಲಲ್ಲಿ ನಿಂತಿರುವ ಕೇಂದ್ರ ಸರ್ಕಾರ ಗುರುವಾರ ಬಹುತೇಕ ಸರಕುಗಳ ತೆರಿಗೆ ದರವನ್ನು ನಿಗದಿಪಡಿಸಿದೆ.
ಶ್ರೀನಗರದಲ್ಲಿ ಕೇಂದ್ರ ಹಣಕಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಪ್ರತಿನಿಧಿಗಳ ಸಭೆಯಲ್ಲಿ 1,211 ವಸ್ತುಗಳ ಪೈಕಿ 1205ಕ್ಕೆ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಜನ ಸಮಾನ್ಯರ ದಿನ ಬಳಕೆಯ ವಸ್ತುಗಳಿಗೆ ಜಿಎಸ್‍ಟಿಯನ್ನು ಎಷ್ಟು ತೆರಿಗೆ ಎನ್ನುವ ವಿವರವನ್ನು ಇಲ್ಲಿ ನೀಡಲಾಗಿದೆ.
Advertisement
ತೆರಿಗೆ ಇಲ್ಲ ವಸ್ತುಗಳು:
Advertisement
ತಾಜಾ ಮಾಂಸ, ಮೀನು ಕೋಳಿ, ಮೊಟ್ಟೆ, ಹಾಲು, ಮೊಸರು, ನೈಸರ್ಗಿಕ ಜೇನುತುಪ್ಪ, ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಹಿಟ್ಟು, ಬ್ರೆಡ್, ಪ್ರಸಾದ, ಉಪ್ಪು, ಬಿಂದಿ ಮುಂತಾದ ವಸ್ತುಗಳನ್ನು ತೆರಿಗೆಗೆ ವಿಧಿಸಲಾಗುವುದಿಲ್ಲ. ಸಿಂಧೂರ, ಅಂಚೆಚೀಟಿಗಳು, ನ್ಯಾಯಾಂಗ ಪೇಪರ್ ಗಳು, ಮುದ್ರಿತ ಪುಸ್ತಕಗಳು, ಪತ್ರಿಕೆಗಳು, ಬಳೆಗಳು, ಕೈಮಗ್ಗ ಇತ್ಯಾದಿ.
Advertisement
5% ತೆರಿಗೆ:
Advertisement
ಮೀನು ಫಿಲೆಟ್, ಕ್ರೀಮ್, ಕೆನೆ ತೆಗೆದ ಹಾಲಿನ ಪುಡಿ, ಬ್ರಾಂಡ್ ಪನೀರ್, ಫ್ರೀಜ್ ತರಕಾರಿಗಳು, ಕಾಫಿ, ಚಹಾ, ಮಸಾಲೆಗಳು, ಪಿಜ್ಜಾ ಬ್ರೆಡ್, ರಸ್ಕ್, ಸೀಮೆ ಎಣ್ಣೆ, ಕಲ್ಲಿದ್ದಲು, ಔಷಧಿ, ಸ್ಟೆಂಟ್, ಲೈಫ್ ಬೋಟ್ ಇತ್ಯಾದಿ.
12% ತೆರಿಗೆ:
ಘನೀಕೃತ ಮಾಂಸ ಉತ್ಪನ್ನಗಳು, ಬೆಣ್ಣೆ, ಚೀಸ್, ತುಪ್ಪ, ಪ್ಯಾಕ್ ಮಾಡಲಾಗಿರುವ ಒಣಗಿದ ಹಣ್ಣುಗಳು, ಪ್ರಾಣಿಗಳ ಕೊಬ್ಬು, ಹಣ್ಣಿನ ರಸಗಳು, ಆಯುರ್ವೇದಿಕ್ ಔಷಧಿ, ಹಲ್ಲಿನ ಪುಡಿ, ಅಗರಬತ್ತಿ, ಬಣ್ಣದ ಪುಸ್ತಕಗಳು, ಚಿತ್ರ ಪುಸ್ತಕಗಳು, ಛತ್ರಿ, ಹೊಲಿಗೆ ಯಂತ್ರ ಮತ್ತು ಸೆಲ್‍ಫೋನ್ ಗಳು ಇತ್ಯಾದಿ
18% ತೆರಿಗೆ:
ಸಂಸ್ಕರಿತ ಫ್ಲೇವರ್ ಸಕ್ಕರೆ, ಪಾಸ್ಟಾ, ಕಾರ್ನ್ ಫ್ಲೇಕ್ಸ್, ಪ್ಯಾಸ್ಟ್ರಿ ಮತ್ತು ಕೇಕ್ ಗಳು, ಸಂರಕ್ಷಿತ ತರಕಾರಿಗಳು, ಜಾಮ್ ಗಳು, ಸಾಸ್ ಗಳು, ಸೂಪ್ ಗಳು, ಐಸ್ ಕ್ರೀಮ್, ಮಿನರಲ್ ನೀರು, ಅಂಗಾಂಶಗಳು, ಎನ್ವಿಲಪ್, ಟಿಪ್ಪಣಿ ಪುಸ್ತಕಗಳು, ಉಕ್ಕು ಉತ್ಪನ್ನಗಳು, ಕ್ಯಾಮೆರಾ, ಸ್ಪೀಕರ್ ಗಳು, ಮಾನಿಟರ್ ಇತ್ಯಾದಿ.
28% ತೆರಿಗೆ:
ಚ್ಯೂಯಿಂಗ್ ಗಮ್, ಮೊಲಾಸಿಸ್, ಕೋಕಾ ಇಲ್ಲದ ಚಾಕ್ಲೇಟ್, ಪಾನ್ ಮಸಾಲಾ, ಡಿಯೋಡ್ರೆಂಟ್, ಆಫ್ಟರ್ ಶೇವ್, ಶೇವಿಂಗ್ ಕ್ರೀಮ್ ಗಳು, ಕೂದಲ ಶಾಂಪೂ, ಡೈ, ಸನ್ ಸ್ಕ್ರೀನ್, ವಾಲ್ ಪೇಪರ್, ಸೆರಾಮಿಕ್ ಟೈಲ್ಸ್, ವಾಟರ್ ಹೀಟರ್, ಡಿಶ್ ವಾಷರ್, ತೂಕದ ಯಂತ್ರ, ವಾಷಿಂಗ್ ಮೆಷಿನ್, ಎಟಿಎಂ, ವಿತರಣಾ ಯಂತ್ರಗಳು, ವ್ಯಾಕ್ಯೂಮ್ ಕ್ಲೀನರ್, ಷೇವರ್ಸ್, ಕೂದಲ ಕ್ಲಿಪ್ ಗಳು, ಆಟೋಮೊಬೈಲ್ಸ್, ಮೋಟರ್ ಸೈಕಲ್ ಗಳು, ವೈಯಕ್ತಿಕ ಬಳಕೆಯ ವಿಮಾನ, ಯಾಚ್ ಸವಾರಿ ಇತ್ಯಾದಿ.