ರಾಮನಗರ: ಚನ್ನಪಟ್ಟಣ ತಾಲೂಕಿನ ಹೊಂಗನೂರು ಗ್ರಾಮದ ಬಳಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಕಾಡಾನೆಗಳ ಹಿಂಡು ಬಂದಿವೆ.
ಐದು ಕಾಡಾನೆಗಳ ಹಿಂಡು ಸಾಯಂಕಾಲದ ವೇಳೆಗೆ ಹೊಂಗನೂರು ಕೆರೆಯ ಬಳಿ ಕಾಣಿಸಿಕೊಂಡಿವೆ. ಅಲ್ಲದೇ ಸುಮಾರು ಅರ್ಧ ಗಂಟೆಯ ಕಾಲ ಕೆರೆಯ ನೀರಿನಲ್ಲಿ ಜಲಕ್ರೀಡೆಯಾಡಿವೆ.
Advertisement
Advertisement
ನಗರ ಪ್ರದೇಶದಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಹೊಂಗನೂರು ಕೆರೆಗೆ ಆನೆಗಳ ಹಿಂಡು ಆಗಮಿಸಿದ್ದರಿಂದ ಇದೀಗ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಆನೆಗಳನ್ನು ಕಾಡಿಗೆ ಅಟ್ಟುವ ತನಕ ಮನೆಯಿಂದ ಜನರು ಹೊರಬರದಂತೆ ಚನ್ನಪಟ್ಟಣ ವಲಯ ಅರಣ್ಯಾಧಿಕಾರಿಗಳು ತಾಕೀತು ಮಾಡಿದ್ದಾರೆ. ಇದನ್ನೂ ಓದಿ: ನಾಡಿಗೆ ಬಂದ ಕಾಡಾನೆಗಳ ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಬಳಸಿದ ಅರಣ್ಯ ಇಲಾಖೆ
Advertisement
ಸದ್ಯಕ್ಕೆ ಹೊಂಗನೂರು ಕೆರೆಯ ಸಮೀಪವಿರುವ ಜಾಲಿಮರದ ದಟ್ಟ ಪೊದೆಗಳ ನಡುವೆ ಆನೆ ಹಿಂಡು ಬೀಡುಬಿಟ್ಟಿವೆ. ತೆಂಗಿನಕಲ್ಲು ಇಲ್ಲವೆ ಕಬ್ಬಾಳು ಅರಣ್ಯ ಪ್ರದೇಶದಿಂದ ಆನೆಗಳು ಬಂದಿವೆ. ಆನೆಗಳ ಚಲನವಲನ ನೋಡಿ ಕಬ್ಬಾಳು ಇಲ್ಲವೇ ತೆಂಗಿನ ಕಲ್ಲು ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಅಟ್ಟಲು ಅರಣ್ಯ ಇಲಾಖೆ ಹರಸಾಹಸಪಡ್ತಿದೆ.