ರಾಮನಗರ: ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣ ಕೊಟ್ಟರೆ ನಾವು ಗೃಹಲಕ್ಷ್ಮಿ (Gruhalakshmi Scheme) ಹಣವನ್ನು 2 ಸಾವಿರ ಅಲ್ಲ, 4 ಸಾವಿರ ರೂ. ಕೊಡಬಹುದು ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ಮಾಗಡಿಯಲ್ಲಿ ನಡೆದ ಗ್ಯಾರಂಟಿ (Congress Gurantee) ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಇಲ್ಲ ಅಂತ ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ಸರ್ಕಾರ ದಿವಾಳಿಯಾಗಿದೆ ಅಂತ ಹೇಳ್ತಿದ್ದಾರೆ. ಇದೆಲ್ಲ ಶುದ್ಧ ಸುಳ್ಳು. ನಾವು ಕೇಂದ್ರಕ್ಕೆ ಕೊಡಬೇಕಾದ ತೆರಿಗೆಯನ್ನು ಕೊಡುವುದರ ಜೊತೆಗೆ ಬಡವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದೇವೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗೆ ತಿರುಗೇಟು ನೀಡಿದ್ದಾರೆ.
Advertisement
Advertisement
ಮಹಿಳೆಯರ ಆರ್ಥಿಕ ಅಭಿವೃದ್ಧಿ (Economic Development) ದೇಶದ ಅಭಿವೃದ್ಧಿಗೆ ಪೂರಕ. ಆ ಕೆಲಸವನ್ನ ನಾವು ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ನಮ್ಮ ಪಾಲನ್ನು ಕೊಟ್ಟರೆ ಈಗ ಕೊಡುತ್ತಿರುವ ಗೃಹಲಕ್ಷ್ಮಿ ಹಣವನ್ನು 2 ಸಾವಿರ ಅಲ್ಲ, 4 ಸಾವಿರ ರೂ. ಕೊಡಬಹುದು ಎಂದಿದ್ದಾರೆ. ಇದನ್ನೂ ಓದಿ: ಯಾವನಾದ್ರೂ ಪಾಕ್‍ನಲ್ಲಿ ಹಿಂದೂಸ್ಥಾನ್ ಜಿಂದಾಬಾದ್ ಅಂದಿದ್ರೆ ಅಲ್ಲೇ ಶೂಟ್ ಮಾಡಿ ಹಾಕ್ತಿದ್ರು: ಬಿ.ವೈ ವಿಜಯೇಂದ್ರ
Advertisement
Advertisement
ದೇಶ ವಿಭಜನೆ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಾನು ಕೇಳಿದ್ದು ಕನ್ನಡಿಗರ ಹಣ. ಕರ್ನಾಟಕದ ಬಡವರು, ಕನ್ನಡಿಗರ ಪರವಾಗಿ ನಾನು ದನಿ ಎತ್ತಿದ್ದೇನೆ. ರಾಜ್ಯದಿಂದ 4.30 ಲಕ್ಷ ಕೋಟಿ ಹಣ ತೆರಿಗೆ ಕಟ್ಟುತ್ತಿದ್ದೇವೆ. ಆದ್ರೆ ಅವರು ನಮಗೆ ಕೊಡುತ್ತಿರುವುದು ಕೇವಲ 13 ಪರ್ಸೆಂಟ್. ಇದು ಕರ್ನಾಟಕಕ್ಕೆ ಆದ ಅನ್ಯಾಯ ಅಲ್ಲವೇ? ನಾವು 58 ಸಾವಿರ ಕೋಟಿ ರೂ.ಗಳನ್ನ ಬಡವರಿಗೆ ಕೊಟ್ಟರೆ ಬಾಯಿ ಬಡಿದುಕೊಳ್ತಾರೆ, ಆದ್ರೆ ನಮ್ಮ ಹಣವನ್ನ ಉತ್ತರ ಪ್ರದೇಶಕ್ಕೆ ಕೊಡ್ತಾರೆ. ಇದು ಸರಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: 250ಕ್ಕೂ ಹೆಚ್ಚು ಮಂದಿಗೆ ವಂಚನೆ – ಗುಜರಾತ್, ಯುಪಿಯಲ್ಲೂ ಮ್ಯಾಟ್ರಿಮೋನಿ ವರನ ಪಾರುಪತ್ಯ ಅಷ್ಟಿಷ್ಟಲ್ಲ