ಬೆಂಗಳೂರು: ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿನಿಂದ ಅಕ್ಕಿ ದರ ಗಗನಕ್ಕೇರಲಿದೆ ಎಂದು ಹೇಳಲಾಗಿದೆ.
ಶೇ. 6 ರಿಂದ 7ರಷ್ಟು ಜಿಎಸ್‍ಟಿ ಬರೆ ಬಿದ್ದಿದ್ದು, ಇದ್ರಿಂದ ಕೆಜಿ ಅಕ್ಕಿಗೆ ಬರೋಬ್ಬರಿ ಏಳರಿಂದ ಹತ್ತು ರೂಪಾಯಿ ಚಿಲ್ಲರೆ ಮಾರುಕಟ್ಟೆಯಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಅಕ್ಕಿಯಂಗಡಿ ಮಾಲೀಕರು ಹಾಗೂ ವ್ಯಾಪಾರಿಗಳು ಗರಂ ಆಗಿದ್ದಾರೆ.
Advertisement
Advertisement
ಮಿಲ್ಲರ್ಸ್ ಗಳಲ್ಲಿ ನೀಡುವಾಗ ಇದು ಮೂರರಿಂದ ನಾಲ್ಕು ರೂಪಾಯಿ ಇನ್ನೂ ಹೆಚ್ಚಳವಾಗುತ್ತದೆ. ಮತ್ತೆ ಆ ಅಕ್ಕಿ ಗ್ರಾಹಕನ ಕೈ ಸೇರುವಾಗ ಹತ್ತು ರೂಪಾಯಿ ಗೆ ಏರಿಕೆಯಾಗಲಿದೆ. ಇದ್ರಿಂದ ಮೋದಿಗೆ ಜಿಎಸ್‍ಟಿಯಿಂದ ಅಕ್ಕಿಯನ್ನು ಕೈ ಬಿಡುವಂತೆ ಪತ್ರ ಬರೆಯಲು ಅಕ್ಕಿ ವ್ಯಾಪಾರಿಗಳು ನಿರ್ಧರಿಸಿದ್ದಾರೆ.
Advertisement
ಒಂದು ವೇಳೆ ಜಿಎಸ್‍ಟಿಯಿಂದ ಅಕ್ಕಿಯನ್ನು ಕೈಬಿಡದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಎಪಿಎಂಸಿ ನೌಕರರ ಸಂಘ ಹಾಗು ಅಕ್ಕಿ ವ್ಯಾಪಾರಿ ಪರಮೇಶ್ ಹೇಳಿಕೆ ನೀಡಿದ್ದಾರೆ.