ನವದೆಹಲಿ: 2022ನೇ ಸಾಲಿನ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಸಂಗ್ರಹವು ನೂತನ ದಾಖಲೆ ಬರೆದಿದೆ. ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 1,67,540 ಕೋಟಿ ರೂ. ಜಿಎಸ್‍ಟಿ ಸಂಗ್ರಹವಾಗಿದೆ.
Advertisement
ಈ ಮೂಲಕ ಜಿಎಸ್‍ಟಿ ತೆರಿಗೆ ಸಂಗ್ರಹವು ಕಳೆದ ಐದು ವರ್ಷಗಳಲ್ಲಿ ಮೊದಲ ಬಾರಿಗೆ 1.5 ಲಕ್ಷ ಕೋಟಿ ರೂ. ದಾಟಿ ನೂತನ ದಾಖಲೆ ಬರೆದಿದೆ. ಅಲ್ಲದೆ ಕಳೆದ ವರ್ಷದ ಏಪ್ರಿಲ್ ತಿಂಗಳಿಗಿಂತ ಶೇ.20 ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಲಿಫ್ಟ್‌ನಲ್ಲಿ ಹೋಗುವುದೆಂದರೆ ನನಗೆ ಭಯ: ಅಜಯ್ ದೇವಗನ್
Advertisement
Advertisement
ಏಪ್ರಿಲ್ 2022ರಲ್ಲಿ ಜಿಎಸ್‍ಟಿ ಆದಾಯವು ಒಟ್ಟು 1,67,540 ಕೋಟಿ ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್ ಟಿ 33,159 ಕೋಟಿ ರೂಪಾಯಿ, ಎಸ್‍ಜಿಎಸ್ ಟಿ 41,793 ಕೋಟಿ ರೂಪಾಯಿ, ಐಜಿಎಸ್‍ಟಿ 81,939 ಮತ್ತು ಮತ್ತು ಪರಿಹಾರ ಸೆಸ್ 10,649 ಕೋಟಿ ಆಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ. ಕಳೆದ ಮಾರ್ಚ್‍ನಲ್ಲಿ 1,42,095 ಕೋಟಿ ರೂ. ಸಂಗ್ರಹವಾಗಿ ಈ ಹಿಂದಿನ ದಾಖಲೆ ನಿರ್ಮಿಸಿತ್ತು. ಇದೀಗ ಇನ್ನಷ್ಟು ಏರಿಕೆ ಕಂಡು ಏಪ್ರಿಲ್‍ನಲ್ಲಿ ಅತಿ ಹೆಚ್ಚು ಜಿಎಸ್‍ಟಿ ಸಂಗ್ರಹವಾಗಿದೆ. ಇದನ್ನೂ ಓದಿ: ಶವರ್ಮ ತಿಂದು 16 ವರ್ಷದ ವಿದ್ಯಾರ್ಥಿನಿ ಸಾವು, 18 ಮಂದಿ ಅಸ್ವಸ್ಥ
Advertisement
GST Revenue collection for April 2022 highest ever at Rs 1.68 lakh crore
Gross GST collection in April 2022 is all time high, Rs 25,000 crore more that the next highest collection of Rs. 1,42,095 crore, just last month
Read more ➡️ https://t.co/rXElYMTUSB pic.twitter.com/lTbjqa3wvz
— Ministry of Finance (@FinMinIndia) May 1, 2022
ಏಪ್ರಿಲ್ ತಿಂಗಳ ಆದಾಯಗಳು ಕಳೆದ ವರ್ಷ ಇದೇ ತಿಂಗಳಿನ ಜಿಎಸ್‍ಟಿನ ಆದಾಯಕ್ಕೆ ಹೋಲಿಕೆ ಮಾಡಿದರೆ ಈ ತಿಂಗಳಲ್ಲಿ ಆಮದು ಸರಕುಗಳಿಂದ ಬರುವ ಆದಾಯವು ಶೇ 30ರಷ್ಟು ಅಧಿಕ ಮತ್ತು ಆಂತರಿಕ ವಹಿವಾಟುಗಳಿಂದ ಬಂದ ಆದಾಯವು ಶೇ 17ರಷ್ಟು ಹೆಚ್ಚಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ರಾಜ್ಯಗಳ ಪೈಕಿ ಮಹರಾಷ್ಟ್ರದಲ್ಲಿ 27,495 ಕೋಟಿ ರೂ. ಮತ್ತು ಕರ್ನಾಟಕದಲ್ಲಿ 11,820 ಕೋಟಿ ರೂ. ಜಿಎಸ್‌ಟಿ ಸಂಗ್ರವಾಗಿ ಜಿಎಸ್‌ಟಿ ತೆರಿಗೆ ಸಂಗ್ರಹದಲ್ಲಿ ಮತ್ತಷ್ಟು ಏರಿಕೆ ಕಂಡಿದೆ.