ಬೆಂಗಳೂರು: ಚಲನಚಿತ್ರ ಪ್ರೇಮಿಗಳಿಗೂ ಜಿ.ಎಸ್.ಟಿ ಬಿಸಿ ತಟ್ಟಿದೆ. ಏಕ ದೇಶ, ಏಕ ತೆರಿಗೆ ಜಿ.ಎಸ್.ಟಿ ಜಾರಿಯಾಗಿದ್ದರಿಂದ ಚಿತ್ರಮಂದಿರದ ಟಿಕೆಟ್ ದರ ತುಸು ದುಬಾರಿಯಾಗಲಿದೆ.
ಬೆಂಗಳೂರಿನ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಟಿಕೆಟ್ ಬೆಲೆ ಏರಿಕೆಯಾಗಿದೆ. 80 ರೂಪಾಯಿ ಇದ್ದ ಮಧ್ಯ ತರಗತಿ ಟಿಕೆಟ್ 18 % ಏರಿಕೆ ಯಾಗಿದ್ದು 94 ರೂ.ಗೆ ಏರಿಕೆಯಾಗಿದೆ. ಗಾಂಧಿ ನಗರದ ಸಂತೋಷ್ ಚಿತ್ರಮಂದಿರದಲ್ಲಿ 94 ರೂ. ಟಿಕೆಟ್ ಇದ್ದು, ಈ ಹಿಂದೆ ಬಾಲ್ಕನಿ ಟಿಕೆಟ್ ಗಿದ್ದ 100 ರೂಪಾಯಿ ಈಗ 118 ರೂಪಾಯಿ ಆಗಿದೆ.
Advertisement
ಇದನ್ನೂ ಓದಿ: ಬೇಳೆ ಕಾಳು ಖರೀದಿಸ್ತಿದ್ರೆ ಗಮನಿಸಿ – ಬ್ರ್ಯಾಂಡೆಡ್ ಬೇಳೆ ದರ ಏರಿಕೆ
Advertisement
ಬೆಂಗಳೂರು ನಗರದ ವೀರೇಶ್ ಚಿತ್ರಮಂದಿರದಲ್ಲಿ ಕೇವಲ ಹತ್ತು ರೂಪಾಯಿ ಏರಿಕೆಯಾಗಿದೆ. ಇದೇ ವೇಳೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡೊ ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದೆ. ಜಿ.ಎಸ್.ಟಿ ಜಾರಿಯಾದ ಹಿನ್ನೆಲೆಯಲ್ಲಿ ಟಿಕೆಟ್ ದರ ಕಡಿಮೆ ಮಾಡಿದ್ದಾರೆ. ಪ್ರೇಕ್ಷಕರಿಗೆ ಟ್ಯಾಕ್ಸ್ ಹೊರೆಯಾಗಬಾರದು ಅನ್ನೋ ಕಾರಣಕ್ಕೆ ದರ ಇಳಿಕೆ ಮಾಡಿದ್ದಾರೆ. 100 ರೂಪಾಯಿ ಇದ್ದ ಟಿಕೆಟ್ 90 ರೂಪಾಯಿ ಹಾಗೂ 120 ರೂಪಾಯಿ ಇದ್ದ ಟಿಕೆಟ್ 100 ರೂಪಾಯಿಗೆ ಇಳಿಕೆಯಾಗಿದೆ. ನೀವು ಖರೀದಿಸುವ 90 ರೂ. ಟಿಕೆಟ್ ಗೆ ನೀವು 13.74 ರೂ. ಟ್ಯಾಕ್ಸ್ ಪಾವತಿಸಬೇಕಾಗುತ್ತದೆ.
Advertisement
ಇದನ್ನೂ ಓದಿ: ಟೀ, ಕಾಫಿ, ತಿಂಡಿ ತಿನ್ನೋಕೆ ಹೋಗ್ತಿದೀರಾ..? ನಿಮಗೆ ಕೊಡೋ ಬಿಲ್ ಗಳಲ್ಲಿ ಈ ಬದಲಾವಣೆ ಗಮನಿಸಿ!
Advertisement
ಮಲ್ಟಿಪ್ಲೆಕ್ಸ್ ಗಳಲ್ಲೂ ಸಿನೆಮಾ ಟಿಕೆಟ್ ದರ ಏರಿಕೆಯಾಗಲಿದೆ. ಆನ್‍ಲೈನಲ್ಲಿ ಬುಕಿಂಗ್ ಮಾಡುವುದಾದರೆ ಇನ್ನು ಮುಂದೆ ನೀವು ಟಿಕೆಟ್ ಗೆ 3% ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
ಈ ಹಿಂದೆ ನೀವು ಪ್ರತಿ ಟಿಕೆಟ್ ಗೆ ಸರ್ವೀಸ್ ಟ್ಯಾಕ್ಸ್ – 14%, ಸ್ವಚ್ಛ ಭಾರತ ಸೆಸ್ 0.50%, ಕೃಷಿ ಕಲ್ಯಾಣ ಸೆಸ್ 0.50% ಪಾವತಿಸುತ್ತಿದ್ದಿರಿ. ಆದರೆ ಜಿ.ಎಸ್.ಟಿ ಜಾರಿಯಾದ ಹಿನ್ನೆಲೆಯಲ್ಲಿ ಇಂಟಗ್ರೇಟೆಡ್ ಜಿ.ಎಸ್.ಟಿ (ಐ.ಜಿ.ಎಸ್.ಟಿ) ಒಟ್ಟು 18% ಪಾವತಿಸಬೇಕಾಗುತ್ತದೆ. ಇದೇ ಟಿಕೆಟನ್ನು ನೀವು ಕೌಂಟರ್ ನಲ್ಲೇ ಖರೀದಿಸಿದರೆ ಎಸ್.ಜಿ.ಎಸ್.ಟಿ ಹಾಗೂ ಸಿ.ಜಿ.ಎಸ್.ಟಿ ಸೇರಿಸಿ ನೀವು 18% ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಜಿಎಸ್‍ಟಿಯಿಂದ ಯಾವ್ಯಾವ ವಸ್ತುಗಳು ದುಬಾರಿಯಾಗಲಿವೆ? ಇಲ್ಲಿದೆ ಪೂರ್ಣ ಮಾಹಿತಿ