– ದೇವಿಗೆ 59 ತಿಂಗಳ 1,18,000 ರೂ. ಹಣ ಅರ್ಪಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮೈಸೂರು: ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮಾಸಿಕ 2 ಸಾವಿರ ರೂ. ಕೊಡುಗೆಯ ಹಣವನ್ನು ಪ್ರತಿ ತಿಂಗಳು ಮೊದಲು ನಾಡದೇವಿ ತಾಯಿ ಚಾಮುಂಡೇಶ್ವರಿಗೆ (Chamundeshwari) ಅರ್ಪಿಸಿ ನಂತರ ಫಲಾನುಭವಿಗಳಿಗೆ ನೀಡುವ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
Advertisement
ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ಹಿನ್ನೆಲೆಯಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಪ್ರತಿ ತಿಂಗಳ 2 ಸಾವಿರ ರೂ.ನಂತೆ ಒಟ್ಟು 59 ತಿಂಗಳಿಗೆ 1,18,000 ರೂ. ಹಣವನ್ನು ಅರ್ಪಿಸಲಾಗಿದೆ. ಇದನ್ನೂ ಓದಿ: 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ
Advertisement
Advertisement
ಈ ಸಂಬಂಧ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ (D.K.Shivakumar) ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದಿದ್ದರು. ಈ ಬಗ್ಗೆ ಕ್ರಮ ವಹಿಸುವಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಡಿ.ಕೆ.ಶಿವಕುಮಾರ್ ಸೂಚಿಸಿದ್ದರು. ಇದೀಗ ಪ್ರತಿ ತಿಂಗಳು ಯೋಜನೆಯ ಹಣ ನಾಡದೇವತೆಗೆ ತಲುಪಿಸಲು ವ್ಯವಸ್ಥೆ ಆಗಿದೆ. 59 ತಿಂಗಳ ಹಣವನ್ನು ತಾಯಿ ಚಾಮುಂಡೇಶ್ವರಿ ದೇಗುಲಕ್ಕೆ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಸಂದಾಯ ಮಾಡಿದ್ದಾರೆ.
Advertisement
ಒಟ್ಟು 1,18,000 ರೂಪಾಯಿ ಹಣ ದೇಗುಲಕ್ಕೆ ನೀಡಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ ಹಣ ಸಂದಾಯ ಮಾಡಲಾಗಿದೆ. ತಮ್ಮ ವೈಯಕ್ತಿಕ ಹಣವನ್ನು ತಾಯಿ ಚಾಮುಂಡೇಶ್ವರಿಗೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅರ್ಪಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಯಂತೆ ನಾಗೇಂದ್ರ ಮೇಲಿನ ಕೇಸ್ ಹಿಂಪಡೆಯಲಿ – ಸರ್ಕಾರಕ್ಕೆ ರೆಡ್ಡಿ ಆಗ್ರಹ