ಸಿನಿಮಾ ಸೋಲಿಗೆ ಪನ್ನಿರಿಗೆ ಕಟ್ಟುತ್ತಿರುವ ಜಿ.ಎಸ್.ಟಿ ಕಾರಣ: ನಿರ್ದೇಶಕ ಅನುರಾಗ್ ಕಶ್ಯಪ್

Public TV
1 Min Read
anurag kashyap 2

ದೇಶದಲ್ಲಿ ಸಿನಿಮಾ ರಂಗ ಎಂದರೆ, ಅದು ಕೇವಲ ಬಾಲಿವುಡ್ ಎನ್ನುವಂತಿತ್ತು. ಬಿಟೌನ್ ಎಂದೇ ಅದನ್ನು ಬಿಂಬಿಸಲಾಗುತ್ತಿತ್ತು. ಆದರೆ, ಕೊರೋನಾ ನಂತರ ಮಲಗಿದ ಬಾಲಿವುಡ್ ಇನ್ನೂ ಎದ್ದಿಲ್ಲ. ಅದರಲ್ಲೂ ದಕ್ಷಿಣದ ಸಿನಿಮಾಗಳ ಗೆಲುವು ಬಾಲಿವುಡ್ ಅನ್ನು ಮಂಕಾಗಿಸಿದೆ. ರಿಲೀಸ್ ಆದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿವೆ. ಈ ಸೋಲನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಬೇರೆ ರೀತಿಯಲ್ಲೇ ವ್ಯಾಖ್ಯಾನಿಸಿದ್ದಾರೆ.

anurag kashyap 1

ಕೇಂದ್ರ ಸರಕಾರ ಎಲ್ಲದಕ್ಕೂ ಜಿಎಸ್.ಟಿ ತಂದು ಹಲವು ಉದ್ಯಮಗಳನ್ನು ಮುಚ್ಚುವಂತೆ ಮಾಡುತ್ತಿದೆ. ಈಗ ಎಲ್ಲದಕ್ಕೂ ಜಿಎಸ್.ಟಿ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದೆ. ತಿನ್ನುವ ಪನ್ನಿರಿಗೂ ಜಿಎಸ್.ಟಿ ಕಟ್ಟಬೇಕು. ಹಾಗಾಗಿ ಜನರ ಹತ್ತಿರ ದುಡ್ಡಿಲ್ಲ. ಹಣವೇ ಇಲ್ಲದೇ ಅವರು ಸಿನಿಮಾ ನೋಡುವುದಕ್ಕೆ ಬರಲು ಹೇಗೆ ಸಾಧ್ಯ? ಸಹಜವಾಗಿ ಸಿನಿಮಾಗಳು ಸೋಲುತ್ತಿವೆ ಎಂದು ಕಾಲೆಳೆದಿದ್ದಾರೆ ಕಶ್ಯಪ್. ಇದನ್ನೂ ಓದಿ:ರಾಜಮೌಳಿ ಶಿಷ್ಯನಿಂದ ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕೃತಿ ಆಧರಿಸಿದ ಸಿನಿಮಾ

anurag kashyap 3

ನಿರ್ದೇಶಕ ಕಶ್ಯಪ್ ಜಿಎಸ್.ಟಿ ಯಿಂದಾಗಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆನೂ ಹೇಳಿದ್ದಾರೆ. ತನ್ನ ಜನರಿಗೆ ಅವಶ್ಯಕ ವಸ್ತುಗಳನ್ನು ಉಚಿತವಾಗಿ ಕೊಡುವುದು ಒಳ್ಳೆಯ ಸರಕಾರ. ಆದರೆ, ಏನೋ ಕಷ್ಟಪಟ್ಟು ಬದುಕು ಕಟ್ಟಿಕೊಂಡು ಜೀವನ ಸಾಗಿಸಬೇಕೆಂದರೆ, ಅದಕ್ಕೂ ಜಿಎಸ್ಟಿ ಹಾಕಿ ಜನರ ನೆಮ್ಮದಿ ಹಾಳು ಮಾಡುತ್ತಿದ್ದಾರೆ ಎಂದು ಕೇಂದ್ರ ಸರಕಾರದ ನಡೆಯನ್ನು ಟೀಕಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article