ಬೆಂಗಳೂರು: ಗೃಹಲಕ್ಷ್ಮೀ (Grhalakshmi) ಫಲಾನುಭವಿಗಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ಆರಂಭಿಸಿದೆ.
ಗೃಹಲಕ್ಷ್ಮೀ ಸಂಘ ಬದಲಾಗಿ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ (Gruha Lakshmi Multipurpose Cooperative Society) ರಚನೆ ಮಾಡಲಾಗಿದೆ. ರಾಜ್ಯಾದ್ಯಂತ ಒಂದೇ ಸೊಸೈಟಿ ಇರಲಿ ಎಂಬ ಕಾರಣಕ್ಕೆ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ಎಂದು ಹೆಸರನ್ನು ಇಡಲಾಗಿದೆ.
ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಇದುವರೆಗೂ 2 ಸಾವಿರ ಗೃಹಲಕ್ಷ್ಮೀ ಫಲಾನುಭವಿಗಳು ಸದಸ್ಯತ್ವವನ್ನ ಪಡೆದುಕೊಂಡಿದ್ದಾರೆ. 2 ಸಾವಿರ ಗೃಹಲಕ್ಷ್ಮೀ ಮಹಿಳೆಯರು ಸದಸ್ಯತ್ವ ಪಡೆದಿರುವುದು ಪಬ್ಲಿಕ್ ಟಿವಿಗೆ ಮಾಹಿತಿ ಸಿಕ್ಕಿದೆ.
1.28 ಕೋಟಿ ಗೃಹಲಕ್ಷ್ಮೀ ಫಲಾನುಭವಿಗಳನ್ನ ಸದಸ್ಯರನ್ನಾಗಿ ಮಾಡಿಕೊಳ್ಳಲು ಗುರಿ ಇಡಲಾಗಿದೆ. ಸಹಕಾರಿ ಸಂಘ ಈಗಷ್ಟೇ ರಚನೆ ಆಗಿದ್ದು ಆರು ತಿಂಗಳ ಬಳಿಕ ಫಲಾನುಭವಿಗಳಿಗೆ ಸಹಕಾರಿ ಸಂಘದಿಂದ ಸಾಲ ನೀಡಲಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಲು ಸಹಕಾರಿ ಸಂಘದ ಗುರಿ ಹಾಕಲಾಗಿದೆ. ಇದನ್ನೂ ಓದಿ: 6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣ ಹೋಯ್ತು – ಅಂತ್ಯಕ್ರಿಯೆ ವೇಳೆ ಉಸಿರಾಡಿ, ಕಣ್ತೆರೆದ 38ರ ವ್ಯಕ್ತಿ
ಗೃಹಲಕ್ಷ್ಮೀ ಸಹಕಾರಿ ಸಂಘ
– ಪ್ರತಿ ಸದಸ್ಯೆ 1 ಬಾರಿ 1,250 ರೂಪಾಯಿ ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು.
– 1250 ರೂಪಾಯಿಯಲ್ಲಿ 1 ಸಾವಿರ ಡೆಪಾಸಿಟ್ ಅಂತ ಪರಿಗಣನೆ
– 100 ರೂಪಾಯಿ ಪ್ರವೇಶ ಶುಲ್ಕ, 150 ರೂಪಾಯಿ ನೋಂದಣಿ ಶುಲ್ಕ
– ಒಂದು ಬಾರಿ 1250 ರೂಪಾಯಿ ಕಟ್ಟಿದ್ದರೆ ಸಾಕು ಪ್ರತಿ ತಿಂಗಳು ಅಮೌಂಟ್ ಕಟ್ಟುವಂತಿಲ್ಲ
– ಅಂಗನವಾಡಿ ಕಾರ್ಯಕರ್ತೆಯರು ಗೃಹಲಕ್ಷ್ಮೀ ಫಲಾನುಭವಿಗಳ ಸದಸ್ಯತ್ವ ಮಾಡಿಸಿಕೊಳ್ಳುತ್ತಿದ್ದಾರೆ
– ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಗಳಿಂದ ಸದಸ್ಯತ್ವ ಮಾಡಿಸಿಕೊಳ್ಳಲು ಗುರಿ
– ಸದಸ್ಯತ್ವ ಮಾಡಿಸಿಕೊಳ್ಳಲು ಆನ್‌ಲೈನ್ ವ್ಯವಸ್ಥೆ ಜಾರಿ ಮಾಡಲು ಚಿಂತನೆ

