ನವದೆಹಲಿ: ನಿತ್ಯ ಅಗತ್ಯದ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆಯಿಂದ ದೇಶದಲ್ಲಿ ಹಣದುಬ್ಬರ ಇನ್ನಷ್ಟು ಹೆಚ್ಚುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್, ಇದನ್ನು ಕೂಡ್ಲೇ ಹಿಂಪಡೆಯುವಂತೆ ಆಗ್ರಹಿಸಿ ಸಂಸತ್‍ನ ಒಳಗೆ-ಹೊರಗೆ ಭಾರೀ ಪ್ರತಿಭಟನೆ ನಡೆಸುತ್ತಿದೆ. ಇದು ಕ್ರೂರ ತೆರಿಗೆ ಎಂದಿದೆ. ಹೀಗಾಗಿ ಇಂದಿನ ಕಲಾಪವೂ ಯಾವುದೇ ಚರ್ಚೆ ಇಲ್ಲದೇ ಮುಂದೂಡಲ್ಪಟ್ಟಿದೆ.
Advertisement
ಸಂಸತ್ ಆವರಣದಲ್ಲಿ, ಬೆಂಗಳೂರು ಸೇರಿ ದೇಶದ ಹಲವೆಡೆ ವಿಪಕ್ಷಗಳು ಸತತ ಎರಡನೇ ದಿನವೂ ಪ್ರತಿಭಟನೆ ನಡೆಸಿವೆ. ಇನ್ನು, ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಎಲ್ಲಾ ರಾಜ್ಯಗಳು ಸರ್ವಾನುಮತದ ನಿರ್ಧಾರದ ಮೇಲೆ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆಗೆ ಕೇಂದ್ರ ಒಪ್ಪಿಗೆ ಸೂಚಿಸಿತ್ತು ಎಂಬ ವಿತ್ತ ಸಚಿವೆ ಮಾತಿಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದ್ದನ್ನು ನೆನಪಿಸಿದೆ. ಅಲ್ಲದೇ ಸ್ಮಶಾನಗಳಿಗೆ ಶೇಕಡಾ 18ರಷ್ಟು ಜಿಎಸ್‍ಟಿ ವಿಧಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದನ್ನೂ ಓದಿ: ಈ ಪ್ರಕರಣದಿಂದ ಮುಕ್ತನಾಗಿ ಬರುತ್ತೇನೆ ಎಂದು ಮೊದಲೇ ಗೊತ್ತಿತ್ತು: ಪತ್ನಿ, ಪುತ್ರನಿಗೆ ಸಿಹಿ ತಿನ್ನಿಸಿ ಈಶ್ವರಪ್ಪ ಸಂಭ್ರಮ
Advertisement
Advertisement
ಡಿಕೆಶಿ ಅವರಂತೂ ಹೆಣ ಹೂಳೋಕೂ ಜಿಎಸ್‍ಟಿ ಕಟ್ಬೇಕಂತೆ. ಏನ್ರೀ ಇದು ಎಂದು ಪ್ರಶ್ನೆ ಮಾಡಿದ್ರು. ಆದರೆ ಇದು ಸುಳ್ಳು ಸುದ್ದಿ.. ಹೆಣ ಹೂಳೋದಕ್ಕೆ, ಹೆಣ ಸುಡೋದಕ್ಕೆ ಯಾವುದೇ ಜಿಎಸ್‍ಟಿ ವಿಧಿಸಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸ್ಮಶಾನಗಳಲ್ಲಿ ನಡೆಯುವ ಗುತ್ತಿಗೆ ಕಾಮಗಾರಿಗಳಿಗೆ ಶೇಕಡಾ 18ರಷ್ಟು ತೆರಿಗೆ ವಿಧಿಸಲಾಗ್ತಿದೆ ಅಷ್ಟೇ ಎಂದು ಸ್ಪಷ್ಟಪಡಿಸಿದೆ.
Advertisement
ಈ ಮಧ್ಯೆ ಚಿಕ್ಕ ಚಿಕ್ಕ ಅಂಗಡಿಗಳಲ್ಲಿ ಮಾರಲ್ಪಡುವ ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ವಿಧಿಸದಿರುವ ತೀರ್ಮಾನಕ್ಕೆ ಕೇರಳ ಸರ್ಕಾರ ಬಂದಿದೆ. ಇನ್ನು, ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆ ಅರ್ಥವಾಗುತ್ತದೆ. ಅವರು ಜಿಎಸ್‍ಟಿಯನ್ನು ಕಡಿಮೆ ಮಾಡಬಹುದು. ಈ ಶಕ್ತಿ ಪ್ರಧಾನಿ ಅವ್ರಲ್ಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಇತ್ತ ಜಿಎಸ್‍ಟಿಯಿಂದ ರಾಜ್ಯಗಳಿಗೆ ನೀಡ್ತಿದ್ದ ನಷ್ಟ ಪರಿಹಾರದ ಅವಧಿ ವಿಸ್ತರಣೆಗೆ ಒಪ್ಪದ ಕೇಂದ್ರದ ಕ್ರಮವನ್ನು ಸಿಎಂ ಸಮರ್ಥನೆ ಮಾಡಿಕೊಂಡಿದ್ದಾರೆ.