ನವದೆಹಲಿ: ಕೆಲವು ಕ್ಯಾನ್ಸರ್ ಔಷಧಿಗಳ (Cancer Drugs) ದರವನ್ನು ಕಡಿಮೆ ಮಾಡಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಸೋಮವಾರ ಹೇಳಿದ್ದಾರೆ.
ನವೆಂಬರ್‌ನಲ್ಲಿ ನಡೆಯಲಿರುವ ಮುಂದಿನ ಸಭೆಯಲ್ಲಿ ವೈದ್ಯಕೀಯ ಆರೋಗ್ಯ ವಿಮೆಯ ಮೇಲಿನ ದರ ಕಡಿತದ ಕುರಿತು ಕೌನ್ಸಿಲ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: Su-30 MKI ಜೆಟ್ ಎಂಜಿನ್ ತಯಾರಿಕೆಗೆ ಹೆಚ್‌ಎಎಲ್‌ನೊಂದಿಗೆ ಡೀಲ್ – 26,000 ಕೋಟಿ ಒಪ್ಪಂದಕ್ಕೆ ಸಹಿ!
Advertisement
Advertisement
ಸೋಮವಾರ ನಡೆದ ಜಿಎಸ್‌ಟಿ ಕೌನ್ಸಿಲ್‌ನ 54 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೀತಾರಾಮನ್, ಕೆಲವು ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇ.12 ರಿಂದ ಶೇ.5 ಕ್ಕೆ ಇಳಿಸಲಾಗಿದೆ ಎಂದು ಹೇಳಿದರು. ಕೌನ್ಸಿಲ್ ಸಹ ನಮ್ಕೀನ್ ಮೇಲಿನ ದರವನ್ನು ಶೇ.18 ರಿಂದ ಶೇ.12 ಕ್ಕೆ ಇಳಿಸಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ.
Advertisement
Advertisement
ಕಳೆದ ಆರು ತಿಂಗಳಲ್ಲಿ ಆನ್‌ಲೈನ್ ಗೇಮಿಂಗ್‌ನಿಂದ ಗಳಿಸಿದ ಆದಾಯವು ಶೇ.412 ರಷ್ಟು ಹೆಚ್ಚಾಗಿದೆ. ಆನ್‌ಲೈನ್ ಗೇಮಿಂಗ್‌ನಿಂದ ಆದಾಯವು ಆರು ತಿಂಗಳಲ್ಲಿ 6,909 ಕೋಟಿ ರೂ.ಗೆ ಹೆಚ್ಚಾಗಿದೆ. ಇದಲ್ಲದೇ, ಕಳೆದ ಆರು ತಿಂಗಳಲ್ಲಿ ಕ್ಯಾಸಿನೊಗಳ ಆದಾಯವು ಶೇ.34 ರಷ್ಟು ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ದೃಢ; ಎಲ್ಲ ರಾಜ್ಯಗಳ ಆಸ್ಪತ್ರೆಗಳಲ್ಲಿ ಐಸೋಲೇಷನ್ ಸೌಲಭ್ಯ ಸಿದ್ಧತೆಗೆ ಕೇಂದ್ರ ಸೂಚನೆ